ಸಾರಾಂಶ
ಶೃಂಗೇರಿತಾಲೂಕಿನ ಮೆಣಸೆ ಪಂಚಾಯಿತಿ ಕೆರೆಮನೆ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿ ಮಾಡಲು ಅಗತ್ಯ ಅನುದಾನ ನೀಡುವಂತೆ ಶಾಲೆ ಹಳೆ ವಿದ್ಯಾರ್ಥಿಗಳು ಬೆಂಗಳೂರಿನ ವಿಕಾಸ ಸೌಧದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣಾ ರವರಿಗೆ ಮನವಿ ಸಲ್ಲಿಸಿದರು.
ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣಾಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಶೃಂಗೇರಿತಾಲೂಕಿನ ಮೆಣಸೆ ಪಂಚಾಯಿತಿ ಕೆರೆಮನೆ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿ ಮಾಡಲು ಅಗತ್ಯ ಅನುದಾನ ನೀಡುವಂತೆ ಶಾಲೆ ಹಳೆ ವಿದ್ಯಾರ್ಥಿಗಳು ಬೆಂಗಳೂರಿನ ವಿಕಾಸ ಸೌಧದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣಾ ರವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಶಾಲೆ ಹಿರಿಯ ವಿದ್ಯಾರ್ಥಿನಿ ಲಾವಣ್ಯ 1964ರಲ್ಲಿ ಆರಂಭಗೊಂಡ ಈ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ 2016 ರಲ್ಲಿ ಮುಚ್ಚಲ್ಪಟ್ಟಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶ ಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿದ್ದಾರೆ. ಶಾಲೆ ಮುಚ್ಚಿದ ನಂತರ ಶಾಲಾ ಕಟ್ಟಡವನ್ನು ಗ್ರಾಮದ ಸಂಘ ಸಂಸ್ಥೆಗಳ ಸಭೆ ಗಳಿಗೆ, ಸಭೆ ಸಮಾರಂಭಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಶಾಲಾ ಕಟ್ಟಡ, ಮೇಲ್ಚಾವಣಿಗಳು ಶಿಥಿಲಗೊಳ್ಳುತ್ತಿದ್ದು ಕುಸಿಯುವ ಹಂತಕ್ಕೆ ತಲುಪುತ್ತಿದೆ. ಕಟ್ಟಡ ಸಂರಕ್ಷಿಸಬೇಕಿದೆ. ಆದ್ದರಿಂದ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಯಾಗಬೇಕು ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಡಾ.ಆರತಿ ಕೃಷ್ಣ ಸರ್ಕಾರಿ ಕಟ್ಟಡಗಳನ್ನು ಉಳಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಶಾಲೆ ದುರಸ್ತಿ ಮಾಡಿಸಿ ಲಕ್ಷಾಂತರ ರು. ಉಳಿಸಬೇಕಿದೆ. ಶಾಲಾ ಕಟ್ಚಡ ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಗಮನಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಗಮನಕ್ಕೆ ತರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕೆರೆಮನೆ ಪ್ರಭಾಕರ್, ಕೆ.ಎಲ್.ಗೋಪಾಲ ಕೃಷ್ಣ, ಕಾಮ್ಲೆ ಉಮೇಶ್, ಕೆರೆಮನೆ ಭರತ್ ರಾಜ್ ಮತ್ತಿತರರು ಇದ್ದರು.18 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಕೆರೆಮನೆ ಶಾಲೆ ದುರಸ್ಥಿಗೆ ಅಗತ್ಯ ಅನುಧಾನ ಬಿಡುಗಡೆ ಮಾಡುವಂತೆ ಒತ್ತಯಿಸಿ ಹಳೇ ವಿದ್ಯಾರ್ಥಿಗಳು ವಿಕಾಸ ಸೌದದಲ್ಲಿ ಡಾ.ಆರತೀ ಕೃಷ್ಣಾರವರಿಗೆ ಮನವಿ ,ಸಲ್ಲಿಸಿದರು.