ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತುಮಕೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮಾಜಿ. ಸಚಿವ ಜೆ.ಸಿ. ಮಾಧುಸ್ವಾಮಿಗೆ ಟಿಕೆಟ್ ನಿಡುವಂತೆ ಒತ್ತಾಯಿಸಿ ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ಒತ್ತಾಯಿಸಿ ಪತ್ರಿಭಟನೆ ಮಾಡಿದರು.ನಗರದ ಸಿಂಗ್ರಿ ನಂಜಪ್ಪ ವೃತ್ತ ಬಳಿ ಕೆಲ ಸಮಯ ರಸ್ತೆ ತಡೆ ನಡೆಸಿದ ಅಭಿಮಾನಿಗಳು ಬಿಜೆಪಿಯ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿ ಜೆ.ಸಿ. ಮಾಧುಸ್ವಾಮಿಗೆ ಟಿಕೇಟ್ ನೀಡಬೇಕು. ತುಮಕೂರು ಜಿಲ್ಲೆಯ ಉಳಿವಿಗಾಗಿ, ನಮ್ಮ ಹೇಮಾವತಿ, ಎತ್ತಿನಹೊಳೆ ಮತ್ತು ಭದ್ರಾ ನೀರಿಗಾಗಿ ಮಾಧುಸ್ವಾಮಿಯವರ ಅವಶ್ಯಕತೆ ಇದೆ. ಕೇಂದ್ರದ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ತಾಕತ್ತು ಅವರಿಗಿದೆ. ಈ ಹಿಂದೆ ಜಿಲ್ಲಾ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಹಾಗೂ ಜನಪರ ಕೆಲಸ ಮಾಡಿದ್ದಾರೆ. ನೀರಾವರಿಗಾಗಿ ಹೋರಾಟ ಮಾಡಿ ನೀರು ಹರಿಸಿದ್ದಾರೆ. ಜಿಲ್ಲೆಯಾದ್ಯಂತ ಉತ್ತಮ ಹೆಸರು ಪಡೆದಿದ್ದು, ಎಲ್ಲರಿಗೂ ಪರಿಚಿತ ರಾಗಿದ್ದು ಟಿಕೆಟ್ ನೀಡಿದರೆ ಗೆಲುವು ಕಟ್ಟಿಟ್ಟ ಬುತ್ತಿ.ಈ ಬಗ್ಗೆ ಹೈಕಮಾಂಡ್ ಗಮನ ಹರಿಸಿ ಟಿಕೆಟ್ ನೀಡಬೇಕು. ವಿ. ಸೋಮಣ್ಣನವರಿಗೆ ಟಿಕೆಟ್ ಕೊಟ್ಟರೆ ಸೋಲು ಖಚಿತ. ಈ ಭಾಗದ ಜನರಿಗೆ ವಿ.ಸೋಮಣ್ಣ ಗೊತ್ತೇ ಇಲ್ಲ. ಇವರು ಹೊರಗಿ ನಿಂದ ಬಂದು ತುಮಕೂರಿನಲ್ಲಿ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಗಳು ಗೋ ಬ್ಯಾಕ್ ಸೋಮಣ್ಣ ಎಂಬ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದಿರುವ ಮಾಧುಸ್ವಾಮಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಆಗ್ರಹಿಸಿದರು.