ಸಾರಾಂಶ
ವಿವಿಧ ಸ್ಕೀಂಗಳಲ್ಲಿ ಗೌರವಧನದಡಿ ಕೆಲಸ ಮಾಡುವವರನ್ನು ಕಾರ್ಮಿಕರೆಂದು ಗುರ್ತಿಸಿ ೪೫ನೇ ಐಎಲ್‌ಸಿ ಪ್ರಕಾರ ಕನಿಷ್ಠ ವೇತನ, ಸೇವಾಭದ್ರತೆ, ಗ್ರಾಚ್ಯುಟಿ ಮುಂತಾದ ಸೌಲಭ್ಯಗಳನ್ನು ನೀಡಬೇಕು. ಎಲ್ಲಾ ಮಹಿಳೆಯರಿಗೂ ಮುಟ್ಟಿನ ರಜೆ, ಹೆರಿಗೆ ರಜೆ, ಹೆರಿಗೆ ಸೌಲಭ್ಯ ಮತ್ತು ವ್ಯವಸ್ಥೆ ಖಚಿತ ಪಡಿಸಬೇಕು. ಬೆಲೆ ಏರಿಕೆಯನ್ನು ತಡೆಯಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರಿಗೆ ಸಾಕಷ್ಟು ಗುಣಮಟ್ಟದ ಉದ್ಯೋಗಗಳನ್ನು ಖಚಿತಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಕಾರಿ ಕಚೇರಿವರೆಗೆ ಮರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ವಿವಿಧ ಸ್ಕೀಂಗಳಲ್ಲಿ ಗೌರವಧನದಡಿ ಕೆಲಸ ಮಾಡುವವರನ್ನು ಕಾರ್ಮಿಕರೆಂದು ಗುರ್ತಿಸಿ ೪೫ನೇ ಐಎಲ್‌ಸಿ ಪ್ರಕಾರ ಕನಿಷ್ಠ ವೇತನ, ಸೇವಾಭದ್ರತೆ, ಗ್ರಾಚ್ಯುಟಿ ಮುಂತಾದ ಸೌಲಭ್ಯಗಳನ್ನು ನೀಡಬೇಕು. ಎಲ್ಲಾ ಮಹಿಳೆಯರಿಗೂ ಮುಟ್ಟಿನ ರಜೆ, ಹೆರಿಗೆ ರಜೆ, ಹೆರಿಗೆ ಸೌಲಭ್ಯ ಮತ್ತು ವ್ಯವಸ್ಥೆ ಖಚಿತ ಪಡಿಸಬೇಕು. ಬೆಲೆ ಏರಿಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ಎಲ್ಲ ಪ್ರಕರಣಗಳಿಗೆ ತ್ವರಿತ ವಿಚಾರಣೆ ನಡೆಸಬೇಕು. ಸಾಕಷ್ಟು ಎಫ್‌ಟಿಎಸ್‌ಸಿಗಳನ್ನು ಸ್ಥಾಪಿಸಿ, ತ್ವರಿತ ನ್ಯಾಯಾಲಯಗಳ ಅನುದಾನ ಹೆಚ್ಚಿಸಬೇಕು. ಎಲ್ಲಾ ರಾಜ್ಯಗಳೂ ಜಸ್ಟೀಸ್ ಹೇಮಾ ಸಮಿತಿಯ ಮಾದರಿಯಲ್ಲಿ ಸಮಿತಿಗಳನ್ನು ಸ್ಥಾಪಿಸುವುದನ್ನು ಖಚಿತಪಡಿಸಿಕೊಂಡು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವನ್ನು ಕೊನೆಗೊಳಿಸಲು ಸಮಯಬದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ, ಕಮಲಾ, ಲತಾ, ಶಶಿಕಲಾ, ಪ್ರೇಮಾ, ರಾಧಾ, ಚಂದ್ರಶೇಖರ್, ಗಾಯಿತ್ರಿ, ಮಹದೇವಮ್ಮ, ಲಕ್ಷ್ಮಿ, ಮಂಗಳಾ ಭಾಗವಹಿಸಿದ್ದರು.