ಪುರಸಭಾ ಸಿಬ್ಬಂದಿಗೆ ಕಿರುಕುಳ ನೀಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತಿರುವ ಆರ್.ಟಿ.ಐ ಕಾರ್ಯಕರ್ತ, ನಗರದ ಹನುಮಂತ ಬಿ.ಎಚ್. ಅವರನ್ನು ಬಂಧಿಸಿ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪುರಸಭೆಯ ವಿವಿಧ ವಿಭಾಗದ ಅಧಿಕಾರಿ ವೃಂದ ಹಾಗೂ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಬುಧವಾರ ಪುರಸಭಾ ಕಾರ್ಯಾಲಯದ ಎದುರು ಮುಷ್ಕರ ನಡೆಸಿದರು.

ಪುರಸಭೆ ಕಾರ್ಯಾಲಯದ ಎದುರು ಅಧಿಕಾರಿಗಳು, ಸಿಬ್ಬಂದಿ ಮುಷ್ಕರಕನ್ನಡಪ್ರಭ ವಾರ್ತೆ ಹಳಿಯಾಳ

ಪುರಸಭಾ ಸಿಬ್ಬಂದಿಗೆ ಕಿರುಕುಳ ನೀಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತಿರುವ ಆರ್.ಟಿ.ಐ ಕಾರ್ಯಕರ್ತ, ನಗರದ ಹನುಮಂತ ಬಿ.ಎಚ್. ಅವರನ್ನು ಬಂಧಿಸಿ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪುರಸಭೆಯ ವಿವಿಧ ವಿಭಾಗದ ಅಧಿಕಾರಿ ವೃಂದ ಹಾಗೂ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಬುಧವಾರ ಪುರಸಭಾ ಕಾರ್ಯಾಲಯದ ಎದುರು ಮುಷ್ಕರ ನಡೆಸಿದರು.

ಇದರಿಂದ ಕಚೇರಿಗೆ ವಿವಿಧ ಕೆಲಸ ಕಾರ್ಯಕ್ಕಾಗಿ ಆಗಮಿಸಿದ ಸಾರ್ವಜನಿಕರಿಗೆ ಬಹಳ ತೊಂದರೆಯುಂಟಾಯಿತು.

ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರಗೆ ಮನವಿ ಸಲ್ಲಿಸಿದ ಮುಷ್ಕರನಿರತರು, ಕಳೆದ ಎರಡೂ ವರ್ಷಗಳಿಂದ ಹನುಮಂತ ಬಿ.ಎಚ್. ಪುರಸಭಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಪ್ರತಿನಿತ್ಯವೂ ಕಚೇರಿಗೆ ಬಂದು ಸಂಬಂಧವಿಲ್ಲದ ವಿಷಯ ಕೇಳಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಂಡು, ಮಾಹಿತಿ ನೀಡಿದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದಲ್ಲದೇ ಪುರಸಭೆಯ ಹತ್ತು ಸಿಬ್ಬಂದಿ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ನೀರಿನ ಕರ ವಸೂಲಿ ಮಾಡಲು ತೆರಳಿದ ನೀರು ಸರಬರಾಜು ವಿಭಾಗದ ಸಿಬ್ಬಂದಿ ಮೇಲೆ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಈ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೆ ಮುಷ್ಕರನಿರತರು ಒಪ್ಪಲಿಲ್ಲ.ಬಳಿಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಅಹವಾಲು ಆಲಿಸಿ, ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಪಡೆದು, ಸೂಕ್ತ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಲಾಗಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡುವ ಮೂಲಕ ಮುಷ್ಕರ ನಿರತರ ಮನವೊಲೈಸುವಲ್ಲಿ ಯಶಸ್ವಿಯಾದರು.

ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಇದ್ದರು.

ಮುಷ್ಕರದ ಮುಂದಾಳತ್ವವನ್ನು ರಾಜ್ಯ ಪೌರ ಸೇವಾ ನೌಕರರ ಸಂಘದ ಹಳಿಯಾಳ ಶಾಖೆಯ ಪ್ರಮುಖರಾದ ಫಕೀರಪ್ಪಾ ಚಲವಾದಿ, ಬೆಲ್ಲಪ್ಪಾ ಹೊನ್ನೋಜಿ, ಯಲ್ಲಪ್ಪಾ ತಳವಾರ, ಪರಶುರಾಮ ಜುವೇಕರ, ಶ್ರೀಕಾಂತ ಮಾದರ, ಪದ್ಮವ್ವಾ ಮಾದರ, ಪ್ರಕಾಶ ಠೊಸುರ, ರಮೇಶ ಮಜುಕರ, ರಾಮಚಂದ್ರ ಮೋಹಿತೆ, ಅನಿಲ ಚಲವಾದಿ, ಅಶೋಕ ಹರ್ಕುಣಿ, ಈರಣ್ಣ ಕೊಡ್ಲಿ ಹಾಗೂ ಇತರರು ಇದ್ದರು.