ಬಾಂಗ್ಲಾ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರು ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಮೂಲಕ ಪ್ರಧಾನಮಂತ್ರಿಗೆ ಹಿಂದೂ ಸಂಘಟನೆಗಳ ಪ್ರಮುಖರ ಮನವಿ
ಕನ್ನಡಪ್ರಭ ವಾರ್ತೆ ಯಲ್ಲಾಪುರಬಾಂಗ್ಲಾ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರು ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಮತಾಂಧ ಶಕ್ತಿಗಳು ಅಲ್ಲಿನ ದೇವಸ್ಥಾನಗಳನ್ನು ನಾಶ ಮಾಡುತ್ತಿದ್ದಾರೆ. ಹಾಡುಹಗಲೇ ಹಿಂದೂಗಳ ಕಗ್ಗೊಲೆಯಾಗುತ್ತದೆ. ಹಿಂದು ಮನೆಗಳನ್ನು ಹುಡುಕಿ ಹುಡುಕಿ ಲೂಟಿ ಮಾಡುತ್ತಿದ್ದಾರೆ. ಪ್ರಶ್ನಿಸಿದವರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತಿವೆ. ಮಹಿಳೆಯರ ಮಾನ ಹರಣವಾಗುತ್ತಿದೆ. ಒಟ್ಟಾರೆ ಬಾಂಗ್ಲಾ ಹಿಂದೂಗಳ ಪರಿಸ್ಥಿತಿ ಅತ್ಯಂತ ಭಯಾನಕವಾಗಿದೆ.ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಧಾವಿಸಲೇಬೇಕಾದ ಅನಿರ್ವಾಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರ್ಯ ಆದಷ್ಟು ಬೇಗ ಆರಂಭವಾಗಬೇಕು. ಭಾರತದಲ್ಲಿರುವ ಬಾಂಗ್ಲಾ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿ, ಅಲ್ಲಿನ ಸಿಬ್ಬಂದಿಗಳನ್ನು ವಾಪಸ್ ಕಳಿಸಬೇಕು. ನಮ್ಮ ಗಡಿಗಳನ್ನು ತೆರವು ಮಾಡಿ, ನಿರಾಶ್ರಿತ ಹಿಂದೂಗಳನ್ನು ಭಾರತಕ್ಕೆ ಬರಮಾಡಿಕೊಳ್ಳಬೇಕು. ಬಾಂಗ್ಲಾ ನುಸುಳುಕೋರರನ್ನು ಮುಲಾಜಿಲ್ಲದೇ ಹೊರಗಟ್ಟಬೇಕು. ಅಗತ್ಯವಿದ್ದಲ್ಲಿ, ಯುದ್ಧವನ್ನಾದರೂ ಮಾಡಿ, ಬಾಂಗ್ಲಾ ಮತಾಂಧರ ಹುಟ್ಟಡಗಿಸಬೇಕು.
ಭಾರತದ ಶಾಂತಿಪ್ರಿಯ ಹಿಂದೂಗಳು ಮತ್ತಷ್ಟು ಸಹನೆ ಕಳೆದುಕೊಳ್ಳುವ ಮೊದಲು, ಭಾರತ ಸರ್ಕಾರ ಅಗತ್ಯ ಕ್ರಮಕ್ಕೆ ಮುನ್ನುಗ್ಗಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ವೆಂಕಟರಮಣ ಬೆಳ್ಳಿ, ಪ್ರಸಾದ ಹೆಗಡೆ, ಗಜಾನನ ನಾಯ್ಕ ತಳ್ಳಿಕೇರಿ, ಶ್ಯಾಮಿಲಿ ಪಾಟಣಕರ್, ರವಿ ದೇವಡಿಗ, ರಾಮಕೃಷ್ಣ ಕವಡಿಕೆರೆ, ಶ್ರೀನಿವಾಸ ಗಾಂವ್ಕರ ಇತರರಿದ್ದರು.