ಸಾರಾಂಶ
ಮಾಲೂರು ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಡಾಂಬರ ಕಾಣದೇ ಕೇವಲ ಹಳ್ಳ ಕೊಳ್ಳಗಳ ದಾರಿಯಾಗಿದೆ.ಇಲ್ಲಿನ ಡಾ.ರಾಜ್ ವೃತ್ತ ಹಾಗೂ ರೈಲ್ವೇ ಸೇತುವೆಯ ವಾಲ್ಮೀಕಿ ವೃತದಲ್ಲಿ ಮೊಣಕಾಲಿನಷ್ಟು ಹಳ್ಳಗಳಿದ್ದು,ಬಾರಿ ವಾಹನ ಸೇರಿದಂತೆ ದ್ವಿಚಕ್ರಗಳು ಅಘಫಾತಕ್ಕೆ ಈಡಾಗುತ್ತಿವೆ. ಪ್ರತಿ ನಿತ್ಯ ಇದರಿಂದ ರಸ್ತೆ ಜಾಮ್ ಆಗಿ ಎರಡು ಬದಿಗಳಲ್ಲಿ ಕಿ.ಮೀ.ಉದ್ದದ ವಾಹನಗಳು ನಿಲ್ಲುತ್ತಿವೆ.
ಕನ್ನಡಪ್ರಭ ವಾರ್ತೆ ಮಾಲೂರು
ಮಾಲೂರು ತಾಲೂಕಿನಾದ್ಯಂತ ರಸ್ತೆಗಳು ಸಂಪೂರ್ಣ ಹಾಳಾಗಿದ್ದು,ದುರಸ್ಥಿಗೆ ನಿರ್ಲಕ್ಷ ತೋರಿತ್ತಿರುವ ಇಲಾಖೆಯು ಕೊಡಲೇ ಸುಗುಮ ಸಂಚಾರಕ್ಕಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಲ್ಲಿನ ಲೋಕೋಪಯೋಗಿ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ದೊಡ್ಡಶಿವಾರ ನಾಣಿ ಅವರು ಕಳೆದ ಹಲವು ವರ್ಷಗಳಿಂದ ತಾಲೂಕಿನಾದ್ಯಂತ ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಅದನ್ನು ಅಭಿವೃದ್ಧಿ ಪಡೆಸದೆ ತಾಲೂಕು ಆಡಳಿತ ನಿರ್ಲಕ್ಷ ತೋರುತ್ತಿದೆ ಎಂದು ಆರೋಪಿಸಿದರು.ಡಾಂಬರ್ ಕಾಣದ ರಸ್ತೆಗಳು
ಅದರಲ್ಲೂ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಡಾಂಬರ ಕಾಣದೇ ಕೇವಲ ಹಳ್ಳ ಕೊಳ್ಳಗಳ ದಾರಿಯಾಗಿದೆ.ಇಲ್ಲಿನ ಡಾ.ರಾಜ್ ವೃತ್ತ ಹಾಗೂ ರೈಲ್ವೇ ಸೇತುವೆಯ ವಾಲ್ಮೀಕಿ ವೃತದಲ್ಲಿ ಮೊಣಕಾಲಿನಷ್ಟು ಹಳ್ಳಗಳಿದ್ದು,ಬಾರಿ ವಾಹನ ಸೇರಿದಂತೆ ದ್ವಿಚಕ್ರಗಳು ಅಘಫಾತಕ್ಕೆ ಈಡಾಗುತ್ತಿವೆ. ಪ್ರತಿ ನಿತ್ಯ ಇದರಿಂದ ರಸ್ತೆ ಜಾಮ್ ಆಗಿ ಎರಡು ಬದಿಗಳಲ್ಲಿ ಕಿ.ಮೀ.ಉದ್ದದ ವಾಹನಗಳು ನಿಲ್ಲುತ್ತಿವೆ.ಇದರಿಂದ ರೈಲಿಗೆ ಹೋಗುವರು, ಶಾಲೆಯ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದರು.ಸ್ಪಂದಿಸದಿದ್ದರೆ ಹೋರಾಟ
ಲೋಕೋಪಯೋಗಿ ಅಧಿಕಾರಿಗಳು ತಮ್ಮ ಇಲಾಖೆಗೆ ಹೋಗುವ ದಾರಿಯೇ ಹೀಗಿರಬೇಕಾದರೆ ಬೇರೆಡೆ ಪರಿಸ್ಥಿತಿ ಹೇಗಿರಬೇಕು ಎಂದ ನಾಣಿ ಅವರು ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಈ ಪರಿಸ್ಥಿತಿಗೆ ಕಾರಣ. ನಿತ್ಯ ಪ್ರಯಾಣೀಕರು ಜೀವ ಹಿಡಿದುಕೊಂಡು ಪ್ರಯಾಣಿಸುತ್ತಿರುವ ತಾಲೂಕಿನ ರಸ್ತೆಗಳಿಗೆ ಉತ್ತಮ ಗುಣಮಟ್ಟದ ಡಾಂಬರು ಹಾಕಿಸಿ ಜೀವ ಹಾನಿ,ವಾಹನ ಹಾನಿಯನ್ನು ಉಳಿಸಿ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲಿ ಉಗ್ರ ಹೋರಾಟ ಅನಿರ್ವಾಯವಾಗಲಿದೆ ಎಂದು ಎಚ್ಚರಿಸಿದರು.ವೇದಿಕೆಯ ಅಮರಾವತಿ.ಎನ್.ದಯಾನಂದ್ , ಕೊಪ್ಪಚಂದ್ರು, ಎಂ.ಎಸ್.ಮಣಿ, ಚಿರಂಜೀವಿ, ನರೇಶ್, ಮಿಥನ್ , ನವೀನ್ , ಬಿ.ಎಸ್.ಮಂಜುನಾಥ್ ,ಶಿವಕುಮಾರ್, ವೆಂಕಟೇಶ್,ಅಮರನಾಥ್ ಪೂಜಾರಿ ಇನ್ನಿತರರು ಇದ್ದರು.