ಬಾಸೂರು ಕಾವಲ್‌ನಲ್ಲಿ ತೆಗೆದಿರುವ ಕಾಲುವೆ ಮುಚ್ಚಲು ಆಗ್ರಹ
KannadaprabhaNewsNetwork | Published : Oct 11 2023, 12:45 AM IST
ಬಾಸೂರು ಕಾವಲ್‌ನಲ್ಲಿ ತೆಗೆದಿರುವ ಕಾಲುವೆ ಮುಚ್ಚಲು ಆಗ್ರಹ
ಸಾರಾಂಶ
ಬಾಸೂರು ಕಾವಲ್‌ನಲ್ಲಿ ತೆಗೆದಿರುವ ಕಾಲುವೆ ಮುಚ್ಚಲು ಆಗ್ರಹ
-ಆದೇಶ ಕಡೆಗಣನೆ । ಮಹಾತ್ಮಾಗಾಂಧಿ ಗ್ರಾ ಮೀಣಾಭಿ ವೃದ್ಧಿ ಯೋಜನೆಯಡಿ ಸಣ್ಣ ಕಾಲುವೆ ನಿರ್ಮಾಣ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಬಾಸೂರು ಅಮೃತ್ ಕಾವಲ್‌ನಲ್ಲಿ ತೋಡಿರುವ ಕಾಲುವೆಯನ್ನು ಕೂಡಲೇ ಮುಚ್ಚಬೇಕೆಂದು ಪರಿಸರ ವಾದಿಗಳು ಪಶುಸಂಗೋಪನಾ ಇಲಾಖೆಗೆ ಆಗ್ರಹಿಸಿದ್ದಾರೆ. ಅಮೃತ್ ಮಹಲ್ ಕಾವಲ್‌ನ್ನು ಸರ್ಕಾರ 2013ರಲ್ಲೇ ಸಮುದಾಯ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದೆ. ಆದರೆ, ಈ ಆದೇಶ ಕಡೆಗಣಿಸಿ ಅಲ್ಲಿ ಸಣ್ಣ ಕಾಲುವೆಯನ್ನು ಮಹಾತ್ಮಾಗಾಂಧಿ ಗ್ರಾ ಮೀಣಾಭಿ ವೃದ್ಧಿ ಯೋಜನೆಯಡಿ ಗ್ರಾಮ ಪಂಚಾಯಿತಿ ತೋಡಲು ಆರಂಭಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವ ಇಲಾಖೆಯ ಅನುಮತಿಯೂ ಇಲ್ಲದೆ ಅದನ್ನು ಸಂರಕ್ಷಿಸಬೇಕಾದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸಹ ಮೌನವಾಗಿರುವುದು ಆಶ್ಚರ್ಯ ಮೂಡಿಸಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ ವೈಲ್ಡ್ ಕ್ಯಾಟ್-ಸಿ.ನ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಸೂರು ಅಮೃತ್ ಮಹಲ್ ಕಾವಲ್ ರಾಜ್ಯದಲ್ಲೇ ಬಾಸೂರು ಸೇರಿದಂತೆ ಹಲವು ಬಯಲು ಸೀಮೆ ತಾಲೂಕುಗಳಲ್ಲಿ ಹರಡಿಕೊಂಡಿರುವ ವಿಶೇಷ ಹುಲ್ಲುಗಾವಲಾಗಿದ್ದು, ಈ ಹುಲ್ಲುಗಾವಲು ಅಮೃತ್ ಮಹಲ್ ದೇಶೀ ಗೋ ತಳಿಗಳಿಗೆ ಅಭಿವೃದ್ಧಿ ಹಾಗೂ ಸಂರಕ್ಷಣೆ ತಾಣವೂ ಆಗಿದೆ. ಈ ಹುಲ್ಲುಗಾವಲಿನಲ್ಲಿ ಕೃಷ್ಣಮೃಗ ಸೇರಿದಂತೆ ತೋಳ, ನರಿ ಹಾಗೂ ಪಕ್ಷಿ ವೈವಿಧ್ಯದ ಆವಾಸ ಸ್ಥಾನ ಆಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲೇ ಈ ಹುಲ್ಲುಗಾವಲನ್ನು ಸಂರಕ್ಷಣೆ ಮಾಡಲು ಸರ್ಕಾರ ಇದನ್ನು ಸಮುದಾಯ ಸಂರಕ್ಷಣಾ ಪ್ರದೇಶವೆಂದು ಘೋಷಿಸಿತ್ತು. ಈ ಹುಲ್ಲುಗಾವಲುಗಳು ಬಯಲುಸೀಮೆಯಲ್ಲಿ ಹಿಂದೊಮ್ಮೆ ಅಂದಾಜು 5 ಲಕ್ಷಕ್ಕೂ ಹೆಚ್ಚಿನ ಪ್ರದೇಶ ವ್ಯಾಪಿಸಿದ್ದವು. ಅಮೃತ ಮಹಲ್ ಗೋ ಸಂತತಿಯನ್ನು ಹಿಂದೆ ಯುದ್ಧದ ಸಮಯದಲ್ಲೂ ಶಸ್ತ್ರಾಸ್ತ್ರ ಸಾಗಿಸಲು ಬಳಸಿಕೊಳ್ಳಲಾಗುತ್ತಿತ್ತೆಂಬ ದಾಖಲೆಗಳೂ ಇವೆ. ಆದರೆ, ಇಂದು ಬಹಳಷ್ಟು ಕಾವಲ್‌ಗಳು ಒತ್ತುವರಿಯಾಗಿದ್ದು, ಉಳಿದಿರುವುದನ್ನಾದರೂ ರಕ್ಷಿಸಬೇಕೆಂಬ ಪರಿಸರಾಸಕ್ತರು, ತಜ್ಞರ ಒತ್ತಾಯದಿಂದ ಸರ್ಕಾರ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಈ ಕಾವಲ್‌ನ್ನು ರಕ್ಷಿಸುವ ಜವಾಬ್ದಾರಿ ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆ ಹೆಗಲಿಗೆ ನ್ಯಾಯಾಲಯವೇ ನೀಡಿದೆ. ಅಮೃತ್ ಮಹಲ್ ಗೋವು ಹಾಗೂ ವನ್ಯಜೀವಿಗಳಿಗೂ ಒಣ ಭೂಮಿ ವರ್ಗದ ಆವಾಸ ಸ್ಥಾನವಾಗಿದೆ. ಇವ್ಯಾ ವುದನ್ನೂ ಪರಿಗಣಿಸದೆ ಕಾಲುವೆ ತೋಡಲು ಅವಕಾಶ ನೀಡಿ ಕಂಡೂ ಕಾಣದಂತೆ ವರ್ತಿಸಿ, ಈಗ ಹಲವು ರೀತಿ ಸಬೂಬು ಹೇಳುತ್ತಿರುವ ಅಧಿಕಾರಿ, ಸಿಬ್ಬಂದಿ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ತೋಡಿರುವ ಕಾಲುವೆಯನ್ನು ತಕ್ಷಣ ಮುಚ್ಚಿ ಈಗ ಆಗಿರುವ ಅನಾಹುತ ತಡೆಯಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಈ ವಿಶೇಷ ಹುಲ್ಲುಗಾವಲಿಗೆ ಧಕ್ಕೆ ತರುವ ಯಾವುದೇ ಕೆಲಸ ಹಾಗೂ ಕಾಮಗಾರಿ ಕೈಗೊಳ್ಳಬಾರದೆಂದು ಆಗ್ರಹಿಸಿದ್ದಾರೆ. 10 ಕೆಸಿಕೆಎಂ 5 ಬಾಸೂರು ಅಮೃತ್ ಮಹಲ್ ಕಾವಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲುವೆ.