ಸಾರಾಂಶ
ಮಳೆಗಾಲದ ಸಂದರ್ಭದಲ್ಲಿ ಲೈನ್‌ಮನ್‌ಗಳು ಕೆಲಸ ಮಾಡುವಾಗ ಅವರ ರಕ್ಷಣೆಗೆ ನೀಡುವ ಉಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
ಭಟ್ಕಳ: ವಿಶ್ವ ಮಾನವ ಹಕ್ಕು ಆರ್.ಕೆ. ಫೌಂಡೇಶನ್ ನ ಸ್ಥಳೀಯ ಘಟಕದಿಂದ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಹೆಸ್ಕಾಂ ಲೈನ್‌ಮನ್ ಗಳ ರಕ್ಷಣೆ ಹಾಗೂ ಸುರಕ್ಷತೆಗೆ ಹೆಚ್ಚು ಒತ್ತು ನೀಡುವಂತೆ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಂಜುನಾಥ ಅವರನ್ನು ಆಗ್ರಹಿಸಲಾಯಿತು.
ಮಳೆಗಾಲದ ಸಂದರ್ಭದಲ್ಲಿ ಲೈನ್‌ಮನ್‌ಗಳು ಕೆಲಸ ಮಾಡುವಾಗ ಅವರ ರಕ್ಷಣೆಗೆ ನೀಡುವ ಉಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಸಿಬ್ಬಂದಿ ಕೊರತೆಯಿಂದಾಗಿ ಲೈನ್‌ಮನ್ ಸಂಖ್ಯೆ ಕಡಿಮೆ ಇದ್ದು ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೆಸ್ಕಾಂ ಅಭಿಯಂತರ ಮಂಜುನಾಥ ನಾಯ್ಕ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಜಿಲ್ಲಾ ಘಟಕ ಅಧ್ಯಕ್ಷೆ ಅರ್ಚನಾ ನಾಯಕ, ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಕಂಬ ಸ್ಪರ್ಶ ಮಾಡದಂತೆ ಇಲಾಖೆಯಿಂದ ಭಿತ್ತಿಪತ್ರ ಅಂಟಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಆಗ್ರಹಿಸಿದರು.
ಫೌಂಡೇಶನ್ನಿನ ಸ್ಥಳೀಯ ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ಸದಸ್ಯರಾದ ದಿನೇಶ ನಾಯ್ಕ್ ಪಾಂಡು ನಾಯ್ಕ ಇದ್ದರು.ವಿಶ್ವ ಮಾನವ ಹಕ್ಕು ಆರ್.ಕೆ ಫೌಂಡೇಶನ್ನಿನ ಭಟ್ಕಳದ ಘಟಕದಿಂದ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಹೆಸ್ಕಾಂ ಲೈನ್‌ಮನ್ ರಕ್ಷಣೆ ಹಾಗೂ ಸುರಕ್ಷತೆಗೆ ಆಗ್ರಹಿಸಲಾಯಿತು.