ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಶಾಲೆಗಳು ಹಲವು ಸವಾಲು ಎದುರಿಸುತ್ತಿವೆ.

ಕಂಪ್ಲಿ: ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರದ ಅನುದಾನದ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನೂತನ ಅಧ್ಯಕ್ಷ ಕೆ.ಎಸ್. ಚಾಂದ್ ಬಾಷಾ ಒತ್ತಾಯಿಸಿದರು.

ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ಬೈನ್ ಬೋ ಗ್ಲೋಬಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಶಾಲೆಗಳು ಹಲವು ಸವಾಲು ಎದುರಿಸುತ್ತಿವೆ. ಈ ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ತರುವ ಮೂಲಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹಾಗೂ ಕನ್ನಡ ಮಾಧ್ಯಮದ ಬೆಳವಣಿಗೆಗೆ ಸರ್ಕಾರ ನೆರವಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಒಕ್ಕೂಟದಿಂದ ನಿಯೋಗ ಕೊಂಡೊಯ್ಯಲಾಗುವುದು. ಸರ್ಕಾರದ ಗಮನ ಸೆಳೆದು ಶಾಲೆಗಳಿಗೆ ಅನುದಾನ ದೊರಕಿಸಿಕೊಡಲು ಸಂಘಟಿತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಒಕ್ಕೂಟದ ಸದಸ್ಯತ್ವ ಪಡೆದು ಸಂಘಟನೆ ಬಲಪಡಿಸಬೇಕು. ಶಾಲೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನೂತನ ಪದಾಧಿಕಾರಿಗಳ ಆಯ್ಕೆ

ವಾರ್ಷಿಕ ಮಹಾಜನ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ.ಎಸ್. ಚಾಂದ್ ಬಾಷಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ರಾಜಾ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸುರೇಶಕುಮಾರ, ಖಜಾಂಚಿಯಾಗಿ ಬಸವರಾಜ ಹಾಗೂ ಸಹ ಕಾರ್ಯದರ್ಶಿಯಾಗಿ ನರಸಪ್ಪ ಗಾಣದಾಳ್ ಆಯ್ಕೆಯಾಗಿದ್ದಾರೆ.

ಕಾನೂನು ಸಲಹೆಗಾರರಾಗಿ ಸೋಮನಾಥ ಹೆಬ್ಬಡದ ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಎಂ. ಮಾರುತಿ, ಕೆ.ಹನುಮಂತಪ್ಪ, ಡಿ.ಷಣ್ಮುಕಪ್ಪ, ಪವನಕುಮಾರ ಗಂಗಾವತಿ, ವಿರುಪಾಕ್ಷಪ್ಪ ಮಹಾಂತಿ, ಎಚ್. ಶರಣಪ್ಪ, ಗಾಳೆಪ್ಪ, ಸಿ.ವೆಂಕಟೇಶ, ವಿನಾಯಕ, ರವಿ ಗೋನಾಳು ಹಾಗೂ ಮೈಬೂಬ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎ. ತಾಂಡವ ಕೃಷ್ಣ, ಶಾಲಾ ಆಡಳಿತ ಮಂಡಳಿಗಳ ಮುಖಂಡ ಪ್ರಭಾಕರ ಗೋಡೆ, ಎಚ್.ಎಂ. ವಿಶ್ವೇಶ್ವರಯ್ಯಸ್ವಾಮಿ, ಮುತ್ತಣ್ಣ ನಂದ್ಯಾಳ್, ಶಂಕರ್, ಎಂ.ಮೌಲಾಲಿ, ಬಿ. ಜಿಲಾನಸಾಬ್, ಶಿವಕುಮಾರ ದೇವಸಮುದ್ರ, ರಾಮಮೋಹನ್, ಬಿ.ಎಲ್. ಸರ್ವೇಶ್ ಹಳೆಕೋಟೆ, ವಿರುಪಾಕ್ಷಪ್ಪಗೌಡ ಮಾಲಿ ಪಾಟೀಲ್, ಎನ್. ನಾಗಪ್ಪ ಸೇರಿದಂತೆ ವಿವಿಧ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.