ಸಾರಾಂಶ
ನರಗುಂದ: ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಸೇರಿದಂತೆ ಮುಂತಾದ ಬೆಳೆಗಳು ತೇವಾಂಶ ಹೆಚ್ಚಾಗಿ ಜಮೀನಿನಲ್ಲಿ ಹಾನಿಯಾಗಿವೆ. ಆದ್ದರಿಂದ ಸರ್ಕಾರ ಬೇಗ ಪರಿಹಾರ ನೀಡಬೇಕೆಂದು ಕೊಣ್ಣೂರ ಗ್ರಾಮದ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆನಂತರ ವಿವಿಧ ರೈತರು ಮಾತನಾಡಿ, 2025-26ನೇ ಸಾಲಿನಲ್ಲಿ ರೈತರು ಹೆಸರು, ಗೋವಿನಜೋಳ, ಬಿ.ಟಿ. ಹತ್ತಿ, ಈರುಳ್ಳಿ ಸೇರಿದಂತೆ ಮುಂತಾದ ಬೆಳೆಗಳನ್ನು ರೈತರು ಪ್ರತಿ 1 ಎಕರೆಗೆ 20 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆಸಿದ್ದರು, ಆದರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿಯಾಗಿ ಮಳೆಯಾಗಿ ರೈತರು ಬೆಳೆ ಕಟಾವು ಬಂದ ಸಂದರ್ಭದಲ್ಲಿ ಅತೀಯಾಗಿ ಮಳೆಯಾಗಿ ತೇವಾಂಶ ಹೆಚ್ಚಾಗಿ ಜಮೀನಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಆದ್ದರಿಂದ ತಾಲೂಕು ಆಡಳಿತ ಬೇಗ ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಹಾನಿ ಮಾಹಿತಿ ಕಳಿಸಿ, ಬೆಳೆ ಹಾನಿ ಮಾಡಿಕೊಂಡ ಎಲ್ಲಾ ರೈತರಗೆ ಪ್ರತಿ 1ಎಕರೆಗೆ 25 ಸಾವಿರ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಬೆಳೆ ವಿಮೆಯಲ್ಲಿ ಪ್ರಭಾವಿಗಳ ಹಾವಳಿ ತಪ್ಪಿಸಿ. ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಕೆಲವು ಬಂಡವಾಳ ಶಾಹಿಗಳು ಬೆಳೆ ವಿಮೆ ಕಂಪನಿ ಹಾಗೂ ಕೃಷಿ ಅಧಿಕಾರಿಗಳು ಜೊತೆ ಒಪ್ಪಂದ ಮಾಡಿಕೊಂಡು ಕೆಲವು ವ್ಯಾಪಿಯ ಗ್ರಾಮಗಳನ್ನು ಮಾತ್ರ ಬೆಳೆ ವಿಮೆ ಪರಿಹಾರ ಬಿಡುಗಡೆ ಆಗುವ ರೀತಿಯಲ್ಲಿ ಷಡ್ಯಂತ್ರ ಮಾಡುತ್ತಿರುವುದರಿಂದ ಪ್ರಾಮಾಣಿಕವಾಗಿ ಬೆಳೆ ವಿಮೆ ತುಂಬಿದ ರೈತರಿಗೆ ಅನ್ನಾಯ ಆಗುತ್ತದೆ. ಬೆಳೆ ವಿಮೆಯಲ್ಲಿ ಪ್ರಭಾವಿಗಳಿಗೆ ಸಂಬಂಧ ಪಟ್ಟ ಇಲಾಖೆಯವರು ಕಡಿವಾಣ ಹಾಕದಿದ್ದರೆ ತಾಲೂಕಿನ ರೈತರು ಲೋಕಾಯುಕ್ತರಿಗೆ ದೂರು ನೀಡುತ್ತೇವೆಂದು ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಅಶೋಕ ಕಾಮಣ್ಣವರ, ಶಿವಪ್ಪ ವಾಲಿ, ಶಂಕರಗೌಡ ಶಿರಿಯಪ್ಪಗೌಡ್ರ, ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮಚ೯ಪ್ಪನವರ, ಮೌನೇಶ ಯಲ್ಲಪ್ಟಗೌಡ್ರ, ಪ್ರವೀಣ ಯಲಿಗಾರ, ಶರಣಪ್ಟ ಕರಿಯಪ್ಪನನರ, ರಮೇಶ ಮಳಲಿ, ಸೇರಿದಂತೆ ಮುಂತಾದವರು ಇದ್ದರು.