ವಿವಿಧ ಮಾರ್ಗಗಳಲ್ಲಿ ರೈಲು ಸಂಚಾರ, ವಿಸ್ತರಣೆಗೆ ಆಗ್ರಹ

| Published : Jul 17 2025, 12:30 AM IST

ವಿವಿಧ ಮಾರ್ಗಗಳಲ್ಲಿ ರೈಲು ಸಂಚಾರ, ವಿಸ್ತರಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಚಿ, ಬಾಗಲಕೋಟ ರೇಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು, ಲೋಕಾಪೂರ, ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸುವುದು, ಲೋಕಾಪುರ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸುವದು. ಗದಗ, ಬಾಗಲಕೋಟೆ, ಸೋಲಾಪೂರ ಮಾರ್ಗದಲ್ಲಿ ಹೆಚ್ಚಿನ ರೇಲ್ವೆ ಸೌಲಭ್ಯ ದೊರಕಿಸುವದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಕೋರಿತು.

ಹುಬ್ಬಳ್ಳಿ: ರಾಜ್ಯ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದ ನಿಯೋಗ ಬುಧವಾರ ನೈಋತ್ಯ ರೇಲ್ವೆ ಮಹಾ ವ್ಯವಸ್ಥಾಪಕ ಮುಕುಲ್ ಶರಣ ಮಾಥೂರ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿತು.

ಕುಡಚಿ, ಬಾಗಲಕೋಟ ರೇಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು, ಲೋಕಾಪೂರ, ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸುವುದು, ಲೋಕಾಪುರ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸುವದು. ಗದಗ, ಬಾಗಲಕೋಟೆ, ಸೋಲಾಪೂರ ಮಾರ್ಗದಲ್ಲಿ ಹೆಚ್ಚಿನ ರೇಲ್ವೆ ಸೌಲಭ್ಯ ದೊರಕಿಸುವದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಕೋರಿತು.

ಈ ಸಂದರ್ಭದಲ್ಲಿ ಕುತುಬುದ್ದೀನ್ ಖಾಜಿ ಮಾತನಾಡಿ, ದಶಕಗಳಿಂದ ಕುಂಟುತ್ತ ಸಾಗಿರುವ ಕುಡಚಿ ರೈಲು ಮಾರ್ಗ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ 2026ರ ಒಳಗಾಗಿ ಪೂರ್ಣಗೊಳಿಸಬೇಕು. ಲೋಕಾಪುರದ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು. ಸವದತ್ತಿ ಯಲ್ಲಮ್ಮನ ಭಕ್ತರಿಗೆ ಅನುಕೂಲವಾಗುವಂತೆ ಲೋಕಾಪೂರ-ಸವದತ್ತಿ-ಧಾರವಾಡ ಈಗಾಗಲೇ ಸಮೀಕ್ಷೆ ಕಾರ್ಯ ಮುಗಿದಿದ್ದು ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಅನುಷ್ಠಾನಗೊಳಿಸಬೇಕು.

ಗದಗ-ಯಲವಿಗಿ, ಆಲಮಟ್ಟಿ-ಯಾದಗಿರಿ ಹೊಸ ರೈಲು ಮಾರ್ಗಗಳನ್ನು ಕಾರ್ಯರೂಪಕ್ಕೆ ತರಬೇಕು. ರೈಲು ಸಂಖ್ಯೆ 17307-17308 ಬಸವಾ ಎಕ್ಸಪ್ರೆಸ್‌ ಲೋಕಾಪುರಕ್ಕೆ ವಿಸ್ತರಿಸಬೇಕು. ರೈಲು ಸಂಖ್ಯೆ 20657 ಹುಬ್ಬಳ್ಳಿ ನಿಜ್ಜಾಮುದ್ದೀನ್ ದಿನನಿತ್ಯ ಸಂಚರಿಸುವಂತೆ ಮಾಡಬೇಕು. ರೈಲು ಸಂಖ್ಯೆ 57134 ರಾಯಚೂರ-ಬಿಜಾಪೂರ ಗದಗ ವರೆಗೂ ವಿಸ್ತರಿಸಬೇಕು. ರೈಲು ಸಂಖ್ಯೆ 16505-16506 ಬೆಂಗಳೂರಿನಿಂದ ಗಾಂಧಿಧಾಮಕ್ಕೆ ಹೋಗುವ ರೈಲನ್ನು ಭೂಚ್‌ ವರೆಗೆ ವಿಸ್ತರಿಸಬೇಕು. ಹೈದ್ರಾಬಾದ್-ಬಿಜಾಪುರ ರೈಲನ್ನು ಗದಗದ ವರೆಗೆ ವಿಸ್ತರಿಸಬೇಕು. ಗದಗ-ಹುಟಗಿ ಡಬ್ಲಿಂಗ್‌ ವಿದ್ಯುತಕರಣ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ ವಂದೇ ಭಾರತ ರೈಲನ್ನು ಈ ಮಾರ್ಗದಲ್ಲಿ ಪ್ರಾರಂಭಿಸಬೇಕು. ಬಾಗಲಕೋಟ ರೈಲು ನಿಲ್ದಾಣ ಅಮೃತ ಭಾರತ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿದ್ದು, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಪಂಡರಪುರ- ತಿರುಪತಿ ಹೊಸ ರೈಲು ಪ್ರಾರಂಭಿಸಿ ಬಿಜಾಪುರ, ಬಾಗಲಕೋಟೆ, ಗದಗ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು. ವಿಜಯಪುರದಿಂದ ಗುಂತಕಲ್ಲ ಹೊಸ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕೆಂದು ಹೋರಾಟ ಸಮಿತಿಯ ನಿಯೋಗ ಮಹಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತು.

ಈ ವೇ‍ಳೆ ಮಹಾ ವ್ಯವಸ್ಥಾಪಕ ಮುಕುಲ್ ಶರಣ ಮಾಥೂರ ಸಂಬಂಧಪಟ್ಟ ಇಲಾಖೆಯ ವಿಭಾಗಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಧಾರವಾಡ ಜಿಲ್ಲಾಧ್ಯಕ್ಷ ಬಾಬಾಜಾನ ಮುಧೋಳ, ಮಂಜುಳಾ ಭೂಸಾರಿ, ಪ್ರೇಮಾ ರಾಠೋಡ, ಎಂ.ಕೆ. ಯಾದವಾಡ, ಜೆ.ಎಂ. ಜೈನೆಖಾನ, ರಾಜಕಿಶೋರ ನಿಡೋನಿ, ಬಸವರಾಜ ಕಪ್ಪಣ್ಣವರ, ಡಿ.ಎಫ್. ಹಾಜಿ, ದಾದಾಪೀರ ಕೆರೂರ, ಮೈನುದ್ದೀನ್‌ ಖಾಜಿ, ಮಮತಾಜ ಸುತಾರ ಮುಂತಾದವರು ಉಪಸ್ಥಿತರಿದ್ದರು.