ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಗೆ ಒತ್ತಾಯ

| Published : Sep 10 2024, 01:38 AM IST

ಸಾರಾಂಶ

ಅರಣ್ಯ ಕಾಯಿದೆಗೆ ತಿದ್ದುಪಡಿಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಿ ಇತರೆ ಅರಣ್ಯವಾಸಿಗಳಿಗೆ ಭೂಮಿ ಸಿಗುವಂತೆ ಅವಶ್ಯ ತಿದ್ದುಪಡಿ ಮಾಡಬೇಕು.

ಅಂಕೋಲಾ: ಅರಣ್ಯ ಹಕ್ಕು ಕಾಯಿದೆ- ೨೦೦೫ರಂತೆ ಸಲ್ಲಿಸಿರುವ ಬಡ ರೈತರ ಅರ್ಜಿಗಳನ್ನು ಮಾನ್ಯ ಮಾಡಿ ಹಕ್ಕುಪತ್ರ ನೀಡಲು ಅಡ್ಡಿಯಾಗಿರುವ ೩ ತಲೆಮಾರು ಅಥವಾ ೭೫ ವರ್ಷಗಳ ಸ್ವಾಧೀನದಲ್ಲಿರಬೇಕು ಎನ್ನುವ ಷರತ್ತು ವಾಪಸ್‌ ಪಡೆಯಲು ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಮನವಿ ನೀಡುವ ಅಭಿಯಾನವನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದರು.ಸೋಮವಾರ ಬಾಳೆಗುಳಿಯಲ್ಲಿ ಅರಣ್ಯ ಭೂಮಿ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿ, ಅರಣ್ಯ ಕಾಯಿದೆಗೆ ತಿದ್ದುಪಡಿಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಿ ಇತರೆ ಅರಣ್ಯವಾಸಿಗಳಿಗೆ ಭೂಮಿ ಸಿಗುವಂತೆ ಅವಶ್ಯ ತಿದ್ದುಪಡಿಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ತಾಲೂಕಿನ ರೈತರು ಮನವಿ ಸಲ್ಲಿಸಲಿದ್ದಾರೆ ಎಂದರು.ತಾಲೂಕು ಕಾರ್ಯದರ್ಶಿ ಸಂತೋಷ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮಾದೇವ ಗೌಡ, ಸಮಿತಿ ಸದಸ್ಯ ವೆಂಕಟರಮಣ ಗೌಡ, ಗ್ರಾಮ ಘಟಕದ ಅಧ್ಯಕ್ಷ ವಿಠ್ಠಲ ಗೌಡ ಮತ್ತು ಸೇರಿದಂತೆ ನೂರಾರು ಅರಣ್ಯ ಅತಿಕ್ರಮಣದಾರರು ಉಪಸ್ಥಿತರಿದ್ದರು.

ಬಾಳೆಗುಳಿಯಲ್ಲಿ ಅರಣ್ಯ ಭೂಮಿ ಅತಿಕ್ರಮಣದಾರರ ಸಭೆಯಲ್ಲಿ ಶಾಂತಾರಾಮ ನಾಯಕ ಮಾತನಾಡಿದರು. ಅಡಕೆಗೆ ಕೊಳೆರೋಗ: ರೈತರು ಕಂಗಾಲು

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಕನೇನಹಳ್ಳಿ, ಕೋಟೆಮನೆ, ಶೀಗೆಮನೆ, ಉಮ್ಮಚಗಿ, ಕಾನಗೋಡ, ಚವತ್ತಿ, ತಾರೆಹಳ್ಳಿ, ತುಡುಗುಣಿ, ಹಾಸ್ಪುರ... ಮುಂತಾದ ಎಲ್ಲ ಪ್ರದೇಶಗಳ ರೈತರ ಅಡಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಿಸಿದ್ದು, ಅನೇಕ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ.ಅಡಕೆ ಧಾರಣೆಯೂ ತೀವ್ರವಾಗಿ ಕುಸಿತ ಕಾಣುತ್ತಿರುವ ಈ ಸಂದರ್ಭದಲ್ಲಿ ರೋಗಬಾಧೆಯೂ ಈ ಪರಿ ಕಾಡಿದರೆ ಅಡಕೆ ಬೆಳೆಗಾರರ ಪಾಲಿಗೆ ಬರುವ ದಿನಗಳು ಕರಾಳವಾಗುವುದರಲ್ಲಿ ಸಂಶಯವಿಲ್ಲವೆಂಬ ಮಾತು ಬೆಳೆಗಾರರ ವಲಯದಲ್ಲಿ ಕೇಳಿಬರುತ್ತಿದೆ. ಕೆಲವು ರೈತರು ಎರಡು ಮೂರು ಬಾರಿ ಮದ್ದು ಸಿಂಪರಣೆ ಮಾಡಿಸಿದರೂ ರೋಗ ಹತೋಟಿಗೆ ಬಾರದಿರುವುದು ವಿಚಿತ್ರವಾಗಿದ್ದು, ಕಳೆದೆರಡು ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯೇ ಇದಕ್ಕೆಲ್ಲ ಕಾರಣವಾಗಿದೆ ಎನ್ನಲಾಗಿದೆ.ಶಿವರಾಮ ಹೆಬ್ಬಾರ ಅವರು ಮೊದಲ ಬಾರಿ ಯಲ್ಲಾಪುರ ಮತದಾರರ ಕ್ಷೇತ್ರದ ಶಾಸಕರಾದಾಗ ಈ ಭಾಗದ ಬಹಳಷ್ಟು ರೈತರಿಗೆ ಸರ್ಕಾರದಿಂದ ಕೊಳೆರೋಗ ಪರಿಹಾರ ಕೊಡಿಸುವಲ್ಲಿ ಸಫಲರಾಗಿದ್ದರು. ಅಂದಿನಂತೆ ಇಂದೂ ಸರ್ಕಾರದಿಂದ ಅಂಥಹುದೇ ನೆರವು ಒದಗಿತೆಂಬುದು ಕೆಲವು ರೈತರ ಆಸೆಯಾಗಿದೆ.