-ಶೌಚಾಲಯದಲ್ಲಿ ಹಾವು, ಚೇಳುಗಳ ಕಾಟ । ಮಹಿಳೆಯರ ಆಕ್ರೋಶ
----ಬಸವರಾಜ ಎಂ.ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಸಾರ್ವಜನಿಕ ಮಹಿಳಾ ಶೌಚಾಲಯದ ದುಸ್ಥಿತಿಯಿಂದ ಮಹಿಳೆಯರು ನಿತ್ಯವೂ ಶೌಚಾಲಯಕ್ಕಾಗಿ ಮಹಿಳೆಯರು ಪರಿತಪಿಸುವಂತಾಗಿದೆ.
ಇದು ಪಟ್ಟಣದ 7 ನೇ ವಾರ್ಡ್‌ನ ಪಡಶೆಟ್ಟಿ ಕಾಲೋನಿ (ಲಕ್ಷ್ಮೀ ನಗರ) ಮಹಿಳಾ ಶೌಚಾಲಯದ ದುಸ್ಥಿತಿ ಶೌಚಾಲಯದ ಅವ್ಯವಸ್ಥೆಯ ಆಗರದಿಂದಾಗಿ ಇಲ್ಲಿನ ಮಹಿಳೆಯರು ಶೌಚಕ್ಕಾಗಿ ಪರ್ಯಾಯ ಶೌಚಾಲಯ ಇಲ್ಲದೆ ಬಯಲು ಶೌಚಕ್ಕೆ ತೆರಳಬೇಕಾಗಿದೆ. ಅಂದಿನ ಗ್ರಾಮ ಪಂಚಾಯತ ಆಡಳಿತದ ಸಂದರ್ಭದಲ್ಲಿ ಒಂದು ಸ್ಟ್ಯಾಂಡಿಂಗ್ ಮಹಿಳಾ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಸದ್ಯ ಶೌಚಾಲಯದ ಕಟ್ಟಡದ ಸತ್ವ ಕಳೆದುಕೊಂಡು ಎಲ್ಲೆಂದರಲ್ಲಿ ಬಿರಕು ಬಿಟ್ಟು ಯಾವುದೇ ಸಂದರ್ಭದಲ್ಲಿ ಕುಸಿಯುವ ಹಂತಕ್ಕೆ ಹೋಗಿದ್ದು, ಬಲಿಗಾಗಿ ಕಾಯುತ್ತಿರುವದು ಒಂದು ಕಡೆಯಾದರೆ ಶೌಚಾಲಯದಲ್ಲಿ ಹಾವು, ಚೋಳುಗಳ ಕಾಟದಿಂದ ಮಹಿಳಾ ನಿವಾಸಿಗಳು ಬೇಸತ್ತು ಹೋಗಿದ್ದಾರೆ.
ಇದನ್ನು ಅರಿತ ಅಂದಿನ ಅಂದಿನ ಗ್ರಾಮ ಪಂಚಾಯತ ಅಧಿಕಾರಿಗಳು ಸ್ಟ್ಯಾಂಡಿಂಗ್ ಶೌಚಾಲಯದ ಪಕ್ಕದಲ್ಲಿ ಇನ್ನೊಂದು ಶೌಚಾಲಯ ನಿರ್ಮಿಸಿ ಅದಕ್ಕೆ ಮೂಲಭೂತ ಸೌಕರ್ಯಗಳು ನೀಡದೇ ಹಾಗೂ ಸೇಪ್ಟಿ ಟ್ಯಾಂಕ್ ನಿರ್ಮಿಸದೆ ಶೌಚಾಲಯ ಬಳಕೆಗೆ ಯೋಗ್ಯವಲ್ಲದೆ ಇರುವದರಿಂದ ಅಲ್ಲಿಯೂ ಹಾವು ಚೇಳು ಗಳ ಕಾಟ ಹೆಚ್ಚಾಗಿದೆ.
ಇದರಿಂದ ಬೇಸತ್ತ ಮಹಿಳಾ ನಿವಾಸಿಗಳು ಅನಿವಾರ್ಯವಾಗಿ ಬಯಲನ್ನೆ ಆಶ್ರಯಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ಅಹಿಂದ ಸಂಘಟನೆಯ ತಾಲೂಕು ಅಧ್ಯಕ್ಷ ಶ್ರೀದೇವಿ ಮೇಟಿ ಕನ್ನಡಪ್ರಭಕ್ಕೆ ಪತ್ರಿಕೆ ಮಾಹಿತಿ ತಿಳಿಸಿದ್ದಾರೆ.ಅನೇಕ ವರ್ಷಗಳಿಂದ ಶೌಚಾಲಯಗಳು ಸ್ಥಗಿತಗೊಂಡ ಕಾರಣದಿಂದ ಮಹಿಳೆಯರು ಊರ ಹೊರ ವಲಯದಲ್ಲಿನ ಹೊಲದ ದಾರಿ, ರಸ್ತೆ ಮೇಲೆಯೇ ಶೌಚಕ್ಕೆ ಕೂಡಬೇಕು. ಇಲ್ಲವಾದರೆ ಮುಳ್ಳುಕಂಟಿ, ತಗ್ಗು ಗುಂಡಿಗಳನ್ನು ಆಶ್ರಯಿಸಬೇಕಾಗಿದೆ. ಪ್ರಮುಖ ದಾರಿಗೆ, ಹೊಲ ಹಾಗೂ ತೋಟಗಳಿಗೆ ತೆರಳುವ ಜನದಟ್ಟಣೆ ಇರುವಲ್ಲಿ ಮಹಿಳೆಯರು ಶೌಚಕ್ಕೆ ಹೋಗುವುದು ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಪ.ಪಂ ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಹೈಟೆಕ್ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.....ಕೋಟ್....
ಪಟ್ಟಣದ 7ನೇ ವಾರ್ಡ್‌ನ ಪಡಶೆಟ್ಟಿ ಕಾಲೋನಿಯಲ್ಲಿ ಮಹಿಳಾ ಶೌಚಾಲಯ ಸಮಸ್ಯೆ ಗಮನಕ್ಕೆ ಬಂದಿದೆ. ಆದಷ್ಟು ಬೇಗ ನಗರೋತ್ಥಾನ ಅನುಧಾನದ ಅಡಿಯಲ್ಲಿ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವದು.-ಅರುಣಕುಮಾರ ಚವ್ಹಾಣ ಪ.ಪಂ ಮುಖ್ಯಾಧಿಕಾರಿ ಹುಣಸಗಿ.