ತಾಲೂಕಿನ ಒಕ್ಕಲಿಗರ ಭವನ ಪಾಳು ಬಿದ್ದಿದೆ. ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿ ಈ ಕಟ್ಟಡದ ಕಾಮಗಾರಿಯನ್ನು ಫೂರ್ಣಗೊಳಿಸಿ. ನಿಮಗೆ ಆಗದಿದ್ದರೆ ನಮಗೆ ಬಿಟ್ಟುಕೊಡಿ, ಚಂದ ವಸೂಲಿ ಮಾಡಿ ಕಟ್ಟಡ ಪೂರ್ಣಗೊಳಿಸಿ, ಉದ್ಘಾಟಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಒಕ್ಕಲಿಗರ ಸಂಘದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್. ಕಾಳೇಗೌಡ ಸಲಹೆ ನೀಡಿದರು. ತಾಲೂಕಿನ ಒಕ್ಕಲಿಗರ ಭವನವನ್ನು ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ದಾಖಲೆಗಳಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ನಮೂದಾಗಿರುವ ತಾಲೂಕಿನ ಒಕ್ಕಲಿಗರ ಭವನ ಪಾಳು ಬಿದ್ದಿದೆ. ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿ ಈ ಕಟ್ಟಡದ ಕಾಮಗಾರಿಯನ್ನು ಫೂರ್ಣಗೊಳಿಸಿ. ನಿಮಗೆ ಆಗದಿದ್ದರೆ ನಮಗೆ ಬಿಟ್ಟುಕೊಡಿ, ಚಂದ ವಸೂಲಿ ಮಾಡಿ ಕಟ್ಟಡ ಪೂರ್ಣಗೊಳಿಸಿ, ಉದ್ಘಾಟಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಒಕ್ಕಲಿಗರ ಸಂಘದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್. ಕಾಳೇಗೌಡ ಸಲಹೆ ನೀಡಿದರು.ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭವನದ ಅಧ್ಯಕ್ಷರು ಅಗ್ರಹಾರ ಗೇಟ್‌ನ ದೇವರಾಜು ಅವರು ಎಂದು ತಿಳಿದು ಬಂದಿರುತ್ತದೆ, ಆದರೆ ಇವರು ಇಲ್ಲಿಯವರೆಗೂ ಯಾರೆಂಬುದು ಜನಕ್ಕೆ ಗೊತ್ತಿರುವುದಿಲ್ಲ ಹಾಗೂ ಇದರ ಖರ್ಚು ವೆಚ್ಚಗಳ ಬಗ್ಗೆ ಒಬ್ಬರಿಗೂ ತಿಳಿಸಿರುವುದಿಲ್ಲ. ೧೯೮೫ನೇ ಇಸವಿಯಲ್ಲಿ ದೇವೇಗೌಡರು ಸಂಕನಹಳ್ಳಿ ಗ್ರಾಮದಲ್ಲಿ ತಾಲೂಕಿನ ಎಲ್ಲಾ ಒಕ್ಕಲಿಗರನ್ನು ಸಭೆ ಕರೆದು ಸಮಿತಿ ಮಾಡಿದ್ದು ಸರಿಯೇ?, ಸಮಿತಿ ಅಧ್ಯಕ್ಷರು ಡಾ.ಜವರೇಗೌಡರು ಹಾಗೂ ಕಾರ್ಯದರ್ಶಿ ಆಲದಹಳ್ಳಿ ರಂಗೇಗೌಡರನ್ನು ಮಾಡಿದ್ದರು. ಮತ್ತು ೧೯೮೮ರಲ್ಲಿ ತಾಲೂಕಿನ ಒಕ್ಕಲಿಗ ನೌಕರರು ಹಂತಹಂತವಾಗಿ ಒಂದು ತಿಂಗಳ ಸಂಬಳವನ್ನು ಭವನಕ್ಕೆ ನೀಡಿರುತ್ತಾರೆ ಹಾಗೂ ತಾಲ್ಲೂಕಿನ ಒಕ್ಕಲಿಗ ಸಮುದಾಯದವರೂ ಸಹ ಹಣ ನೀಡಿರುತ್ತಾರೆ ಹಾಗೂ ಶಾಸಕರು, ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನಗಳು ಬಂದಿದ್ದರೂ ಸಹ ಭವನ ಪೂರ್ಣಗೊಂಡಿಲ್ಲ. ಆದ್ದರಿಂದ ತಾಲೂಕಿನ ಒಕ್ಕಲಿಗರ ಭವನವನ್ನು ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮಂಜುನಾಥ್, ಕಾಳೇಗೌಡ, ಕೃಷ್ಣಕುಮಾರ್, ಚಂದ್ರೇಗೌಡ, ಯೋಗೇಶ್ ಇದ್ದರು.