ಸಹಜವಾಗಿ ಮಳೆಗಾಲದಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆ ಪೂರ್ಣಪ್ರಮಾಣದಲ್ಲಿ ಇರುವುದಿಲ್ಲ. ಆದರೆ ಇದೀಗ ಮಳೆ ಕೊರತೆ, ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಲ,ಪವನ, ಸೋಲಾರ್ ಸೇರಿ ಇತರೆ ಪರ್ಯಾಯ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಜತೆ ಜತೆಗೆ ಬೇಡಿಕೆಯಾನುಸಾರ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಯು ಹೆಚ್ಚಿನ ಪ್ರಮಾಣದಲ್ಲಿ ಸಾಗಿದೆ.

- ಆರ್‌ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್‌ನಿಂದ ಬೇಡಿಕೆಗಾನುಸಾರ ಉತ್ಪಾದನೆ । ರಾಜ್ಯದಲ್ಲಿ 11,867 ಮೆಗಾ ವ್ಯಾಟ್ ತಯಾರಿ

-------

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಸಹಜವಾಗಿ ಮಳೆಗಾಲದಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆ ಪೂರ್ಣಪ್ರಮಾಣದಲ್ಲಿ ಇರುವುದಿಲ್ಲ. ಆದರೆ ಇದೀಗ ಮಳೆ ಕೊರತೆ, ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಲ,ಪವನ, ಸೋಲಾರ್ ಸೇರಿ ಇತರೆ ಪರ್ಯಾಯ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಜತೆ ಜತೆಗೆ ಬೇಡಿಕೆಯಾನುಸಾರ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಯು ಹೆಚ್ಚಿನ ಪ್ರಮಾಣದಲ್ಲಿ ಸಾಗಿದೆ.

ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಎಂಟರ ಪೈಕಿ ಆರು ಘಟಕಗಳಿಂದ, ಯರಮರಸ್ ಆತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ (ವೈಟಿಪಿಎಸ್‌) ಸ್ಥಾವರದ ಎರಡು ಘಟಕಗಳ ಪೈಕಿ ಒಂದರಿಂದ ಮತ್ತು ಅದೇ ರೀತಿ ಪಕ್ಕದ ಬಳ್ಳಾರಿಯ ವೈಟಿಪಿಎಸ್‌ನ ಎಲ್ಲ ಮೂರೂ ಘಟಕಗಳಿಂದ ಪೂರ್ಣ ಪ್ರಮಾಣದ ಸಾಮರ್ಥ್ಯದಲ್ಲಿಯೇ ಕರೆಂಟ್ ಉತ್ಪಾದಿಸಲಾಗುತ್ತಿದೆ.

ಕಳೆದ ವರ್ಷದ ಮಳೆಗಾಲದ ಸಮಯದಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿದ್ದರಿಂದ ಪರ್ಯಾಯ ಮೂಲಗಳಿಂದ ಕರೆಂಟ್‌ ಉತ್ಪಾದನೆ ನಡೆದಿದ್ದು, ಆದರೆ ಈ ಸಲ ಪರಿಸ್ಥಿತಿ ಬದಲಾಗಿದ್ದರಿಂದ ಪರ್ಯಾಯ ಮೂಲಗಳಾದ ಜಲ, ಪವನ ಮೂಲಗಳಿಂದ ಕರೆಂಟ್‌ ಕಡಿಮೆ ಉತ್ಪಾದನೆಯಾಗುತ್ತಿರುವುದರಿಂದ ಸಹಜವಾಗಿಯೇ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕರೆಂಟ್‌ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ.

