ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹ

| Published : Nov 30 2024, 12:46 AM IST

ಸಾರಾಂಶ

ಎಸ್ಸಿ ಸಮುದಾಯದ ಒಳ ಮೀಸಲಾತಿ ವರ್ಗಿಕರಣಕ್ಕೆ ಕಳೆದ ಸರ್ಕಾರಗಳು ಕಾಂತರಾಜ್ ಆಯೋಗ, ಡಾ.ಎ.ಜೆ ಸದಾಶಿವ ಆಯೋಗ, ಸೇರಿದಂತೆ ಆಯನೂರು ಆಯೋಗ ವರದಿಗಳನ್ನು ಅನುಷ್ಠಾನ ಮಾಡದ ಕಾರಣ ಎಸ್.ಸಿ ಸಮುದಾಯಗಳು ಸೇರಿದಂತೆ ಇನ್ನಿತರೆ ಉಪಜಾತಿಗಳಿಗೆ ಅನ್ಯಾಯವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಎಸ್ಸಿ ಸಮುದಾಯದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ರಾಜ್ಯ ಸರಕಾರ ಮುಂದಿನ ಒಂದು ತಿಂಗಳೊಳಗೆ ಜಾರಿಗೊಳಿಸಬೇಕು, ಇಲ್ಲವಾದ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವರುಣ ಕ್ಷೇತ್ರದ ನಿವಾಸಕ್ಕೆ ಮುತ್ತಿಗೆ ಹಾಕಿ, ವರುಣ ಕ್ಷೇತ್ರದಿಂದ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಲು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ನಿರ್ಧರಿಸಿದೆ.

ನಗರದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಿದ್ದಾಗಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.ಬೇಡಿಕೆ ಈಡೇರದಿದ್ದರೆ ಹೋರಾಟ

ನಾಗಮೋಹನ್ ದಾಸ್ ವರದಿ ಸೇರಿದಂತೆ ಇತರೆ ವರದಿಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದೆ, ಒಂದು ವೇಳೆ ರಾಜ್ಯ ಸರ್ಕಾರ ವರದಿಗಳ ಜಾರಿಯಲ್ಲಿ ವಿಫಲವಾದರೆ, ಬೇಡಿಕೆ ಈಡೇರಿಕಗಾಗಿ ವಿವಿಧ ರೀತಿಯ ಹೋರಾಟಗಳನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಎಸ್ಸಿ ಸಮುದಾಯದ ಒಳ ಮೀಸಲಾತಿ ವರ್ಗಿಕರಣಕ್ಕೆ ಕಳೆದ ಸರ್ಕಾರಗಳು ಕಾಂತರಾಜ್ ಆಯೋಗ, ಡಾ.ಎ.ಜೆ ಸದಾಶಿವ ಆಯೋಗ, ಸೇರಿದಂತೆ ಆಯನೂರು ಆಯೋಗ ವರದಿಗಳನ್ನು ಅನುಷ್ಠಾನ ಮಾಡದ ಕಾರಣ ಎಸ್.ಸಿ ಸಮುದಾಯಗಳು ಸೇರಿದಂತೆ ಇನ್ನಿತರೆ ಉಪಜಾತಿಗಳಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಳ ಮೀಸಲು ವರ್ಗೀಕರಣ

ಆಗಸ್ಟ್ ಒಂದರಂದು ಎಸ್ಸಿ ಸಮುದಾಯದ ಒಳ ಮೀಸಲಾತಿ ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಸಹ ಸುಮಾರು ನಾಲ್ಕು ತಿಂಗಳು ಕಳೆದರೂ ಸಹ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸಿರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ನಾಗರಾಜ್, ಅಲೇರಿ ಮುನುರಾಜು, ಮಾರ್ಕೊಂಡಪ್ಪ ಇದ್ದರು.