ಸಾರಾಂಶ
ರಾಣಿಬೆನ್ನೂರು: ತಾಲೂಕಿನ ಹುಲಿಕಟ್ಟಿ ಗ್ರಾಮದ 1ನೇ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಗ್ರಾಮದ ಒಂದನೇ ಅಂಗನವಾಡಿ ಕಟ್ಟಡ ಬಿದ್ದು ಮೂರು ವರ್ಷಗಳಾಗಿವೆ. ಕಟ್ಟಡ ನಿರ್ಮಿಸಲು ಸರ್ಕಾರದಿಂದ ಮಂಜೂರಾತಿ ದೊರಕಿ ಎರಡು ವರ್ಷವಾದರೂ ಕೆಲಸ ಪ್ರಾರಂಭವಾಗಿಲ್ಲ. ಇದರ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳುತ್ತಾರೆ.
ಅಂಗನವಾಡಿ ನೂತನ ಕಟ್ಟಡವಿಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈಗಿರುವ ಅಂಗನವಾಡಿ ಕಟ್ಟಡವು ರಸ್ತೆ ಪಕ್ಕದಲ್ಲಿರುವುರಿಂದ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಅಂಗನವಾಗಿ ಬರುವಂತಾಗಿದೆ. ಆದ್ದರಿಂದ ಆದಷ್ಟು ಬೇಗನೆ ಕಟ್ಟಡ ಪ್ರಾರಂಭಿಸಿ ಮಕ್ಕಳಿಗೆ ವಿದ್ಯೆ ಕಲಿಯಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ಕೊಟ್ರೇಶಪ್ಪ ಎಮ್ಮಿ ಸಿದ್ದರೋಡ ಗುರುಂ, ಶ್ರೀಧರ ಛಲವಾದಿ, ಪರಶುರಾಮ ಕುರುವತ್ತಿ ಮರಡೆಪ್ಪ ಚಳಗೇರಿ ಶೋಭಾ ಮುದೇನೂರು ಹನುಮಂತಗೌಡ ಗೌಡ್ರ ಮತ್ತಿತರರಿದ್ದರು.21ರಂದು 31ನೇ ವೇದಾಂತ ಪರಿಷತ್ರಾಣಿಬೆನ್ನೂರು: ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮಿಯವರ ಜಯಂತಿ ಅಂಗವಾಗಿ 31ನೇ ವೇದಾಂತ ಪರಿಷತ್, ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮಿಜಿಗಳವರ 85ನೇ ಜಯಂತ್ಯುತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಮೇ 21ರಂದು ಜರುಗಲಿದೆ.ಸಿದ್ಧಾರೂಢರ ಪಂಚಲೋಹದ ಮೂರ್ತಿಗೆ ಪಂಚಾಮೃತ ಅಭಿಷೇಕ ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. 9.15ಕ್ಕೆ ಡಾ. ಶಿವಾನಂದ ಭಾರತಿ ಸ್ವಾಮೀಜಿಯವರ ಪ್ರಣವ ಧ್ವಜಾರೋಹಣ ನೆರವೇರಿಸುವರು.
9.30ಕ್ಕೆ ವೇದಾಂತ ಧರ್ಮಸಭೆ ಜರುಗಲಿದೆ. ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು, ಐರಣಿಯ ಬಸವರಾಜ ದೇಶಿಕೇಂದ್ರ ಸ್ವಾಮಿಜಿ, ಶ್ರೀಮಠದ ನಾಗರಾಜಾನಂದ ಸ್ವಾಮಿಜಿ ಸಾನ್ನಿಧ್ಯ ವಹಿಸುವರು.ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸುವರು. ದಾವಣಗೆರೆ ಜಡೆಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಇಂಚಲದ ಪೂರ್ಣಾನಂದ ಭಾರತಿ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ನಗರದ ವಿರಕ್ತಮಠದ ಗುರುಬಸವ ಶ್ರೀಗಳು, ಹುಬ್ಬಳ್ಳಿಯ ಸಚ್ಚಿದಾನಂದ ಶ್ರೀಗಳು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು, ಗೋಕಾಕ ತಾಲೂಕಿನ ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ಉಪದೇಶಾಮೃತ ನೀಡುವರು.
ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಪ್ರಕಾಶ ಕೋಳಿವಾಡ, ಬಿ.ಪಿ. ಹರೀಶ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಚ್.ಎಸ್. ಶಿವಶಂಕರ, ಗ್ರಾಪಂ ಅಧ್ಯಕ್ಷೆ ಲಲಿತಾ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪೂಜಾರ ಅತಿಥಿಗಳಾಗಿ ಆಗಮಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.Demand for construction of an Anganwadi building in Hulikatti villageರಾಣಿಬೆನ್ನೂರು ಸುದ್ದಿ, ಅಂಗನವಾಡಿ, ಹುಲಿಕಟ್ಟಿ ಗ್ರಾಮ, Ranibennur News, Anganwadi, Hulikatty villageಈಗಿರುವ ಅಂಗನವಾಡಿ ಕಟ್ಟಡವು ರಸ್ತೆ ಪಕ್ಕದಲ್ಲಿರುವುರಿಂದ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಅಂಗನವಾಗಿ ಬರುವಂತಾಗಿದೆ. ಆದ್ದರಿಂದ ಆದಷ್ಟು ಬೇಗನೆ ಕಟ್ಟಡ ಪ್ರಾರಂಭಿಸಿ ಮಕ್ಕಳಿಗೆ ವಿದ್ಯೆ ಕಲಿಯಲು ಅನುಕೂಲ ಮಾಡಿಕೊಡಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.