ಈಗಾಗಲೇ ಈ ಎಲ್ಲ ರೈತರು ಸರ್ಕಾರಕ್ಕೆ ನೀರಿನ ಕರ ತುಂಬಿದ್ದಾರೆ. ಮೇಲಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಕಂದಾಯ ಸಚಿವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಕಟ್ಟಬೇಕಾದ ನೀರಿನ ಕರ ತುಂಬಿದ್ದೇವೆ. ಆದ್ದರಿಂದ ನಮ್ಮ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದಾಗಿರುವ ಸರ್ಕಾರ ಎನ್ನುವುದನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ನರಗುಂದ: ತಾಲೂಕಿನ ನೂರಾರು ಪಹಣಿ ಪತ್ರದಲ್ಲಿ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದಾಗಿರುವುದಕ್ಕೆ ರೈತರಿಗೆ ಸರ್ಕಾರ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಪಹಣಿ ಪತ್ರದಲ್ಲಿ ನಮೂದಾಗಿರುವ ಸರ್ಕಾರವೆಂಬುದನ್ನು ಕಡಿಮೆ ಮಾಡಬೇಕೆಂದು ತಾಲೂಕು ರೈತ ಸಂಘ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಗುರುವಾರ ಗದುಗಿನಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ನರಗುಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ 218 ರೈತರ ಜಮೀನುಗಳ ನೀರಿನ ಕರ ತುಂಬಿಲ್ಲವೆಂದು 1995ರಲ್ಲಿ ಕಂದಾಯ ಇಲಾಖೆಯವರು ರೈತರ ಪಹಣಿ ಪತ್ರದ 9ನೇ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದಾಗಿದ್ದರಿಂದ ಕಳೆದ 20 ವರ್ಷದಿಂದ ನೂರಾರು ರೈತರಿಗೆ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ, ಬೆಳೆ ವಿಮೆ, ಬೆಳೆ ಹಾನಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಈಗಾಗಲೇ ಈ ಎಲ್ಲ ರೈತರು ಸರ್ಕಾರಕ್ಕೆ ನೀರಿನ ಕರ ತುಂಬಿದ್ದಾರೆ. ಮೇಲಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಕಂದಾಯ ಸಚಿವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಕಟ್ಟಬೇಕಾದ ನೀರಿನ ಕರ ತುಂಬಿದ್ದೇವೆ. ಆದ್ದರಿಂದ ನಮ್ಮ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದಾಗಿರುವ ಸರ್ಕಾರ ಎನ್ನುವುದನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಅವರು ರೈತರ ಮನವಿ ಸ್ವೀಕರಿಸಿದರು. ಬಸಯ್ಯ ಚಿಕ್ಕಮಠ, ಮಲ್ಲಯ್ಯ ಪರತದೇವರಮಠ, ಹನುಮಂತ ಗಣಚಾರಿ, ಬಸನಗೌಡ ನಿಟ್ಟೂರು ಸೇರಿದಂತೆ ಮುಂತಾದವರು ಇದ್ದರು.

ಬೇಸಿಗೆ ಉಳುಮೆ: ರೈತರಿಗೆ ಸಲಹೆ

ನರಗುಂದ: ಪ್ರಸಕ್ತ ವರ್ಷ ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಬೇಸಿಗೆ ಕಾಲದಲ್ಲಿ ಹೊಲವನ್ನು ಆಳವಾಗಿ ಉಳುಮೆ ಮಾಡುವುದನ್ನು ಬೇಸಿಗೆ ಉಳುಮೆ ಎಂದು ಕರೆಯಲಾಗುತ್ತದೆ. ಇದು ಮುಂದಿನ ಹಂಗಾಮಿನ ಬೆಳೆಗಳಿಗೆ ಭೂಮಿಯನ್ನು ಸಿದ್ಧಪಡಿಸಲು ಅತ್ಯಂತ ಉಪಯುಕ್ತವಾದ ಕ್ರಮವಾಗಿದೆ ಎಂದು ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ.ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೇಸಿಗೆ ಉಳುಮೆಯ ಮುಖ್ಯ ಉದ್ದೇಶಗಳು ಮಣ್ಣಿನ ಗಟ್ಟಿತನ ಕಡಿಮೆ ಮಾಡುವುದು. ಕೀಟಗಳು ಮತ್ತು ರೋಗಕಾರಕಗಳನ್ನು ನಾಶ ಮಾಡುವುದು, ಕಳೆ ಬೀಜಗಳನ್ನು ನಿಯಂತ್ರಿಸುವುದು, ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಸಂಚಾರ ಹೆಚ್ಚಿಸುವುದು, ಮಣ್ಣಿನ ತೇವಾಂಶ ಸಂರಕ್ಷಣೆ ಮಾಡುವುದು.

ಬೇಸಿಗೆ ಉಳುಮೆಯ ಲಾಭಗಳು: ಕೀಟ ನಿಯಂತ್ರಣವಾಗುತ್ತದೆ. ಮಣ್ಣಿನೊಳಗೆ ಇರುವ ಹುಳು, ಮೊಟ್ಟೆ ಮತ್ತು ಕೀಟಗಳ ಹಂತಗಳು ಬಿಸಿಲಿನಿಂದ ನಾಶವಾಗುತ್ತವೆ. ಕಳೆ ನಿಯಂತ್ರಣ ಸಾಧ್ಯವಾಗುತ್ತದೆ. ಕಳೆ ಬೀಜಗಳು ಮೇಲೆ ಬಂದು ಬಿಸಿಲಿನಿಂದ ಒಣಗಿ ಸಾಯುತ್ತವೆ. ಮಣ್ಣಿನ ಆರೋಗ್ಯ ಸುಧಾರಣೆವಾಗುತ್ತದೆ. ಮಣ್ಣು ಪುಡಿಯಾಗಿ ಗಾಳಿ ಪ್ರದೇಶ ಹೆಚ್ಚುತ್ತದೆ. ಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ. ಮಳೆ ನೀರಿನ ಸಂಗ್ರಹಣೆಗೆ ಅನುಕೂಲವಾಗುವುದು ಎಂದಿದ್ದಾರೆ.