ಸಚಿವ ತಂಗಡಗಿ ರಾಜೀನಾಮೆಗೆ ಆಗ್ರಹ

| Published : Mar 29 2024, 12:55 AM IST

ಸಾರಾಂಶ

ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಸಚಿವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವಿಜಯಪುರ ಜಿಲ್ಲೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಸಚಿವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವಿಜಯಪುರ ಜಿಲ್ಲೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ಬಳಿಕ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ, ಶಿವರಾಜ್ ತಂಗಡಗಿ ಅವರ ಈ ಹೇಳಿಕೆ ದೇಶದ ಕೋಟ್ಯಂತರ ಯುವಕರ ಭಾವನೆಗೆ ಧಕ್ಕೆ ತಂದಿದೆ. ನರೇಂದ್ರ ಮೋದಿಜಿ ಅವರ ಬೆಂಬಲಿತ ವಿವಿಧ ಸಂಘಟನೆಗಳು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದ ಜಗಮೆಚ್ಚಿದ ಜನನಾಯಕ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಜಗದ್ಗುರು ಭಾರತಕ್ಕಾಗಿ ಶ್ರಮಿಸುತ್ತಿರುವ ಯುವ ಸಮೂಹದ ವಿರುದ್ಧ ರಾಜ್ಯ ಸಚಿವ ಶಿವರಾಜ ತಂಗಡಗಿ ಅವರ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸುತ್ತೇವೆ ಎಂದರು.

ಶಿವರಾಜ್ ತಂಗಡಗಿ ಅವರಿಗೆ ತಾಕತ್ತಿದ್ದರೆ ದೇಶದ ಒಬ್ಬನೇ ಒಬ್ಬ ಮೋದಿ ಅಭಿಮಾನಿಗೆ ಮುಟ್ಟಿ ನೋಡಲಿ ಅವರ ಪರಿಸ್ಥಿತಿ ಏನಾಗುವುದು ಎಂಬುದು ದೇಶದ ಯುವಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಶಿವರಾಜ ತಂಗಡಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಪ್ರಧಾನಿ ಮೋದಿ ಅವರ ವಿರುದ್ಧ ಹಗುರವಾಗಿ ನಾಲಿಗೆ ಹರಿಬಿಟ್ಟ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು .

ಈರಣ್ಣ ರೇವೂರ ಮಾತನಾಡಿ, ಅಬಕೀ ಬಾರ ಚಾರಸೋ ಘೋಷಣೆದೊಂದಿಗೆ ಮತ್ತೆ ಮೂರನೇ ಬಾರಿ ಮೋದಿ ಪ್ರಧಾನಿ ಆಗಲಿದ್ದಾರೆ. ಇದನ್ನು ಮನಗಂಡು ಹತಾಶೆಯಿಂದ ಶಿವರಾಜ ತಂಗಡಗಿ ನಾಲಿಗೆ ಹರಿಬಿಟ್ಟಿದಾರೆ ಎಂದರು.

ಈ ವೇಳೆ ಈರಣ್ಣ ರಾವೂರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ, ರಾಘವೇಂದ್ರ ಕಾಪಸೆ, ರಾಜಕುಮಾರ ಸಗಾಯಿ, ಶಂಕರ ಹೂಗಾರ, ರವಿಚಂದ್ರ ಉಪ್ಪಲದಿನ್ನಿ, ರವಿ ಬಿರಾದಾರ, ಅರುಣ ನಾಯಕ, ಪ್ರೇಮ ಬಿರಾದಾರ, ಜಗದೀಶ ಸುಣಗದ, ರೋಹಣ ಆಪ್ಟೆ, ಜ್ಯೋತಿ ಚವ್ಹಾಣ, ನಗರ ಮಂಡಳಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ವಂದಾಲಮಠ, ಜಿಲ್ಲೆಯ ಎಲ್ಲಾ ಮಂಡಲ ಯುವಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಜಿಲ್ಲೆಯ ಯುವ ಮೋರ್ಚ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.