ಗದಗ: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿರುವ ಬೆಳವಣಿಗೆಯ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.

ಈ ವೇಳೆ ಮಾತನಾಡಿದ ರಾಜು ಖಾನಪ್ಪನವರ, ವೀರೇಶ್ವರ ಪುಣ್ಯಾಶ್ರಮಕ್ಕೆ ನಾಡಿನಾದ್ಯಂತ ಅಸಂಖ್ಯಾತ ಭಕ್ತರಿದ್ದಾರೆ. ಭಕ್ತರು ಅಪಾರ ಪ್ರಮಾಣದಲ್ಲಿ ದವಸ ಧಾನ್ಯ, ಹಣ ದೇಣಿಗೆಯಾಗಿ ನೀಡುತ್ತಾರೆ. ಈ ಹಣ ಮತ್ತು ದವಸ ಧಾನ್ಯಗಳು ಸಮರ್ಪಕವಾಗಿ ಸದುಪಯೋಗ ಆಗಬೇಕಿದ್ದರೆ ಆಡಳಿತಾಧಿಕಾರಿ ಅಗತ್ಯವಿದೆ ಎಂದರು. ಮಹೇಶ ರೋಖಡೆ, ಅರುಣ್ ಬಾವಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ್, ಪಿ.ಎಸ್. ಕಾಳೆ, ಸತೀಶ್ ಕುಂಬಾರ, ಅಶೋಕ್ ಭಜಂತ್ರಿ, ವೆಂಕಟೇಶ್ ದೊಡ್ಡಮನಿ, ಕುಮಾರ್ ನಡಗೇರಿ, ಕುಮಾರ ಮಿಟ್ಟಿಮಠ, ಈರಪ್ಪ ಹೆಬಸೂರು, ಈರಣ್ಣ ಪೂಜಾರ್, ಭರತ ಲದ್ದಿ, ಸಿದ್ದಪ್ಪ ಯಳವತ್ತಿ, ಪ್ರವೀಣ್ ಕರಬಷ್ಟಿ, ಬಸನಗೌಡ ಪೊಲೀಸಪಾಟೀಲ, ಹುಲುಗಪ್ಪ ವಾಲ್ಮೀಕಿ, ಸದಾನಂದ ಸಿಂಗ್ ಗುರ್ಲಸೂರ್, ಈರಣ್ಣ ಗಾಣಿಗೇರ್, ದತ್ತು ವಿಠ್ಠಲಕರ, ಸಂಜು ಚಟ್ಟಿ, ವಿಶಾಲ್ ಗೋಕಾವಿ, ವಿಶ್ವನಾಥ್ ಸಿರಿ ಮುಂತಾದವರಿದ್ದರು.ಟ್ರಸ್ಟಿಗಳ ವಿರುದ್ಧ ಜೀವ ಬೆದರಿಕೆ ಆರೋಪ ಸರಿಯಲ್ಲ

ಗದಗ: ಲಿಂ. ಪುಟ್ಟರಾಜ ಗವಾಯಿಗಳು ಸ್ಥಾಪಿಸಿದ ಅಜೀವ ಟ್ರಸ್ಚಿಗಳ ವಿರುದ್ಧ ಕೆಲ ದಿನಗಳ ಹಿಂದೆ ಡಾ. ಕಲ್ಲಯ್ಯಜ್ಜನವರು ಜೀವ ಬೆದರಿಕೆಯ ಆರೋಪ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಸ್ಥಳೀಯ ಮುಖಂಡ ಬಸವರಾಜ ಶಿರೂರ ಅಸಮಾಧಾನ ವ್ಯಕ್ತಪಡಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸಂತಗೌಡ ಪೊಲೀಸಪಾಟೀಲ ಕೇವಲ ಗದಗ ಅಷ್ಟೆ ಅಲ್ಲದೇ ಸುತ್ತಮುತ್ತಲಿನ ಮಠಗಳಲ್ಲಿ ಎಲ್ಲ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸೇವೆ ಮಾಡುತ್ತಾ ಬಂದಿದ್ದಾರೆ. ಅಂಥವರಿಗೆ ಅನ್ಯಾಯ ಆಗಿರುವುದು ಮನಸ್ಸಿಗೆ ನೋವಾಗಿದೆ. ತಪ್ಪು ಮಾಡಿದ್ದರೆ ಶ್ರೀಗಳು ಬುದ್ಧಿ ಹೇಳಬಹುದಿತ್ತು. ಆದರೆ, ಬೇರೆಯವರ ಮಾತು ಕೇಳಿ ಜೀವ ಬೆದರಿಕೆ ಆರೋಪ ಮಾಡಿದ್ದು ಸಮಂಜಸವಲ್ಲ ಎಂದರು.ಈ ವೇಳೆ ಕುಮಾರಸ್ವಾಮಿ ಬೆಳ್ಳೇರಿಮಠ, ಮಂಜುನಾಥ ಚಿಕ್ಕನಗೌಡ್ರ, ಬಾಳಪ್ಪ ಹುಲಗುಂದಿ, ರಾಜೇಂದ್ರಗೌಡ ಪೊಲೀಸಪಾಟೀಲ, ಬಸವರಾಜ ದುಂಡಪ್ಪನವರ, ಮಹೇಶ್ವರಗೌಡ ಚಿಕ್ಕನಗೌಡ್ರ, ಶರಣಪ್ಪ ಕೊಣ್ಣಾಪೂರ, ಪ್ರಶಾಂತಗೌಡ ಹಿರೇಗೌಡ್ರ, ದೇವೇಂದ್ರಪ್ಪ ಬಾಗಲಿ, ಚಂದ್ರಗೌಡ ಚಿಕ್ಕನಗೌಡ್ರ ಉಪಸ್ಥಿತರಿದ್ದರು.