ಶಬರಿಮಲೆಗೆ ಹೋಗಲು ಸಾಧ್ಯವಾಗದ ಮಾಲಾಧಾರಿಗಳಿಗೆ ೧೮ ಮೆಟ್ಟಿಲ ಪಡಿಹತ್ತಿ ತುಪ್ಪದಕಾಯಿ ಒಡೆದು ಪೂಜೆ ಸಲ್ಲಿಸಿ ಹರಕೆ ತೀರಿಸಲು ಟ್ರಸ್ಟಿನ ವತಿಯಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲು ನಿರ್ಣಯಿಸಲಾಯಿತು. ನಂತರ ಮಾತನಾಡಿದ ಅಧ್ಯಕ್ಷರು, ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮಾಲೆ ಹಾಕಲು, ಇರುಮುಡಿ ಕಟ್ಟಲು, ಪಡಿಪೂಜೆ ಮಾಡಲು, ನಿತ್ಯ ಬೆಳಿಗ್ಗೆ ಸಂಜೆ, ಪೂಜೆ ಸಲ್ಲಿಸಿ ಭಜನೆ ಮಾಡಲು, ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಾಲೆ ಹಾಕಲು ಬೇಕಾದ ಎಲ್ಲ ರೀತಿಯ ಬಟ್ಟೆ ಇನ್ನಿತರ ಪದಾರ್ಥಗಳು ಹಾಗೂ ಇರುಮುಡಿ ಕಟ್ಟಲು ಬೇಕಾದ ತುಪ್ಪದಕಾಯಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ರಿವರ್‌ ಬ್ಯಾಂಕ್ ರಸ್ತೆಯ ಹೇಮಾವತಿ ನದಿ ದಡದಲ್ಲಿರುವ ೧೮ ಮೆಟ್ಟಿಲು ಪಡಿ ಇರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶಬರಿಮಲೆಗೆ ಹೋಗುವ ಮಾಲಾಧಾರಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್‌ ಸೂಚಿಸಿದರು.

ಪಟ್ಟಣದ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶಬರಿಮಲೆಗೆ ಹೋಗುವ ಮಾಲಾಧಾರಿಗಳಿಗೆ ಅತಿಹೆಚ್ಚಿನ ಸೌಲಭ್ಯ ಒದಗಿಸುವ ಸಂಬಂಧ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಟ್ರಸ್ಟಿಗಳ ಸಭೆಯಲ್ಲಿ ಮಾತನಾಡಿದರು. ಶಬರಿಮಲೆಗೆ ಹೋಗಲು ಸಾಧ್ಯವಾಗದ ಮಾಲಾಧಾರಿಗಳಿಗೆ ೧೮ ಮೆಟ್ಟಿಲ ಪಡಿಹತ್ತಿ ತುಪ್ಪದಕಾಯಿ ಒಡೆದು ಪೂಜೆ ಸಲ್ಲಿಸಿ ಹರಕೆ ತೀರಿಸಲು ಟ್ರಸ್ಟಿನ ವತಿಯಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲು ನಿರ್ಣಯಿಸಲಾಯಿತು. ನಂತರ ಮಾತನಾಡಿದ ಅಧ್ಯಕ್ಷರು, ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮಾಲೆ ಹಾಕಲು, ಇರುಮುಡಿ ಕಟ್ಟಲು, ಪಡಿಪೂಜೆ ಮಾಡಲು, ನಿತ್ಯ ಬೆಳಿಗ್ಗೆ ಸಂಜೆ, ಪೂಜೆ ಸಲ್ಲಿಸಿ ಭಜನೆ ಮಾಡಲು, ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಾಲೆ ಹಾಕಲು ಬೇಕಾದ ಎಲ್ಲ ರೀತಿಯ ಬಟ್ಟೆ ಇನ್ನಿತರ ಪದಾರ್ಥಗಳು ಹಾಗೂ ಇರುಮುಡಿ ಕಟ್ಟಲು ಬೇಕಾದ ತುಪ್ಪದಕಾಯಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.

