ರಟಕಲ್‌ ಪಿಎಚ್‌ಸಿ ನರ್ಸ್‌ಗಳ ಅಮಾನತಿಗೆ ಆಗ್ರಹ

| Published : Mar 03 2024, 01:32 AM IST

ಸಾರಾಂಶ

ಬೈಬಲ್‌ ಪಠಿಸಿ, ನಂಬಿಸಿ ಕ್ರೈಸ್ತ ಧರ್ಮಕ್ಕೆ ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಿಎಚ್‌ಸಿ ನರ್ಸ್‌ಗಳನ್ನು ಅಮಾನತು ಮಾಡಲು ಆಗ್ರಹಿಸಲಾಗಿದೆ.

ಕಾಳಗಿ: ತಾಲೂಕಿನ ರಟಕಲ್ ಗ್ರಾಮದಲ್ಲಿ ಇತ್ತೀಚೆಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗೃಹಗಳಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಹಣದ ಆಮಿಷ ಒಡ್ಡಿ ಗ್ರಾಮದ ಕೆಲ ಜನರಿಗೆ ಕ್ರೈಸ್ತ ಧರ್ಮದವರು, ಬೈಬಲ್ ಪಠಿಸುತ್ತಾ, ಸಂಪೂರ್ಣ ಕ್ರೈಸ್ತ ಧರ್ಮಕ್ಕೆ ಹೊಂದಿಕೊಳ್ಳುವಂತೆ ಮತಾಂತರ ಧಂದೆ ನಡೆಸುತ್ತಿರುವ ರಟಕಲ್ ಆರೋಗ್ಯ ಕೇಂದ್ರದ ನರ್ಸ್‌ಗಳಿಗೆ ಸೇವೆಯಿಂದ ಮುಕ್ತಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೇಂದು ಕಲಬುರಗಿ, ಕಾಳಗಿ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದರು.

ಕಾಳಗಿ ಪಟ್ಟಣದ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆ ನೇರ ಅಂಬೇಡ್ಕರ್ ಸರ್ಕಲನಲ್ಲಿ ಬಿಸಿಲು ಲೆಕ್ಕಿಸದೆ ಕೆಲ ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಘಮಾವತಿ ರಾಠೋಡ ಪ್ರತಿಭಟನೆ ಶಾಂತಿಗೊಳಿಸಿ ಪ್ರತಿಭಟನೆಕಾರರ ಮನವಿ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು 9 ಜನ ಹಿಂದೂ ಸಂಘಟನಾಕಾರರ ಮೇಲೆ ಮಾಡಿರುವ ಸುಳ್ಳು ಜಾತಿ ನಿಂದನೆಯ ಕೇಸ್ ವಾಪಸ್ ಪಡೆಯಬೇಕು. ಮತಾಂತರ ದಂಧೆಗೆ ಕೈ ಹಾಕಿರುವ ನರ್ಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಹಿಂದೂ ಜಾಗೃತಿ ಸೇನೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಹಿಂದೂ ಕಾರ್ಯಕರ್ತ ಭೀಮರಾವ ಮಲಘಾಣ, ಶಿವಕುಮಾರ ಮುಕರಂಬಿ, ಶಿವಕುಮಾರ್ ಕಮಕನೂರ, ಮಂಜುನಾಥ ಟೆಂಗಳಿ, ಬಾಬು ನಾಟೀಕಾರ, ಕಾಶೀನಾಥ ರಾಜಾಪೂರ, ರಾಜಶೇಖರ ಸೀಳಿನ, ಉದಯ ಸುಠಾಣ, ಕಿರಣ ನಾಮದಾರ, ಬಲರಾಮ ವಲ್ಯಾಪುರೆ, ರಮೇಶ ಮಡಿವಾಳ ಇದ್ದರು.