ಸಾರಾಂಶ
ಸರ್ಕಾರದ ಮಾರ್ಗಸೂಚಿ ಅನ್ವಯ ಶಿವರಾಮಪುರ ಗ್ರಾಮವನ್ನು ಕಂದಾಯ ಗ್ರಾಮ ಮಾಡಬೇಕೆಂದು ಕುಣಿಗಲ್ ತಹಸೀಲ್ದಾರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕನ್ನಡ ಪ್ರಭ ವಾರ್ತೆ ಕುಣಿಗಲ್
ಸರ್ಕಾರದ ಮಾರ್ಗಸೂಚಿ ಅನ್ವಯ ಶಿವರಾಮಪುರ ಗ್ರಾಮವನ್ನು ಕಂದಾಯ ಗ್ರಾಮ ಮಾಡಬೇಕೆಂದು ಕುಣಿಗಲ್ ತಹಸೀಲ್ದಾರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಶಿವರಾಮಪುರ ಗ್ರಾಮದಲ್ಲಿ ಸುಡುಗಾಡು ಸಿದ್ದ ಅಲೆ ಮಾರಿ ಸಮುದಾಯ ವಾಸವಾಗಿದ್ದು 150 ವರ್ಷಗಳಿಂದ ಇಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ ಆದರೆ ಇವರು ವಾಸಿಸುವ ಜಾಗವನ್ನು ಸರ್ಕಾರ ಅಧಿಕೃತವಾಗಿ ದಾಖಲೆ ಮಾಡಿರುವುದಿಲ್ಲ ಇವತ್ತಿಗೂ ಮಜರೆ ಗ್ರಾಮವಾಗಿದ್ದು ಬಂಡಿಹಳ್ಳಿಯೇ ದಾಖಲೆಯಾಗಿರುತ್ತದೆ. ಕರ್ನಾಟಕ ಸರ್ಕಾರ ದಾಖಲೆಗಳಿಲ್ಲದ ಹಟ್ಟಿ, ಹಾಡಿ, ಕಾಲೋನಿ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯಗ್ರಾಮ ಮಾಡಬೇಕೆಂದು 2018 ರಲ್ಲಿಯೇ ಆದೇಶ ಮಾಡಿದ್ದರೂ ನಮ್ಮ ಗ್ರಾಮ ವನ್ನು ಕಂದಾಯ ಗ್ರಾಮ ಮಾಡಿಲ್ಲ ದಿನಾಂಕ: 03/09/2022ರಲ್ಲಿ ಕಂದಾಯಗ್ರಾಮವನ್ನಾಗಿ ಮಾಡಬೇಕೆಂದು ತಹಸೀಲ್ದಾರ್ ಅವರಿಗೆ ಲಿಖಿತ ಮನವಿ ಕೊಟ್ಟರು ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ಸರ್ಕಾರ ದಾಖಲೆಗಳಿಲ್ಲದ ಆದಿವಾಸಿ , ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದವರು ವಾಸಿಸುವ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಮಾಡಿ ಎಂದು ಆದೇಶ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅರ್ಹತೆ ಇರುವ ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮ ಮಾಡಿಲ್ಲ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ ತಾಲೂಕು ಆಡಳಿತ ಕುಣಿಗಲ್ ತಾಲೂಕಿನ ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಲು ಕ್ರಮ ಕೈಗೊಳ್ಳಬೇಕು ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ತಾಲೂಕಿನ ಅಲೆಮಾರಿ , ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿವರಾಮ ಪುರ ಗ್ರಾಮದ ಕೃಷ್ಣಪ್ಪ, ರಘು, ಜಿ.ಕೆ ನಾಗಣ್ಣ, ಬೋರಯ್ಯ, ನರಸಿಂಹಯ್ಯ, ಎಸ್.ಎಂ ಕುಮಾರ್, ರವಿ, ವೆಂಕಟೇಶ್, ವಿನಯ್, ರಾಘವೇಂದ್ರ ಗಂಗಾ ಎಸ್.ವೈ ಜೈ ಕುಮಾರ್, ಸತೀಶ, ಮುಂತಾದವರು ಉಪಸ್ಥಿತರಿದ್ದರು.