ಸಾರಾಂಶ
ತಾಲೂಕಿನ ಹಂಗಳ ಗ್ರಾಮದ ಕೊಟ್ಟಿಗೆ ರಾಜಪ್ಪಗೆ ಸೇರಿದ ಹಸು ಕಾಡುಪ್ರಾಣಿಯಿಂದ ದಾಳಿಗೊಳಗಾದಾಗ ಚಿಕಿತ್ಸೆಗೆ ಹಂಗಳ ಪಶು ಅಸ್ಪತ್ರೆ ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದ ಕೊಟ್ಟಿಗೆ ರಾಜಪ್ಪಗೆ ಸೇರಿದ ಹಸು ಕಾಡುಪ್ರಾಣಿಯಿಂದ ದಾಳಿಗೊಳಗಾದಾಗ ಚಿಕಿತ್ಸೆಗೆ ಹಂಗಳ ಪಶು ಅಸ್ಪತ್ರೆ ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಕರೆ ಸ್ವೀಕರಿಸದೆ ಅಸ್ಪತ್ರೆಗೆ ತೆರಳಿ ಕೇಳಿದಾಗ ಪೋನ್ ರಿಸಿವ್ ಮಾಡಲ್ಲ ನನ್ನಿಷ್ಟ ನೀವು ಯಾರು ಕೇಳುವುದಕ್ಕೆ ಎಂದು ಬಾಯಿಗೆ ಬಂದಂತೆ ವರ್ತಿಸಿದ್ದು, ಸುತ್ತಮುತ್ತ ಪಶು ವೈದ್ಯರು ಯಾರು ಇಲ್ಲ ಹಾಗಾಗಿ ನನ್ನನ್ನು ಯಾರು ಏನು ಮಾಡಲು ಅಗಲ್ಲ ಎಂದು ವರ್ತಿಸಿದ್ದಾರೆ ಎಂದರು. ಕೂಡಲೇ ಪಶುವೈದ್ಯರನ್ನು ವರ್ಗಾವಣೆ ಮಾಡಿ ಬೇರೆ ಪಶು ವೈದ್ಯರನ್ನು ನೇಮಿಸುವಂತೆ ಗುಂಡ್ಲುಪೇಟೆ ಮುಖ್ಯ ಪಶು ವೈದ್ಯಾಧಿಕಾರಿ ಹಾಗು ಉಪ ನಿರ್ದೇಶಕರಿಗೆ ಮೌಖಿಕವಾಗಿ ಹೇಳಿದ್ದೇನೆ ಎಂದಿದ್ದಾರೆ.