ಪ್ಲಾಸ್ಟಿಕ್‌ ತ್ರಿವರ್ಣ ಧ್ವಜ ಮಾರಾಟ ನಿಷೇಧಕ್ಕೆ ಆಗ್ರಹ

| Published : Jul 29 2025, 01:09 AM IST

ಪ್ಲಾಸ್ಟಿಕ್‌ ತ್ರಿವರ್ಣ ಧ್ವಜ ಮಾರಾಟ ನಿಷೇಧಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯೋತ್ಸವ ಮತ್ತು ಪ್ರಜಾರಾಜ್ಯೋತ್ಸವದ ದಿನದಂದು ರಾಷ್ಟೀಯ ಧ್ವಜವನ್ನು ಪ್ರದರ್ಶಿಸಲಾಗುತ್ತದೆ.

ಹಳಿಯಾಳ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅವಮಾನ ತಡೆಯಲು ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಸೋಮವಾರ ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಅವರಿಗೆ ಮನವಿ ಸಲ್ಲಿಸಿತು.

ಸ್ವಾತಂತ್ರ್ಯೋತ್ಸವ ಮತ್ತು ಪ್ರಜಾರಾಜ್ಯೋತ್ಸವದ ದಿನದಂದು ರಾಷ್ಟೀಯ ಧ್ವಜವನ್ನು ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ರಾಷ್ಟ್ರಧ್ವಜವು ಚರಂಡಿಗಳಲ್ಲಿ ರಸ್ತೆಯಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೆ ಹಾಳಗದೇ ಇರುವುದರಿಂದ ರಾಷ್ಟ್ರಧ್ವಜಗಳಿಗೆ ಅನೇಕ ದಿನಗಳವರೆಗೆ ಅಗೌರವ ಕಾಣಬೇಕಾಗುತ್ತದೆ. ರಾಷ್ಟಧ್ವಜಕ್ಕೆ ಆಗುವ ಅವಮಾನವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ಲಾಸ್ಟಿಕ್‌ ಧ್ವಜದಿಂದ ಆಗುವ ಅವಮಾನಗಳನ್ನು ತಡೆಯಲು ಸರ್ಕಾರಕ್ಕೆ ಆದೇಶ ಮಾಡಿತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳಿಗೆ ಸಂಬಂಧ ಸುತ್ತೋಲೆ ಹೊರಡಿಸಿತ್ತು.

ಅಂಗಡಿಗಳಲ್ಲಿ ಇ-ಕಾಮರ್ಸ್‌ ಜಾಲತಾಣದಲ್ಲಿ ತ್ರಿವರ್ಣಗಳ ಬಣ್ಣದ ಮಾಸ್ಕ್‌ಗಳ ಮಾರಾಟ ನಡೆದಿದೆ. ತ್ರಿವರ್ಣ ಬಣ್ಣದ ಮಾಸ್ಕ್‌ಗಳನ್ನು ಬಳಸುವುದರಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅದಕ್ಕಾಗಿ ತ್ರಿವರ್ಣ ಮಾಸ್ಕ್‌ಗಳ ಮಾರಾಟ ನಿಷೇಧಿಸಬೇಕು. ಅವುಗಳ ಬಳಕೆ ಮಾಡದಂತೆ ವಿದ್ಯಾರ್ಥಿ ವೃಂದಕ್ಕೆ ತಿಳಿವಳಿಕೆ ನೀಡಬೇಕು. ಅದಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಹಸೀಲ್ದಾರಗೆ ಮನವಿ ಸಲ್ಲಿಸಿದ ನಂತರ ಹಿಂದೂ ಜನಜಾಗೃತಿ ಸಮತಿಯ ನಿಯೋಗವು ಪೊಲೀಸ್‌ ಠಾಣೆಗೆ ತೆರಳಿ ಪಿಎಸೈ ಬಸವರಾಜ ಮಬನೂರ, ನಂತರ ಶಿಕ್ಷಣ ಇಲಾಖೆಗೆ ತೆರಳಿ ಬಿಇಒ ಪ್ರಮೋದ ಮಹಾಲೆ ಅವರಿಗೆ ಮನವಿ ಸಲ್ಲಿಸಿತು.

ಹಿಂದೂ ಜನಜಾಗೃತಿ ಸಮಿತಿಯ ವಿಠೋಬಾ ಮಾಳ್ಸೆಕರ, ಪೂಜಾ ದೂಳಿ, ಕರವೇ ತಾಲೂಕು ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಮಂಜುನಾಥ ಮೋರೆ, ಅಶೋಕ ಪಾಟೀಲ, ಗಣೇಶ ಕುಂದೇಕರ, ವಿನೋದ ಗಿಂಡೆ, ಶಿವಾನಂದ ಶೆಟ್ಟರ, ಚಂದ್ರಕಾಂತ ಶೆಟ್ಟಿ, ಶಂಕರ ರೇಣಕೆ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಅಪ್ಪಾಜಿ ಶಹಾಪುರಕರ, ಮಾರುತಿ ಗೌಡ, ಸುಧಾ ಶೆಟ್ಟಿ ಇದ್ದರು.