ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮಗೆ ಒತ್ತಾಯ

| Published : Jan 04 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಗುತ್ತಿಗೆದಾರ ಸಚಿನ್ ಪಾಂಚಾಳ ಡಿ.26 ರಂದು ರೈಲು ಹಳಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದಿಂದ ಡಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ಆತ್ಮಹತ್ಯೆಗೂ ಮುನ್ನ ಸಚಿನ್ ಪಾಂಚಾಳ ಬರೆದ ಏಳು ಪುಟಗಳ ಡೆತ್ ನೋಟ್‌ ಕೂಡ ಲಭ್ಯವಾಗಿದೆ. ಆ ಡೆತ್ ನೋಟಲ್ಲಿ ಟೆಂಡರ್ ಕೊಡಿಸುವದಾಗಿ ಆರ್‌ಡಿಪಿಆರ್‌ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಕಲಬುರ್ಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಹಾಗೂ ಇತರ 8 ಜನರು ಹಣಕ್ಕಾಗಿ ಪೀಡುಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ರಾಜು ಕಪನೂರ್ ಸಚಿನ್‌ಗೆ ಟೆಂಡರ್ ಕೊಡಿಸುವದಾಗಿ ಹಣ ಕೂಡ ಪಡೆದಿದ್ದಾರೆ ಎನ್ನಲಾಗಿದೆ. ಟೆಂಡರ್ ಕೂಡ ಕೊಡಿಸಲಿಲ್ಲ ಹಾಗೂ ಹಣವೂ ವಾಪಸ್ ಕೊಡಲಿಲ್ಲ ಎಂದು ಗಂಭೀರ ಆರೋಪವಿದೆ. ಸಚಿನ್ ಅವರ ಸಹೋದರಿ ದೂರನ್ನು ಕೂಡ ಕೊಟ್ಟಿದ್ದಾರ. ಪ್ರಕರಣ ದಾಖಲಿಸಿಕೊಳ್ಳುವ ವಿಚಾರದಲ್ಲಿ ಪೊಲೀಸರಿಂದ ಗಂಭೀರ ಲೋಪ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ನಂಟು ಇರುವುದರಿಂದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಮುಖ್ಯಮಂತ್ರಿಗಳು ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ತಕ್ಷಣ ಪಡೆಯಬೇಕು ಹಾಗೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.