ಸಮುದಾಯ ಭವನಕ್ಕೆ ಸೂಕ್ತ ನಿವೇಶನ ಆಗ್ರಹ

| Published : Feb 23 2024, 01:49 AM IST

ಸಾರಾಂಶ

ಕುಂಬಾರ ಸಮಾಜದ ಸಮುದಾಯ ಭವನಕ್ಕೆ ಸೂಕ್ತ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕುಂಬಾರ ಸಮುದಾಯದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹುನಗುಂದ

ಕುಂಬಾರ ಸಮಾಜದ ಸಮುದಾಯ ಭವನಕ್ಕೆ ಸೂಕ್ತ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕುಂಬಾರ ಸಮುದಾಯದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ ತಾಲೂಕು ಆಡಳಿತದ ಕಚೇರಿ ಎದುರು ಪ್ರತಿಭಟನೆ ನಡೆಸಿ ನೇತೃತ್ವ ವಹಿಸಿದ್ದ ಸಮಾಜದ ಯುವ ಮುಖಂಡ ವಿನೋದ ಕುಂಬಾರ ಮಾತನಾಡಿ, ಮಣ್ಣಿನ ಪಾತ್ರೆ ತಯಾರಿಸುವ ಕುಂಬಾರಿಕೆ, ಉದ್ಯೋಗ ಅಧುನಿಕ ಭರಾಟೆಯಲ್ಲಿ ಸಿಕ್ಕಿ ನಲುಗುತ್ತಿದೆ. ಕುಂಬಾರ ಸಮುದಾಯಕ್ಕೆ ನಿವೇಶನ ಒದಗಿಸಿ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

ಸಮಾಜದ ಹಿರಿಯರಾದ ಶಿವಪುತ್ರಪ್ಪ ಕುಂಬಾರ ಮಾತನಾಡಿ, ಪಟ್ಟಣದ ಪುರಸಭೆ ಜಾಗದಲ್ಲಿ ನಾಡಿನ ಸಂತ. ತಮ್ಮ ವಚನದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಸರ್ವಜ್ಞನವರ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

ಮಲ್ಲಪ್ಪ ಕುಂಬಾರ, ಸಂಗಣ್ಣ, ಕುಂಬಾರ, ಎಸ್.ಪಿ, ಕುಂಬಾರ, ಕಮತಗಿಯ ಮಲ್ಲಪ್ಪ ಕುಂಬಾರ, ಪರಸಪ್ಪ ಕುಂಬಾರ, ಭೀಮಪ್ಪ ಕುಂಬಾರ, ಮಹೇಶ ಕುಂಬಾರ, ಕೆ.ಎಚ್, ಹೊಸಮನಿ, ಈರಪ್ಪ ಕುಂಬಾರ, ಎಂ.ಎಸ್. ಕುಂಬಾರ ಮತ್ತು ಎಂ.ಬಿ. ಕುಂಬಾರ ಪಾಲ್ಗೊಂಡಿದ್ದರು.