ರಾಣಿಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಆಗ್ರಹ

| Published : Oct 29 2024, 12:46 AM IST

ರಾಣಿಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ವ್ಯಾಪ್ತಿಯ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ರಾಣಿಬೆನ್ನೂರ ಶಹರದ ನೈರ್ಮಲ್ಯೀಕರಣ ಮತ್ತು ನಾಗರಿಕ ಹಿತರಕ್ಷಣೆ ವೇದಿಕೆ ಸದಸ್ಯರು ಸೋಮವಾರ ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ನಗರಸಭೆ ವ್ಯಾಪ್ತಿಯ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ರಾಣಿಬೆನ್ನೂರ ಶಹರದ ನೈರ್ಮಲ್ಯೀಕರಣ ಮತ್ತು ನಾಗರಿಕ ಹಿತರಕ್ಷಣೆ ವೇದಿಕೆ ಸದಸ್ಯರು ಸೋಮವಾರ ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. ಅಭಿವೃದ್ಧಿ ಹೊಂದುತ್ತಿರುವ ವಾಣಿಜ್ಯ ನಗರಿ ಎಂದು ಹೆಸರಾಗಿರುವ ನಗರದಲ್ಲಿ ಅತಿ ಹೆಚ್ಚು ಸಮಸ್ಯೆಗಳು ಜೀವಂತವಾಗಿವೆ. ನಗರ ವ್ಯಾಪ್ತಿಯ ಅನೇಕ ವಾರ್ಡ್‌ಗಳಲ್ಲಿ ರಸ್ತೆ, ಪಕ್ಕಾ ಗಟಾರ ನಿರ್ಮಾಣ ಹಾಗೂ ಉದ್ಯಾನಗಳ ಅಭಿವೃದ್ಧಿ ಮುಂತಾದ ಕೆಲಸಗಳಾಗಬೇಕಾಗಿದೆ. ಶಹರ ವ್ಯಾಪ್ತಿಯ ಪ್ರಮುಖ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕಾಗಿದೆ. ಅಕ್ರಮ ಮಾಡಿಕೊಂಡು ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕು. ದೊಡ್ಡಕೆರೆಗೆ ಚರಂಡಿ ನೀರು ನೇರವಾಗಿ ಹೋಗುತ್ತಿರುವುದನ್ನು ತಡೆಗಟ್ಟಿ ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕು. ನಗರದಲ್ಲಿ ಎಲ್ಲಿ ಬೇಕೆಂದರಲ್ಲಿ ಯಾವುದೇ ಕಾನೂನಿಗೆ ಬೆಲೆ ನೀಡದೇ ಕೋಳಿ ಮತ್ತು ಕುರಿ ಮಾಂಸ ಮಾರಾಟದ ಅಂಗಡಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಉಲ್ಲಂಘನೆ ಮಾಡಿ ಕಟ್ಟಿರುವ ಬಹುಮಹಡಿಗಳ ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಹನುಮಂತಪ್ಪ ಕಬ್ಬಾರ, ಕಿರಣ ಗುಳೇದ, ಯಲ್ಲಪ್ಪ ಚಿಕ್ಕಣ್ಣನವರ, ಸಂತೋಷಕುಮಾರ ಮುದ್ದಿ, ಮಂಜುನಾಥ ಸಂಭೋಜಿ, ಶಾರದಮ್ಮ ಅಂಗಡಿ, ಹಮೀದಾ ಶಿಡೇನೂರ, ರಾಜೇಶ ಅಂಗಡಿ, ವಿನಯ ಕಲಕತ್ತಿ, ದ್ಯಾಮನಗೌಡ ಬಸನಗೌಡ, ವೀರೇಶ ಬಳ್ಳಾರಿ, ತೀರ್ಥವ್ವ ಕಮ್ಮಾರ, ಫರೀದಾ ಕನವಳ್ಳಿ, ರಮೀಜಾ ಹಲಗೇರಿ ಮತ್ತಿತರರಿದ್ದರು.