ಮುರುಡೇಶ್ವರ ಪವರ್‌ ಹೌಸ್‌ ವಿರುದ್ಧ ತನಿಖೆಗೆ ಆಗ್ರಹ

| Published : Feb 14 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮ ವ್ಯಾಪ್ತಿಯ ಶ್ರೀಮುರುಡೇಶ್ವರ ಪವರ್‌ ಹೌಸ್‌ ಲಿಮಿಟೆಡ್‌ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಮೋಸವೆಸಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಂಪನಿಯ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಯುವ ಜನಸೇನೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನ ನಾಗಬೇನಾಳ ಗ್ರಾಮ ವ್ಯಾಪ್ತಿಯ ಶ್ರೀಮುರುಡೇಶ್ವರ ಪವರ್‌ ಹೌಸ್‌ ಲಿಮಿಟೆಡ್‌ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಮೋಸವೆಸಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಂಪನಿಯ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಯುವ ಜನಸೇನೆ ಆಗ್ರಹಿಸಿದೆ.

ಯುವ ಜನಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಮುಂದೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಮಾತನಾಡಿದ ಶಿವಾನಂದ ವಾಲಿ, ನಾಗಬೇನಾಳ ಶ್ರೀ ಮುರುಡೇಶ್ವರ ಪವರ್‌ ಹೌಸ್ ಕಂಪನಿಯು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್‌ ಉತ್ಪಾದನೆಯ ವಾಣಿಜ್ಯ ತೆರಿಗೆಯನ್ನು ಕಟ್ಟದೇ ಸುಮಾರು 24 ವರ್ಷಗಳಿಂದ ಸರ್ಕಾರಕ್ಕೆ ವಂಚಿಸಿದೆ. ಇದು ದಾಖಲೆಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಮೋಸ ಮಾಡಿರುವ ಮುರುಡೇಶ್ವರ ಪವರ್ ಹೌಸ್‌ ಕಂಪನಿಯ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳೊವರೆಗೂ ಧರಣಿ ಸತ್ಯಾಗ್ರಹ ಹಿಂಪಡೆಯುವ ಪ್ರಶ್ನೇಯೇ ಇಲ್ಲ ಎಂದಿದ್ದಾರೆ.ತಾಪಂ ಇಒ ಎನ್.ಎಸ್.ಮಸಳಿ ಧರಣಿ ಸ್ಥಳಕ್ಕೆ ಆಗಮಿಸಿದ್ದು, ಕೇವಲ ಸಾಂಕೇತಿಕವಾಗಿ. ಯಾವುದೇ ತನಿಖೆ ನಡೆಸುವ ಇಚ್ಛಾಶಕ್ತಿ ಅವರಲ್ಲಿ ಕಂಡು ಬರುತ್ತಿಲ್ಲ. ಯಾವುದೇ ತನಿಖೆಗೆ ಅರ್ಹರದಲ್ಲದವರನ್ನು ತನಿಖಾ ತಂಡ ನಿರ್ಮಿಸಿ ತನಿಖೆ ನಡೆಸುವುದರಿಂದ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯಬಹುದು. ಜಿಲ್ಲಾಧಿಕಾರಿಗಳ ಮತ್ತು ಜಿಪಂ ಸಿಇಒ ಅವರ ನೇತೃತ್ವದ ತನಿಖಾ ತಂಡದಿಂದ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷಗೊಳಪಡಿಸಬೇಕು. ನಮಗೆ ಸೂಕ್ತ ಭರವಸೆ ಸಿಗುವವರೆಗೂ ಹೋರಾಟ ಕೈಬಿಡುವ ಪ್ರಶ್ನೇಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಶಿವು ವನಕಿಹಾಳ, ರಾಜು ಮನಸಬಿನಾಳ, ಮೌನೇಶ ನಾಗಬೇನಾಳ, ರಫೀಕ ತೆಗ್ಗಿನಮನಿ, ಗುರು ತಂಗಡಗಿ, ವಿರೇಶ ವಡ್ಡರ, ಶೇಖಪ್ಪ ಚಲವಾದಿ, ಹಣಮಂತ ಗೌಂಡಿ, ಗಂಗು ಗಂಗನಗೌಡರ, ಅಮರೇಶ ಯಂಕಂಚಿ, ಗಿರಿಯಪ್ಪ ತಳವಾರ ಸೇರಿದಂತೆ ಹಲವರು ಇದ್ದರು.