ಮಾರಗೌಡನಹಳ್ಳಿ ಗ್ರಾಮದ ಹಳೇ ಊರು ಗ್ರಾಮಠಾಣಾ ಸ್ವತ್ತಿನ ಪೂರ್ವದಲ್ಲಿ ಖಾತೆ ಸಂಖ್ಯೆ ೬೫೪, ೯೩೧, ೯೪೦, ೯೩೯ರ ಮಾಲೀಕರು ತಮ್ಮ ಬಾಬ್ತು ಖಾತೆಗಿಂತ ಹೆಚ್ಚುವರಿ ವಿಸ್ತೀರ್ಣದ ಖಾತೆಯನ್ನು ಸುಳ್ಳಾಗಿ ಸೃಷ್ಟಿಸಿ ಅದರಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೆಚ್ಚುವರಿ ಜಾಗದಲ್ಲಿ ಕಲ್ನಾರ್ ಶೀಟ್‌ನ ಚಪ್ಪರ ನಿರ್ಮಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗ್ರಾಮ ಠಾಣಾ ಜಾಗ ಒತ್ತುವರಿ ತೆರವುಗೊಳಿಸಲು ಆದೇಶವಿದ್ದರೂ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ತಾಲೂಕು ಪಂಚಾಯಿತಿ ಬಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು.ಮಂಡ್ಯ ತಾಲೂಕು ಪಂಚಾಯ್ತಿ ಕಾರ್ಯಾಲಯದ ಬಳಿ ಸೇರಿದ ಮಾರಗೌಡನಹಳ್ಳಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಹಾಗೂ ಕರವೇ ಹೋರಾಟಗಾರರು ಒತ್ತುವರಿ ತೆರವಿಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿದರು.
ಮಾರಗೌಡನಹಳ್ಳಿ ಗ್ರಾಮದ ಹಳೇ ಊರು ಗ್ರಾಮಠಾಣಾ ಸ್ವತ್ತಿನ ಪೂರ್ವದಲ್ಲಿ ಖಾತೆ ಸಂಖ್ಯೆ ೬೫೪, ೯೩೧, ೯೪೦, ೯೩೯ರ ಮಾಲೀಕರು ತಮ್ಮ ಬಾಬ್ತು ಖಾತೆಗಿಂತ ಹೆಚ್ಚುವರಿ ವಿಸ್ತೀರ್ಣದ ಖಾತೆಯನ್ನು ಸುಳ್ಳಾಗಿ ಸೃಷ್ಟಿಸಿ ಅದರಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೆಚ್ಚುವರಿ ಜಾಗದಲ್ಲಿ ಕಲ್ನಾರ್ ಶೀಟ್‌ನ ಚಪ್ಪರ ನಿರ್ಮಿಸಿದ್ದಾರೆ. ಅತಿಕ್ರಮದಾರರನ್ನು ತೆರವುಗೊಳಿಸುವಂತೆ ತಾಪಂ ಇಒ ಆದೇಶಿಸಿದ್ದರೂ ತೆರವುಗೊಳಿಸುತ್ತಿಲ್ಲ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷ ಎಂ.ಆರ್.ವರದರಾಜು, ಕುಮಾರ್, ಕರವೇ ಜಯರಾಂ, ಶಿವಲಿಂಗೇಗೌಡ, ರಾಮಕೃಷ್ಣ, ಸೌಭಾಗ್ಯ, ಅನಿತಾ, ಶಾಂತಮ್ಮ, ರಜನಿ ಪಾಲ್ಗೊಂಡಿದ್ದರು.
ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ಪಿ.ಮಾದೇಶ್ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಪಿ.ಮಾದೇಶ್ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗಳಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ಅವರಿಗೆ ಸೂಚಿಸಿದರು.
ಮಹಿಳೆಯರು ಸ್ವಾವಲಂಬಿಯೊಂದಿಗೆ ಆರ್ಥಿಕ ಅಭಿವೃದ್ಧಿಗಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಗೃಹಜ್ಯೋತಿ ಮತ್ತು ಯುವನಿಧಿಗಳಂತಹ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ. ಬಡಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.ಸಭೆಯಲ್ಲಿ ಹಲವು ಸದಸ್ಯರು ಮಾತನಾಡಿ, ಮುಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರನ್ನು ಕರೆಸಿ ಕೆಲ ಸಮಸ್ಯೆ ಗಮನಕ್ಕೆ ತರುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು. ತಾಲೂಕು ಪಂಚಾಯ್ತಿ ಯೋಜನಾಧಿಕಾರಿ ದೀಪು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.