ಕುನಗಾ ಹೊಂಡದಿಂದ ಸಂಪರ್ಕ ಇರುವ ರಸ್ತೆಗೆ ಪ್ರತ್ಯೇಕ ಚರಂಡಿಗಳಿಲ್ಲ. ರಸ್ತೆಯ ಅಕ್ಕ ಪಕ್ಕದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿಗಳಿಲ್ಲ.
ಶಿಗ್ಗಾಂವಿ: ತಾಲೂಕಿನ ಕುನ್ನೂರ ಗ್ರಾಮದ ಅಂಗನವಾಡಿ ಕೇಂದ್ರ ನಂ. ೯೧ರ ಮುಂಭಾಗದ ರಸ್ತೆಯು ಕಸ, ಕಂಟಿ ಹುಲ್ಲಿನಿಂದ ಆವೃತವಾಗಿದ್ದು, ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ.ಅಂಗನವಾಡಿ ಕೇಂದ್ರದ ಹಿಂದೆ ಬೀದಿಬದಿ ವಾರಕ್ಕೊಮ್ಮೆ ಚಿಕನ್ ಅಂಗಡಿ, ಮೀನು ಮಾರಾಟ ನಡೆಯುತ್ತಿದ್ದು, ಅದರಿಂದ ಬರುವ ರಕ್ತದ ನೀರು, ಮಡುಗಟ್ಟಿ ಎರಡ್ಮೂರು ದಿನ ನಿರಂತರವಾಗಿ ವಾಸನೆ ಬರುತ್ತದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಸುತ್ತಲಿನ ಮನೆಗಳಲ್ಲಿ ವಾಸವಿರುವ ಮಕ್ಕಳು ಅದರಲ್ಲಿಯೇ ಆಡುತ್ತಾರೆ.ಕುನಗಾ ಹೊಂಡದಿಂದ ಸಂಪರ್ಕ ಇರುವ ರಸ್ತೆಗೆ ಪ್ರತ್ಯೇಕ ಚರಂಡಿಗಳಿಲ್ಲ. ರಸ್ತೆಯ ಅಕ್ಕ ಪಕ್ಕದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿಗಳಿಲ್ಲ. ಇದರಿಂದ ರಸ್ತೆಯುದ್ದಕ್ಕೂ ಮಳೆನೀರು ಹರಿದಾಡುತ್ತಿದೆ. ಗ್ರಾಮದ ಮುಖ್ಯ ರಸ್ತೆ ಕೆಸರು ತುಂಬಿಕೊಂಡು ಚರಂಡಿಗಳಾಗಿ ಮಾರ್ಪಟ್ಟಿದೆ. ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಸಾರ್ವಜನಿಕರು ಆರೋಪಿಸಿದ್ದಾರೆ.
ಕುನ್ನೂರ ಅಂಗನವಾಡಿಯ ಮುಂದೆ ಬೆಳೆದಿರುವ ಕಸವನ್ನು ತೆಗೆಯುವಂತೆ ಪಿಡಿಒಗೆ ತಿಳಿಸಿದ್ದೇವೆ ಎಂದು ಸಿಡಿಪಿಒ ಗಣೇಶ ತಿಳಿಸಿದರು.ಸ್ವಚ್ಛತೆ ಕಾಯ್ದುಕೊಂಡಿದ್ದೇವೆ: ಅಂಗನವಾಡಿ ಕೇಂದ್ರದ ಕಾಂಪೌಂಡ್ ಒಳಗಡೆ ಆವರಣದಲ್ಲಿ ಸ್ವಚ್ಛತೆ ಕಾಯ್ದುಕೊಂಡಿದ್ದೇವೆ. ಕಾಂಪೌಂಡ್ ಹೊರಗಡೆ ರಸ್ತೆ ಪಕ್ಕದಲ್ಲಿರುವ ಕಸ ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಅವರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ತುಳಸಾ ಡಾಂಗೆ ತಿಳಿಸಿದರು.ಅಪಘಾತದಲ್ಲಿ ವ್ಯಕ್ತಿ ಸಾವು
ರಾಣಿಬೆನ್ನೂರು: ಬೈಕ್ ಹಾಗೂ ಮಿನಿ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ನ ಹಿಂಬದಿ ಸವಾರ ಸಾವಿಗೀಡಾದ ಘಟನೆ ಭಾನುವಾರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸಂಭವಿಸಿದೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಕೊಕ್ಕನೂರ ಗ್ರಾಮದ ಹನುಮಂತಪ್ಪ ಎಚ್.ಎಂ.(35) ಮೃತ ದುರ್ದೈವಿ.ನಿಂಗಪ್ಪ ಮಲ್ಲಪ್ಪ ಗಡ್ಡದರ ತಮ್ಮ ಬೈಕಿನ ಹಿಂಬದಿಯಲ್ಲಿ ಹನುಮಂತಪ್ಪನನ್ನು ಕುಳ್ಳರಿಸಿಕೊಂಡು ನಗರದ ಕಡೆಯಿಂದ ಹಲಗೇರಿಗೆ ತೆರಳುತ್ತಿರುವಾಗ ಎದುರಿನಿಂದ ಬಂದ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಆಗ ಬೈಕ್ ಸವಾರನಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು, ಹಿಂಬದಿ ಸವಾರ ಹನುಮಂತಪ್ಪನಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನನ್ನು ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಿಂಬದಿ ಸವಾರ ಸಾವಿಗೀಡಾಗಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.