ಸಮರ್ಪಕ ವಿದ್ಯುತ್‌ ವ್ಯವಸ್ಥೆಗೆ ಆಗ್ರಹ

| Published : Jul 12 2024, 01:30 AM IST

ಸಾರಾಂಶ

ಮಳೆಗಾಲದ ಪ್ರಾರಂಭದಲ್ಲಿ ವಿದ್ಯುತ್ ಸರಿಯಾಗಿ ಕೊಡಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳದಿರುವುದು ಇಲಾಖೆಯ ನಿಷ್ಕಾಳಜಿಯನ್ನು ತೋರಿಸುತ್ತದೆ. ಕೂಡಲೇ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ ಎಂದು ಆಗ್ರಹಿಸಲಾಯಿತು.

ಯಲ್ಲಾಪುರ: ಕಳೆದ ಒಂದು ತಿಂಗಳಿಂದ ಕಂಪ್ಲಿ ಮತ್ತು ಹಾಸಣಗಿ ವ್ಯಾಪ್ತಿಯಲ್ಲಿ ತೀರಾ ವಿದ್ಯುತ ಅವ್ಯವಸ್ಥೆ ಉಂಟಾಗಿದ್ದು, ದಿನಕ್ಕೆ ೩ ತಾಸು ವಿದ್ಯುತ್ ಇರುವುದಿಲ್ಲ. ಒಂದು ವಾರದಲ್ಲಿ ವಿದ್ಯುತ್ ಇಲಾಖೆಯವರು ಸರಿಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಕಂಪ್ಲಿ ಮತ್ತು ಹಾಸಣಗಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಮಂಚೀಕೇರಿ ಹೆಸ್ಕಾಂ ಕಚೇರಿಯ ಶಾಖಾಧಿಕಾರಿಗಳಿಗೆ ಮನವಿ ನೀಡಿ, ಆಗ್ರಹಪಡಿಸಿದ್ದಾರೆ.

ಮಳೆಗಾಲದ ಪ್ರಾರಂಭದಲ್ಲಿ ವಿದ್ಯುತ್ ಸರಿಯಾಗಿ ಕೊಡಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳದಿರುವುದು ಇಲಾಖೆಯ ನಿಷ್ಕಾಳಜಿಯನ್ನು ತೋರಿಸುತ್ತದೆ. ಕೂಡಲೇ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ, ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಕಂಪ್ಲಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಸದಸ್ಯ ರಘುಪತಿ ಹೆಗಡೆ, ಹಾಸಣಗಿ ಗ್ರಾಪಂ ಅಧ್ಯಕ್ಷ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪವನ ಕೇಸರಕರ, ದಿವಾಕರ ಪೂಜಾರಿ, ಮುಸ್ತಾದ್ ಶೇಕ್, ಬಾಲಚಂದ್ರ ಹೆಗಡೆ, ಹಿರಿಯಾ ಪೂಜಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.