ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜ್ ನಿಷೇಧಿಸಲು ಆಗ್ರಹ

| Published : Oct 25 2025, 01:00 AM IST

ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜ್ ನಿಷೇಧಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜ್ ನಡೆಸುವುದನ್ನು ತಕ್ಷಣ ನಿಷೇಧ ಹೇರಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನಾ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜ್ ನಡೆಸುವುದನ್ನು ತಕ್ಷಣ ನಿಷೇಧ ಹೇರಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನಾ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರಿದ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ನಗರಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ, ರಸ್ತೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಶಾಲಾ ಮೈದಾನ, ಉದ್ಯಾನ ಮತ್ತು ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಿತ ಮೂಲಸೌಕರ್ಯಗಳನ್ನು "ಸಮೂಹ ನಮಾಜ್ " ಕಾರ್ಯಕ್ಕಾಗಿ ಆಕ್ರಮಿಸುವ ಘಟನೆಗಳು ನಿಯಮಿತವಾಗಿ ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ತುರ್ತು ಸೇವೆಗಳಾದ ಆಂಬುಲೆನ್ಸ್‌, ಅಗ್ನಿ ಶಾಮಕ ವಾಹನ ಮತ್ತು ನಾಗರಿಕರ ಸ್ವತಂತ್ರ ಸಂಚಲನ ಹಕ್ಕು ಗಂಭೀರವಾಗಿ ಹಾನಿಗೊಳಗಾಗುತ್ತಿದೆ ಎಂದು ದೂರಿದರು.

ಸಂವಿಧಾನದ Article 14 – “Equality Before Law” ಪ್ರಕಾರ ಸರ್ಕಾರ ಎಲ್ಲ ಧರ್ಮಗಳ ವಿಷಯದಲ್ಲಿ ಸಮನಾಗಿ ವರ್ತಿಸಬೇಕಾಗಿದೆ. ಆದರೆ, ಹಿಂದೂ ಹಬ್ಬಗಳು, ಜಾತ್ರೆಗಳು, ಗಣೇಶೋತ್ಸವ, ರಾಮನವಮಿ ಮೆರವಣಿಗೆಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಮ ಹೇರಲಾಗುತ್ತದೆ. ರಸ್ತೆ ಮೇಲಿನ ನಮಾಜ್ ಪ್ರಕರಣದಲ್ಲಿ ಸರ್ಕಾರ ಮೌನದಲ್ಲಿರುವುದು ಸ್ಪಷ್ಟವಾದ ಧಾರ್ಮಿಕ ವೈಷಮ್ಯ ಮತ್ತು ಸಂವಿಧಾನದ ಧರ್ಮನಿರಪೇಕ್ಷ ನೀತಿಯ ದ್ರೋಹ ಎಂದು ಟೀಕಿಸಿದರು.

Police Act 1963 – Section 31 & 34 ಪ್ರಕಾರ ಸಾರ್ವಜನಿಕ ರಸ್ತೆಯಲ್ಲಿ ಧಾರ್ಮಿಕ ಸಮಾರಂಭ ನಡೆಸಲು ಪೂರ್ವಾನುಮತಿ ಕಡ್ಡಾಯ. ಆದರೆ ಅನೇಕ ಕಡೆ ಪೊಲೀಸರು ಅನುಮತಿ ಕೇಳುವ ಬದಲು ಟ್ರಾಫಿಕ್‌ ಅನ್ನು ಸಾರ್ವಜನಿಕರ ಮೇಲೆಯೇ ತಿರುಗಿಸುವ ಮೂಲಕ ಸಾರ್ವಜನಿಕ ಹಕ್ಕನ್ನು ತ್ಯಜಿಸಿ ಸಮೂಹ ಒತ್ತಡಕ್ಕೆ ಜಗ್ಗುತ್ತಿದ್ದಾರೆ. CrPC 144 ಮತ್ತು Public Right of Way Act ಪ್ರಕಾರ ರಸ್ತೆ ಸಾಮಾನ್ಯ ಜನರ ಹಕ್ಕು. ಇದನ್ನು ಪ್ರಾರ್ಥನೆ ಅಥವಾ ವೈಯಕ್ತಿಕ ಧಾರ್ಮಿಕ ವಿಧಾನಕ್ಕಾಗಿ ತಡೆಹಿಡಿಯುವುದು Public Infrastructure Misuse (ಸಾರ್ವಜನಿಕ ಸಂಪತ್ತಿನ ದುರಪಯೋಗ) ಆಗಿದೆ ಎಂದು ದೂರಿದರು.

ಆದ್ದರಿಂದ ಯಾವುದೇ ಧಾರ್ಮಿಕ ಪ್ರಾರ್ಥನೆಗಳು, ನಮಾಜ್ ಅಥವಾ ಸಮೂಹ ಸಭೆಗಳು ರಸ್ತೆ, ಸರ್ಕಾರಿ ಕಚೇರಿ ಆವರಣ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನಗಳಲ್ಲಿ ನಡೆಯದಂತೆ ನಿಷೇಧ ಹೇರಿ ಆದೇಶ ಹೊರಡಿಸುವಂತೆ ಸೂಚಿಸಬೇಕು. ಪೊಲೀಸರು “Public Right of Passage” ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಉಲ್ಲಂಘಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಭವಿಷ್ಯದ ತನಾವನ್ನು ತಪ್ಪಿಸಲು, ಸರ್ಕಾರದಿಂದ ಸ್ಪಷ್ಟ SOP (Standard Operating Procedure) ಹೊರಡಿಸಬೇಕೆಂದು ರಾಜ್ಯಪಾಲರು ನಿರ್ದೇಶನ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ, ಮಂಡ್ಯ ವಿಭಾಗೀಯ ಅಧ್ಯಕ್ಷ ಡಿ.ಎಂ.ರಾಜೇಶ್ , ಕಾರ್ಯದರ್ಶಿ ನವೀನ್, ಜಿಲ್ಲಾಧ್ಯಕ್ಷ ಪರಮೇಶ್, ಜಿಲ್ಲಾ ಕಾರ್ಯದರ್ಶಿ ರಾಜಗೋಪಾಲ್, ಮುಖಂಡರಾದ ಕೆ.ಆರ್. ಸುರೇಶ್, ಶಿವಮುತ್ತು , ಲೋಕೇಶ್, ರಾಘವೇಂದ್ರ, ಸಾಗರ್, ಸ್ವಾಮಿ, ಗುರು ಮತ್ತಿತರರು ಹಾಜರಿದ್ದರು.

24ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.