ಸಾರಾಂಶ
ಭಟ್ಕಳ: ಕಲುಷಿತಗೊಂಡಿರುವ ಶರಾಬಿ ನದಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶರಾಬಿ ನದಿ ಉಳಿಸಿ ಹೋರಾಟ ಸಮಿತಿಯ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರನ್ನು ಭೇಟಿಯಾಗಿ ಆಗ್ರಹಿಸಿತು.ಶರಾಬಿ ನದಿಯಲ್ಲಿ ವ್ಯಾಪಕವಾಗಿ ಹೂಳು ತುಂಬಿದೆ. ಅದರಂತೆ ನದಿ ಕಲುಷಿತಗೊಂಡಿದ್ದು, ಶುದ್ಧೀಕರಣದ ಅಗತ್ಯವಿದೆ. ನದಿಯಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ತೀರದ ಜನರು ತೊಂದರೆ ಪಡಬೇಕಾಗಿದೆ. ವರ್ಷಂಪ್ರತಿ ಮಳೆಗಾಲದಲ್ಲಿ ನದಿ ನೀರು ಮೇಲೆ ಬಂದು ತೀರದ ವಾಸಿಗಳು ಬೇರೆ ಕಡೆ ಸ್ಥಳಾಂತರ ಆಗುವ ಸ್ಥಿತಿ ಬರುತ್ತದೆ.
ಭಾರೀ ಮಳೆಯ ಸಮಯದಲ್ಲಿ ತಗ್ಗು ಪ್ರದೇಶಗಳಲ್ಲಿ ಮತ್ತು ಪ್ರಮುಖವಾಗಿ ಗೌಸಿಯಾ ಸ್ಟ್ರೀಟ್, ಮುಷ್ಮಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಡಾರಂಟ, ಡೊಂಗರಪಲ್ಲಿ ಮತ್ತು ಬೆಳ್ನಿಯಂತಹ ಪ್ರದೇಶಗಳಲ್ಲಿ ನದಿ ದಡಗಳಲ್ಲಿ ರಕ್ಷಣಾತ್ಮಕ ಬೇಲಿಗಳಿಲ್ಲದ ಸಂಭಾವ್ಯ ಪ್ರವಾಹದ ಬಗ್ಗೆ ನಿಯೋಗವು ಕಳವಳ ವ್ಯಕ್ತಪಡಿಸಿತು.ನಿಯೋಗದಲ್ಲಿ ಮೌಲ್ವಿ ಅಂಜುಂ ಗಂಗಾವಳಿ ನದ್ವಿ, ಮಹಮ್ಮದ್ ಹುಸೇನ್ ಅಸ್ಕಿರಿ, ಮುಬಾಶಿರ್ ಹುಸೇನ್ ಹಲ್ಲಾರೆ, ಇಮ್ಶಾದ್ ಮುಖ್ತಾಸರ್, ಅಶ್ಫಾಕ್ ಕೆ.ಎಂ., ಮುಸ್ತಫಾ ಅಸ್ಕಿರಿ, ಶಮೂನ್ ಹಾಜಿ ಫಖಿಹ್, ಮೌಲ್ವಿ ಇರ್ಷಾದ್ ನೈತೆ ನದ್ವಿ, ಇರ್ಷಾದ್ ನೈತೆ ನದ್ವಿ, ಇರ್ಷಾದ್ ನದ್ವಿ, ಮಜ್ಲಿಸೆ ಇಸ್ಲಾಹ್ ವ ತಂಝೀಂನ ಕಾರ್ಯಕಾರಿಣಿ ಸದಸ್ಯರು, ಎಸ್.ಎಂ. ಸೈಯದ್ ಪರ್ವೇಜ್, ವಕೀಲ ಇಮ್ರಾನ್ ಲಂಕಾ, ಇಮ್ತಿಯಾಜ್ ಉದ್ಯಾವರ್ ಮತ್ತು ಇರ್ಷಾದ್ ಗವಾಯಿ ಮುಂತಾದವರಿದ್ದರು.