ರಸ್ತೆ ಅಗಲೀಕರಣ, ಮೂಲಭೂತ ಸೌಕರ್ಯಕ್ಕೆ ಆಗ್ರಹ

| Published : Oct 05 2024, 01:33 AM IST

ಸಾರಾಂಶ

ಚಳ್ಳಕೆರೆ ತಾಲೂಕಿತ ಪರಶುರಾಮರ ಹೋಬಳಿ ವ್ಯಾಪ್ತಿಯ ಅಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಿದ್ದೇಶ್ವರನ ದುರ್ಗ ಗ್ರಾಮ ಪಂಚಾಯಿತಿಯ ಪಿಲ್ಲಹಳ್ಳಿ ಗ್ರಾಮದ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಪ್ರಯಾಣಿಕರ ತಂಗುದಾಣ, ಕುಡಿಯುವ ನೀರು, ಶೌಚಾಲಯ ಇಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಪಿಲ್ಲಹಳ್ಳಿ ಗ್ರಾಮದ ಮುಖಂಡ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಫ್ರಭ ವಾರ್ತೆ ಪರಶುರಾಂಪುರ

ಚಳ್ಳಕೆರೆ ತಾಲೂಕಿತ ಪರಶುರಾಮರ ಹೋಬಳಿ ವ್ಯಾಪ್ತಿಯ ಅಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಿದ್ದೇಶ್ವರನ ದುರ್ಗ ಗ್ರಾಮ ಪಂಚಾಯಿತಿಯ ಪಿಲ್ಲಹಳ್ಳಿ ಗ್ರಾಮದ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಪ್ರಯಾಣಿಕರ ತಂಗುದಾಣ, ಕುಡಿಯುವ ನೀರು, ಶೌಚಾಲಯ ಇಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಪಿಲ್ಲಹಳ್ಳಿ ಗ್ರಾಮದ ಮುಖಂಡ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 30 ವರ್ಷಗಳಿಂದ ನಾಗಪ್ಪನಹಳ್ಳಿ ಗೇಟ್, ಆಂಧ್ರ ಮತ್ತು ಕರ್ನಾಟಕದ ಕೆಲವು ತಾಲೂಕುಗಳಗೆ ಸಂಪರ್ಕ ಕಲ್ಪಸುವ ಮುಖ್ಯ ವೃತ್ತವಾಗಿದೆ. ಆಂಧ್ರ ರಾಜ್ಯದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ, ರಾಯದುರ್ಗ, ಶ್ರೀ ಸತ್ಯ ಸಾಯಿ ಜಿಲ್ಲೆಯ ಪೆನಗೊಂಡ, ಮಡಕಶಿರಾ, ಹಿಂದೂಪುರ, ಕದ್ರಿ ಹಾಗೂ ತಿರುಪತಿ ಮತ್ತಿತ್ತರ ಮುಖ್ಯ ಸ್ಥಳಗಳಿಂದ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಇಳಿಯುತ್ತಾರೆ. ಬಂದಾಗ ವಿಶ್ರಾಂತಿ, ಕುಡಿಯುವ ನೀರು, ಶೌಚಾಲಯವಿಲ್ಲದೆ ಪ್ರಯಾಣಿಕರು, ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನೂರಾರು ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಲು ಇಕ್ಕಟ್ಟಿನ ಜಾಗ. ವಾಹನಗಳನ್ನು ನಿಲ್ಲಿಸಲಿಕ್ಕೆ ಸ್ಥಳಾವಕಾಶ ಇಲ್ಲದಂತೆ ಬೇರೆ ಅಂಗಡಿ, ಹೋಟೆಲ್‌ರವರು, ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ನಿತ್ಯ ಓಡಾಡುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಜಾಗವಿಲ್ಲದಂತಾಗಿದೆ ಎಂದು ತಿಳಿಸಿದರು.

ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಪ್ರಾಣಪಾಯವೂ ಹೆಚ್ಚಿದೆ. ಆಟೋ, ಲಾರಿಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇಲ್ಲ. ರಸ್ತೆ ಬದಿಗೆ ಅಂಗಡಿಗಳು, ಹೋಟೆಲ್‌ಗಳು ಇರುವುದರಿಂದ ವಾಹನಗಳು ಒಂದಕೊಂದು ಮುಖಾಮುಖಿ ಡಿಕ್ಕಿಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಮೇಲ್ಕಂಡ ಅಗತ್ಯ ಮೂಲಸೌಲಭ್ಯಗಳ ಹಾಗೂ ಸಮಸ್ಯೆಗಳ ಸಂಬಂಧ ಅನೇಕ ಅರ್ಜಿಗಳನ್ನು ಕೊಡಲಾಗಿದೆ. ಪಿಲ್ಲಹಳ್ಳಿ ಗ್ರಾಮದ ಮುಖಂಡ ಕೆ.ಎಸ್‌. ರವೀಂದ್ರನಾಥ್‌ರವರು ಲೋಕೋಪಯೋಗಿ ಇಲಾಖೆ ಮುಖ್ಯಸ್ಥರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು , ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ, ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ, ಚಳ್ಳಕೆರೆ ನಗರಸಭೆ ಕಾರ್ಯಾಲಯ ಜನಸಂಪರ್ಕ ಸಭೆಯಲ್ಲಿ ಮನವಿ ಅರ್ಜಿಗಳನ್ನು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಪಿಲ್ಲಹಳ್ಳಿ ಚಿತ್ರಲಿಂಗಪ್ಪ ವಿಷಾದ ವ್ಯಕ್ತಪಡಿಸಿದರು.