ಪ್ರಸಕ್ತ ಸಾಲಿನಲ್ಲಿ ಆವರಿಸಿದ ಭೀಕರ ಬರದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ರೈತರಿಗೆ ಪರಿಹಾರ ನೀಡಿ ಜೇವರ್ಗಿ ಹಾಗೂ ಯಡ್ರಾಮಿ ಉಭಯ ತಾಲೂಕುಗಳನ್ನು ಬರಗಾಲ ಘೋಷಿಸಿ ರೈತರಿಗೆ ಸೂಕ್ತ ಪರಿಹಾರ. ಬೆಳೆವಿಮೆ ತಾರತಮ್ಯ ಸರಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭಾನುವಾರ ಸಚಿವ ಡಾ.ಅಜಯಸಿಂಗ್ ಅವರಿಗೆ ಕಪ್ಪು ಬಟ್ಟೆ ತೋರಿಸಿ ಘೇರಾವ ಮಾಡಿ ರಸ್ತೆತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಜೇವರ್ಗಿ: ಪ್ರಸಕ್ತ ಸಾಲಿನಲ್ಲಿ ಆವರಿಸಿದ ಭೀಕರ ಬರದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ರೈತರಿಗೆ ಪರಿಹಾರ ನೀಡಿ ಜೇವರ್ಗಿ ಹಾಗೂ ಯಡ್ರಾಮಿ ಉಭಯ ತಾಲೂಕುಗಳನ್ನು ಬರಗಾಲ ಘೋಷಿಸಿ ರೈತರಿಗೆ ಸೂಕ್ತ ಪರಿಹಾರ. ಬೆಳೆವಿಮೆ ತಾರತಮ್ಯ ಸರಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭಾನುವಾರ ಸಚಿವ ಡಾ.ಅಜಯಸಿಂಗ್ ಅವರಿಗೆ ಕಪ್ಪು ಬಟ್ಟೆ ತೋರಿಸಿ ಘೇರಾವ ಮಾಡಿ ರಸ್ತೆತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಮಾತನಾಡಿ, ಮಲ್ಲಾಬಾದ ಏತ ನೀರಾವರಿ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳಿಗೆ ಕೂಡಲೆ ಅಮಾನತ್ತುಗೊಳಿಸಬೇಕು, ಜೇವರ್ಗಿ ಯಡ್ರಾಮಿ ರೈತರಿಗೆ ಬೆಳೆವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ಎರಡು ತಾಲೂಕಿನ ರೈತರ ಸಂಪೂರ್ಣ ಸಾನ್ನಾ ಮಾಡಬೇಕು, ಬರಗಾಲ ಇರುವ ಕಾರಣ ಮರು ಬಿತ್ತನಗೆ ಬೀಜ ರಸಗೊಬ್ಬರ ರೈತರಿಗೆ ಉಚಿತವಾಗಿ ನೀಡಬೇಕು, ಬೆಳೆವಿಮೆ ಹಣವನ್ನು ಹಳೆ ನಿಯಮದ ಪ್ರಕಾರ ಬೆಳೆವಿಮೆ ನೀಡಬೇಕು, ಪಟ್ಟಣದ ಪುರಸಭೆಯಲ್ಲಿ ದಿನಗೂಲಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕೂಡಲೆ ಖಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಕನ್ನಡ ಪರ ಹೋರಾಟಗಾರ ಭೀಮಾಶಂಕರ ಬಿಲ್ಲಾಡ ಮೂರ್ಚೆ ಬಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ದೇವಮ್ಮ ಯಾಳವಾರ, ಮಂಜುಳಾ ಬಂಜತ್ರಿ, ಸುಶೀಲಾ ಆಲೂರ, ಲಾಳೇಶ ಮಣಿಯಾರ, ಅಲ್ಲಾಪಟೇಲ್ ಇಜೇರಿ, ಮೋಹಿನ್ ಪಟೇಲ್, ಸಿದ್ದಣ್ಣಗೌಡ ರಾಜವಾಳ, ಭೀಮಾಶಂಕರ ಬಿಲ್ಲಾಡ ಜನೀವಾರ, ಪರಮೇಶ್ವರ ಬೀರಾಳ, ಬಿ.ಹೆಚ್.ಮಾಲಿಪಾಟೀಲ್, ಸಾಹೇಬಗೌಡ ಹಂಗರಗಿ, ಲಾಳೇ ಸಾಬ್ ಮನಿಯಾರ, ಸಿದ್ದಣ್ಣಗೌಡ ರಾಜವಾಳ, ರಿಯಾಜ ಪಟೇಲ ಬಿಳವಾರ, ಸಿದ್ದು ಕೆರೂರ, ಸಿದ್ರಾಮ ಕಟ್ಟಿ, ಪರಮಾನಂದ ಯಲಗೋಡ ಸೇರಿದಂತೆ ತಾಲೂಕಿನ ವಿವಿಧ ಮಠಾಧೀಶರು ರೈತರು ಇದ್ದರು.