ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಕ್ಷೇತ್ರದಲ್ಲಿ ಅಧಿಕಾರಿಗಳ ಮೇಲೆ ಅಸಭ್ಯ ವರ್ತನೆ, ದರ್ಪ, ದೌರ್ಜನ್ಯ ನಡೆಸುತ್ತಿದ್ದಾರೆ, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಮನವಿ ಸಲ್ಲಿಸಿತು. ಒಕ್ಕೂಟದ ಜಿಲ್ಲಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ, ೨೦೨೩ನೇ ಸಾಲಿನಲ್ಲಿ ನಡೆದ ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಶಾಸಕ ಕೊತ್ತೂರು ಜಿ ಮಂಜುನಾಥ್ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಧರ್ಪ ತೋರಿಸುತ್ತಿದ್ದಾರೆ. ಅಸಭ್ಯ ವರ್ತನೆ, ತೋರಿ ಕೀಳು ಮಟ್ಟದ ಪದಗಳಿಂದ ಅವರನ್ನು ನಿಂದಿಸುವುದು ಸರ್ವೇ ಸಾಮಾನ್ಯವಾಗಿದೆ ಎಂದು ಆರೋಪಿಸಿದರು.. ಪ್ರಾಂಶುಪಾಲರಿಗೆ ಅವಹೇಳನ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ, ಸೆ.೨ರಂದು ಮಹಿಳಾ ಕಾಲೇಜಿನ ಪ್ರಾಂಶುಪಾಲರನ್ನು ಕಾಲೇಜು ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ಉನ್ನತ ಶಿಕ್ಷಣ ಸಚಿವರು,ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮುಂದೆಯೇ ಪ್ರಾಂಶುಪಾಲರಿಗೆ ಹುಷಾರ್, ಕಿತ್ತೊಗುತ್ತೆನೆ ಎಂದಿರುವುದು ಖಂಡನೀಯ ಎಂದರು.೨೦೨೩-೨೪ನೇ ಸಾಲಿನ ಅನುದಾನ ಶಾಸಕರು ಹಿಂಬಾಲಕರನ್ನು ಇಟ್ಟುಕೊಂಡು ಜಿಪಂ ಕಚೇರಿಯ ದುರಸ್ತಿಯ ವಿಚಾರವಾಗಿ ಎಸ್.ಸಿ.ಪಿ. ಟಿ.ಎಸ್.ಪಿ ೨ ಕೋಟಿ ರೂಪಾಯಿ ಅನುದಾನ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಸದೆ ತಮ್ಮ ಸ್ವಾರ್ಥಕ್ಕಾಗಿ ಕಮಿಷನ್‌ಗೆ ಆಸೆಪಟ್ಟು ಕಳಪೆ ಕಾಮಗಾರಿ ಮಾಡಲು ಅನುದಾನ ಬಳಸಿ ಲೋಪವೆಸಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ್, ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ಸಂ. ಸಂಚಾಲಕ ಸದಾಶಿವ, ಜಿಲ್ಲಾ ಕಾರ್ಯದರ್ಶಿ ಪುರ ಶ್ರೀನಾಥ್, ಜಿಲ್ಲಾ ಉಪಾಧ್ಯಕ್ಷ ಹನುಮಾನ್, ಜಿಲ್ಲ ಖಜಾಂಚಿ ಎಂ.ಆರ್.ಚೇತನ್‌ಬಾಬು, ಮಹಿಳಾ ಜಿಲ್ಲಾಧ್ಯಕ್ಷ ಕೆರೆಕೋಡಿ ಮಂಜುಳ, ಮತ್ತಿತರರು ಇದ್ದರು.