ಸಾರಾಂಶ
ಕನ್ನಡಪ್ರಭ ವಾರ್ತೆ ಜೇವರ್ಗಿ
ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ಪ್ರದೇಶ ಕುರುಬ ಸಮಾಜದಿಂದ ಪಟ್ಟಣದಲ್ಲಿ ಕುರಿಗಳೊಂದಿಗೆ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿ ಕೇಂದ್ರ ಸರ್ಕಾರಕ್ಕೆ ಒತ್ತತಾಯಿಸಿ ಮನವಿ ಸಲ್ಲಿಸಿದರು.ಪಟ್ಟಣದ ರಿಲಯನ್ಸ್ ಬಂಕ್‌ನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ರಾಷ್ಟ್ರಿಯ ಹೆದ್ದಾರಿ ಮೇಲಿರುವ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಬಂದ್ ಮಾಡಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕುರುಬ ಸಮಾಜದ ಹಿರಿಯ ಮುಖಂಡ ಬೈಲಪ್ಪ ನೆಲೋಗಿ ಹಾಗೂ ಸಮಾಜದ ತಾಲೂಕು ಅಧ್ಯಕ್ಷ ಸಾಯಿಬಣ್ಣ ದೊಡ್ಡಮನಿ ಮಾತನಾಡಿದರು. ಕುರುಬ ಜಾತಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ೧೯೯೬ರಿಂದ ಹೋರಾಟ ನಡೆಯುತ್ತಿದೆ. ಕೇದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ. ಮೀಸಲಾತಿ ಹೊಸದಾಗಿ ಕೇಳುತ್ತಿಲ್ಲ. ಕೆಲಸ ಮಾಡದವರನ್ನು ಅಧಿಕಾರದಿಂದ ಇಳಿಸುವುದು ಕುರುಬರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾಲ್ಕುಬಾರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನದ ವರದಿ ಕಳುಹಿಸಿದ್ದರೂ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಸಂಸದರು, ಮಾಜಿ ಶಾಸಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಡುವಂತ ಗೋಜಿಗೆ ಹೋಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಸಮಾಜಕ್ಕೆ ಎಸ್‌ಟಿ ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗೊಂಡ ಪರ್ಯಾಯ ಪದವಾಗಿ ಕುರುಬ ಪರಿಗಣಿಸಿ ಕುರುಬ ಜಾತಿಗೆ ಪರಿಶಿಷ್ಟ ಪಂಗಡ ಸೌಲಭ್ಯ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕಾಗಿನೆಲೆ ಕನಕ ಗುರು ಪೀಠದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮೀಜಿ, ತಿಂಥಣಿ ಕನಕ ಗುರು ಪೀಠದ ಶ್ರೀ ಲಿಂಗಣ್ಣ ಶರಣ, ಕಲ್ಲೂರಿನ ಶ್ರೀ ದೊಡ್ಡಪ್ಪ ಒಡೆಯರ್, ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯಗೌಡ ಪಾಟೀಲ್ ಅಂಕಲಗಿ, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಧರ್ಮಣ್ಣ ದೊಡಮನಿ, ನಿಂಗಣ್ಣ ಭಂಡಾರಿ, ತಿಪ್ಪಣ್ಣ ಗುಂಡಗುರ್ತಿ, ಮಲ್ಲಿಕಾರ್ಜುನ ಕುಳಗೇರಿ, ಮಹಾಂತೇಶ ಕವಲಗಿ, ಮಲ್ಲಿಕಾರ್ಜುನ ತಾಳಿಕೊಟಿ, ಶಿವಪುತ್ರಪ್ಪ ಆಡೀನ್, ನಿಂಗಣ್ಣ ರದ್ದೆವಾಡಗಿ, ರಾಜಶೇಖರ ಮುತ್ತಕೋಡ, ಚಂದ್ರಶೇಖರ ನೇರಡಗಿ, ಶರಣಗೌಡ ಸರಡಗಿ, ದತ್ತಪ್ಪ ರಂಜಣಗಿ, ಸಂತೋಷÀ ಮಲ್ಲಾಬಾದ, ಯುವ ಘಟಕದ ಅಧ್ಯಕ್ಷ ಸಿದ್ದು ಗಜ, ಸಂತೋಷ ಗುಡೂರ, ಭಂಗಾರಪ್ಪ ಆಡಿನ ಕೋಳಕೂರ, ಮಾಳು ಹಿಪ್ಪರಗಿ, ರಾಜೇಶ್ವರಿ, ಲಿಂಗರಾಜ ಮಾಸ್ತರ್, ಸುರೇಶ ಬಿರಾದಾರ, ರಮೇಶ ರೇವನೂರ, ರಮೇಶ ಸಿದ್ನಾಳ ಸೇರಿದಂತೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಕುರುಬ ಸಮಾಜದ ಸಾವಿರಾರು ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))