ಸಾರಾಂಶ
ಬ್ಯಾಡಗಿ ತಾಲೂಕಿನ ಮಾಸೂರ ಗ್ರಾಮದ ಸ್ವಾತಿ ಬ್ಯಾಡಗಿ ಎಂಬ ಯುವತಿಯನ್ನು ಲವ್ ಜಿಹಾದ್ ಎಂಬ ಖೆಡ್ಡಾಕ್ಕೆ ಬೀಳಿಸಿ ಆಕೆಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕಿನ ಎಬಿವಿಪಿ ಕಾರ್ಯಕರ್ತರು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಬ್ಯಾಡಗಿ ತಾಲೂಕಿನ ಮಾಸೂರ ಗ್ರಾಮದ ಸ್ವಾತಿ ಬ್ಯಾಡಗಿ ಎಂಬ ಯುವತಿಯನ್ನು ಲವ್ ಜಿಹಾದ್ ಎಂಬ ಖೆಡ್ಡಾಕ್ಕೆ ಬೀಳಿಸಿ ಆಕೆಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕಿನ ಎಬಿವಿಪಿ ಕಾರ್ಯಕರ್ತರು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕು ಸಂಚಾಲಕ ಅಭಿಷೇಕ ಉಮಚಗಿ ಮಾತನಾಡಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸೂರ ಗ್ರಾಮದ ಯುವತಿ ರಾಣಿಬೆನ್ನೂರಿನ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿ ಸ್ವಾತಿ ಬ್ಯಾಡಗಿ ಎಂಬ ಯುವತಿಯನ್ನು ಲವ್ ಜಿಹಾದ್ ಮೂಲಕ ನಯ್ಯಾಜ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ. ಸ್ವಾತಿ ಶವ 7 ದಿನಗಳ ನಂತರ ಪತ್ತೆಯಾಗಿದೆ ಎಂದರು.ಅಲ್ಲದೆ ಪೊಲೀಸರು ಸ್ವಾತಿಯ ಪಾಲಕರಿಗೆ ವಿಷಯ ತಿಳಿಸದೆ ಅನಾಥ ಶವವೆಂದು ಸುಟ್ಟು ಹಾಕಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಅನುಮಾನ ಬರುತ್ತದೆ. ಸರ್ಕಾರ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಕೊಲೆ ಮಾಡಿದ ಪಾಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಪ್ರಕಾಶ ಕುಂಬಾರ, ಅರುಣ ಬಾರ್ಕಿ, ಸಂಜನಾ ಪಾಟೀಲ, ತೇಜಸ್ವಿನಿ ಕ್ಷತ್ರಿ, ಅಭಿಷೇಕ ಈಶನಗೌಡರ, ನಾಗಭೂಷಣ ಕ್ಷತ್ರಿ, ಅರವಿಂದ ಉಚ್ಚಂಗಿ, ವೀರೇಶ ಕುಂಬಾರ, ವಿನಾಯಕ ಹುಂಬಿ, ವಿನಾಯಕ ಕುಂಬಾರ, ಕಾರ್ತಿಕ ಹುನಗುಂದ ಸೇರಿದಂತೆ ಅನೇಕರು ಇದ್ದರು.