ನಮ್ಮ ದೇವಾಲಯದಲ್ಲಿ ಮಾಲೆ ಹಾಕಲು ನಿಯೋಜಿಸಿರುವ ೯ ಜನ ಗುರುಸ್ವಾಮಿಗಳಿಗೆ ಮಾತ್ರ ಇರುಮುಡಿ ಕಟ್ಟಲು ಅವಕಾಶ ಇರುತ್ತದೆ. ಗುರುಸ್ವಾಮಿಗಳಲ್ಲಿ ಕೆಲವರು ಇರುಮುಡಿ ಕಟ್ಟುವ ದಿನಗಳಲ್ಲಿ ಮಾತ್ರ ಬರುತ್ತಾರೆ, ಇನ್ಯಾವಗಲೂ ದೇವಾಲಯದ ಕಡೆ ತಿರುಗಿಯೂ ನೋಡಲ್ಲ ಎನ್ನುವ ಆಕ್ಷೇಪ ಬಂದಾಗ ಇರುಮುಡಿ ಕಟ್ಟುವ ಗುರುಸ್ವಾಮಿಗಳು ದೇವಾಲಯಕ್ಕೆ ಮೇಲಿಂದ ಮೇಲೆ ಬಂದು ದೇವಾಲಯದ ಕಾರ್ಯಗಳಿಗೆ ಸಹಕರಿಸಬೇಕು ಎಂದರು. ಟ್ರಸ್ಟಿನ ಕೆಲವು ಕ್ರೀಯಾಶೀಲ ಸದಸ್ಯರ ಮನವಿ ಮೇರೆಗೆ ದೇವಾಲಯದ ಪೂಜಾ ಸಮಿತಿಗೆ ಹೆಚ್ಚು ಸದಸ್ಯರನ್ನು ಇಂದು ಸೇರಿಸಿದ್ದೇವೆ. ಇವರ ಸೇವೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಟ್ರಸ್ಟಿನ ಸದಸ್ಯರನ್ನಾಗಿ ತೆಗೆದುಕೊಳ್ಳಲು ತೀರ್ಮಾನಿಸಲಾಗುತ್ತದೆ. ಲಾರಿ ಕುಮಾರ್‌ ಅವರನ್ನು ಸಹಕಾರ್ಯದರ್ಶಿಯಾಗಿ ಟ್ರಸ್ಟಿಗೆ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಣಹಿಸಿದರು. ದೇವಾಲಯಕ್ಕೆ ಹೊಸದಾಗಿ ಅಚ್ಚುತ ಅವರನ್ನು ಅರ್ಚಕರನ್ನಾಗಿ ನೇಮಿಸಿಕೊಂಡಿದ್ದು ಇವರು ದಿನ ಬೆಳಿಗ್ಗೆ ೭ ಗಂಟೆಯಿಂದ ೧೧ ಗಂಟೆ ವರೆಗೆ(ಶುಕ್ರವಾರ ಮಾತ್ರ ೭ರಿಂದ ೯.೩೦ ರವರೆಗೆ) ಸಂಜೆ ೭ ಗಂಟೆಯಿಂದ ೯ ಗಂಟೆಯವರೆಗೆ ದೇವಾಲಯದಲ್ಲಿದ್ದು ಪೂಜೆ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ನೀಡುತ್ತಾರೆ. ವಿಶೇಷ ದಿನಗಳಲ್ಲಿ ಪೂಜೆಗಳು ಮುಗಿಯುವವರೆಗೂ ದೇವಾಲಯದಲ್ಲಿದ್ದು ಭಕ್ತರಿಗೆ ಪೂಜೆ ಮಾಡಿಕೊಡುತ್ತಾರೆ. ದೇವಾಲಯದಲ್ಲಿ ಸಂಕಷ್ಟಹರ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ದುರ್ಗ ಹೋಮಗಳು ನಡೆಯಲಿದ್ದು, ವಿವರಗಳಿಗೆ ಅರ್ಚಕ ಅಚ್ಚುತ ಅವರ ಮೊ. ಸಂಖ್ಯೆ ೯೮೪೫೩೮೩೬೧೯ ಸಂಪರ್ಕಿಸಲು ತಿಳಿಸಿದ್ದಾರೆ.

ಉಪಾಧ್ಯಕ್ಷ ಸುರೇಶ್ ಕುಮಾರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಎಚ್. ಎಸ್. ಸುದರ್ಶನ್, ಟ್ರಸ್ಟಿ ಸುದರ್ಶನ್‌ ಬಾಬು, ಕುಮಾರ್‌, ರಾಘವೇಂದ್ರ, ಗುರುಸ್ವಾಮಿಗಳಾದ ಮಹದೇವ, ಮಲ್ಲೇಶ್, ನಿಂಗಣ್ಣ, ಮಲ್ಲಿಕಾರ್ಜುನ, ದಿನೇಶ್, ಸಮಿತಿಯ ಗಿರೀಶ್, ರೇಣುಕಾ ಪ್ರಸಾದ್, ಸುನಿಲ್, ವಾಸು, ಹೇಮಂತ್, ಇತರರು ಇದ್ದರು.

=====

ಫೋಟೋ:ಹೊಳೆನರಸೀಪುರದ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಅಗತ್ಯ ಸವಲತ್ತುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಈ ವೇಳೆ ಟಿ. ಶಿವಕುಮಾರ್, ಸುರೇಶ್ ಕುಮಾರ್, ಸುರೇಶ್, ಎಚ್. ಎಸ್. ಸುದರ್ಶನ್, ಸುದರ್ಶನ್‌ಬಾಬು, ಕುಮಾರ್ ಇದ್ದರು.