ವಿದ್ಯುತ್‌ ಉತ್ಪಾದನೆ ಮಾಹಿತಿ: ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಒಂದೇ ಘಟಕವು ಹಳೆಯದಾಗಿದ್ದರಿಂದ ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾರ್ಷಿಕ ನಿರ್ವಹಣೆ ಹಿನ್ನೆಲೆಯಲ್ಲಿ ಹಲವು ತಿಂಗಳಿನಿಂದ 4ನೇ ಘಟಕವು ಸ್ಥಳತಗೊಂಡಿದೆ. ಉಳಿದಂತೆ 210 ಮೆಗಾ ವ್ಯಾಟ್‌ ಸಾಮರ್ಥ್ಯದ 2 ನೇ ಘಟಕದಿಂದ 182 ಮೆಗಾ ವ್ಯಾಟ್‌, 3ನೇ ಘಟಕದಿಂದ 169, 5ನೇ ಘಟಕದಿಂದ 145 ಮತ್ತು 6ನೇ ಘಟಕದಿಂದ 170 ಮೆಗಾ ವ್ಯಾಟ್‌, 7ನೇ ಘಟಕದಿಂದ 198 ಮೆಗಾ ವ್ಯಾಟ್ ಮತ್ತು 250 ಮೆಗಾ ವ್ಯಾಟ್‌ ಸಾಮರ್ಥ್ಯದ 8 ನೇ ಘಟಕದಿಂದ 212 ಮೆಗಾ ವ್ಯಾಟ್‌ ಸೇರಿ ಒಟ್ಟಾರೆ 1066 ಮೆಗಾ ವ್ಯಾಟ್ ಕರೆಂಟ್‌ ಉತ್ಪಾದಿಸಲಾಗುತ್ತಿದೆ. ವೈಟಿಪಿಎಸ್‌ನ ಎರಡೂ ಘಟಕಗಳಲ್ಲಿ ತಾಂತ್ರಿಕ ದೋಷದಿಂದ 1ನೇ ಘಟಕ ಬಂದಾಗಿದ್ದು, 2ನೇ ಘಟಕದಿಂದ 646 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ. ಇನ್ನು ಪಕ್ಕದ ಬಿಟಿಪಿಎಸ್‌ನ ಮೂರೂ ಘಟಕಗಳಿಂದ ಕ್ರಮವಾಗಿ 418,391 ಮತ್ತು 602 ಮೆಗಾ ವ್ಯಾಟ್ ಸೇರಿ ಒಟ್ಟು 1400 ಮೆಗಾ ವ್ಯಾಟ್ ಕರೆಂಟ್‌ ಉತ್ಪಾದಿಸುತ್ತಿದ್ದು, ಹೀಗೆ ಕಲ್ಲಿದ್ದಲು ಆಧರಿಸಿ ಮೂರು ಸ್ಥಾವರಗಳಿಂದ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಿಂದ ಒಟ್ಟಾರೆ ಸುಮಾರ 3,102 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.

------ಬಾಕ್ಸ್------

ರಾಜ್ಯದ ಬೇಡಿಕೆ ಉತ್ಪಾದನೆ

ಬುಧವಾರ ಸಂಜೆ ಸಮಯಕ್ಕೆ ರಾಜ್ಯದಲ್ಲಿ 11,727 ಮೆಗಾ ವ್ಯಾಟ್‌ ವಿದ್ಯುತ್‌ ಬೇಡಿಕೆಯಲ್ಲಿ ರಾಜ್ಯದ ಜಲ, ಪವನ-ಸೋಲಾರ ಹಾಗೂ ಶಾಖೋತ್ಪನ್ನದ (3,090 ಮೆಗಾ ವ್ಯಾಟ್‌ ಶಾಖೋತ್ಪನ್ನ, 1136 ಮೆಗಾ ವ್ಯಾಟ್‌ಶಾಖೋತ್ಪನ್ನ ಪಿಪಿಐ, 2217 ಮೆಗಾ ವ್ಯಾಟ್ ಜಲ,1989 ಮೆಗಾ ವ್ಯಾಟ್ ಪವನ, 155 ಮೆಗಾ ವ್ಯಾಟ್ ಸೋಲಾರ್, 378 ಮೆಗಾ ವ್ಯಾಟ್‌ ಇತರ) ಮೂಲಗಳಿಂದ ಒಟ್ಟು 11,867 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸುತ್ತಿದ್ದು, ಸಿಜಿಎಸ್ ನಿಂದ 2,715 ಮೆಗಾವ್ಯಾಟ್ ಕರೆಂಟ್ ಲಭ್ಯವಾಗುತ್ತಿದೆ ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.

----ಫೋಟೊ------

19ಕೆಪಿಆರ್‌ಸಿಆರ್ 03:

ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಚಿತ್ರ.