ಸಾರಾಂಶ
ಸಾಗರ: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬೇರೆ ಜಾತಿ, ಧರ್ಮ ಮತ್ತು ಕಾಂಗ್ರೆಸ್ ಪಕ್ಪದವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ. ಮುಸ್ಲಿಮರ ಓಲೈಕೆ ಹೀಗೆ ಮುಂದುವರೆಸಿದರೆ ಜನರು ದಂಗೆ ಏಳುವ ಕಾಲ ದೂರವಿಲ್ಲ. ಕಾಂಗ್ರೆಸ್ಸಿಗರನ್ನು ಹುಡುಕಿ ಹುಡುಕಿ ಹೊಡೆದು ಕೊಲ್ಲುವ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ ಈಗಾಗಲೆ ಎಫ್ಐಆರ್ ದಾಖಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈಶ್ವರಪ್ಪನವರ ಹೇಳಿಕೆಗಳು ಸಂವಿಧಾನ ವಿರೋಧಿಯಾಗಿವೆ. ಇಂತಹ ಹೇಳಿಕೆ ಸಮಾಜದಲ್ಲಿ ಪರಸ್ಪರ ದ್ವೇಷಕ್ಕೆ ಪ್ರಚೋದನೆ ನೀಡುವ ಜೊತೆಗೆ ದೇಶದ ಐಕ್ಯತೆಗೆ ಮಾರಕವಾಗಿದೆ. ಈಶ್ವರಪ್ಪ ಅವರ ಈ ಮಾತು ಶಿಕ್ಷಾರ್ಹವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಜ್ಯೋತಿ ಕೋವಿ, ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಮಧುಮಾಲತಿ, ಉಷಾ.ಎನ್, ಗಣಪತಿ ಮಂಡಗಳಲೆ, ತಾರಾಮೂರ್ತಿ, ಸಬೀನಾ, ಅನ್ವರ್ ಭಾಷಾ, ಕೃಷ್ಣಮೂರ್ತಿ, ಮೈಕೆಲ್ ಡಿಸೋಜ, ವಿಲ್ಸನ್ ಗೋನ್ಸಾಲ್ವಿಸ್, ಲಲಿತಮ್ಮ ಜ್ಯೋತಿ, ಕೋವಿ, ಜಾಕೀರ್, ರವಿಕುಮಾರ್, ಎಲ್.ಚಂದ್ರಪ್ಪ, ಅರ್ಥರ್ ಗೋಮ್ಸ್ ಇನ್ನಿತರರು ಹಾಜರಿದ್ದರು.