ಕನ್ನಡಪ್ರಭ ವಾರ್ತೆ ಬಾಗಲಕೋಟೆರೈತರಿಗೆ ನ್ಯಾಯಸಮ್ಮತವಾಗಿ ಕಬ್ಬಿನ ಬೆಲೆ ನಿಗದಿ ಪಡಿಸುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕಿಸಾನ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರಿಗೆ ನ್ಯಾಯಸಮ್ಮತವಾಗಿ ಕಬ್ಬಿನ ಬೆಲೆ ನಿಗದಿ ಪಡಿಸುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕಿಸಾನ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಒತ್ತಾಯಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಬೆಲೆ ₹5000 ನಿಗದಿಗೊಳಿಸಿ ಹಾಗೂ 15 ದಿನಗಳ ಒಳಗಾಗಿ ರೈತರಿಗೆ ಹಣವನ್ನು ಪಾವತಿಸಬೇಕು ಎಂದು ಹೇಳಿದರು.ರೈತರು ಹಾಗೂ ಕಾರ್ಖಾನೆ ಮಧ್ಯೆ ಸೌಜನ್ಯಯುತವಾಗಿ ಇದ್ದರೆ ಮಾತ್ರ ಕಾರ್ಖಾನೆ ಹಾಗೂ ರೈತರು ಬದುಕಲಿಕ್ಕೆ ಸಾಧ್ಯ ಎಂದರು. ಕಬ್ಬು ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು ಇದು ಗ್ರಾಮೀಣ ಜನರ ಜೀವನಕ್ಕೆ ಆಧಾರವಾಗಿದೆ. ಕಬ್ಬಿನ ಬೆಲೆಗೆ ಸುಮಾರು 12 ತಿಂಗಳ ಕಾಲ ನಿರಂತರ ಹೂಡಿಕೆ ಮತ್ತು ನಿರ್ವಹಣೆ ಅಗತ್ಯ ವಿರುತ್ತದೆ. ರೈತರು ಅನಿಶ್ಚಿತ ಮಳೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸಿ ರೈತರು ಬೆಳೆಯನ್ನು ಬೆಳೆಯುತ್ತಾರೆ ಇವರಿಗೆ ನ್ಯಾಯವನ್ನು ಸರ್ಕಾರ ಹಾಗೂ ಕಾರ್ಖಾನೆಗಳು ಒದಗಿಸಬೇಕು ಎಂದು ಒತ್ತಾಯಿಸಿದರು.ಉತ್ತರ ಪ್ರಾಂತದ ಅಧ್ಯಕ್ಷರಾದ ವಿವೇಕ ಮೋರೆ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ರೈತರಿಂದ ಖರೀದಿಸಿದ ನಂತರ ಕೇವಲ ಸಕ್ಕರೆ ಅಲ್ಲದೇ ಮೊಲಾಸಿಸ್, ಬಗಾಸ್, ಎಥನಾಲ್, ವಿದ್ಯುತ್ ಉತ್ಪಾದನೆಯಿಂದ ಹೆಚ್ಚುವರಿ ಆದಾಯವನ್ನು ಕಾರ್ಖಾನೆಗಳು ಪಡೆಯುತ್ತಿದ್ದು, ಇದರ ಲಾಭಾಂಶವನ್ನು ಸಹಿತ ರೈತರಿಗೆ ನೀಡಬೇಕು. ರೈತರ ಶೋಷಣೆಯನ್ನು ಸರ್ಕಾರ ಹಾಗೂ ಕಾರ್ಖಾನೆಗಳು ಮಾಡಬಾರದು. ರೈತರ ಶ್ರಮವನ್ನು ಪರಿಗಣಿಸಿ ಎಫ್ಆರ್ಪಿ ದರ ಪರಿಷ್ಕರಿಸಬೇಕು. ಕಬ್ಬಿನ ಬಾಕಿಯನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯಾಧ್ಯಕ್ಷರಾದ ಭೀಮಸೇನ ಕೋಕರೆ ಮಾತನಾಡಿ, ರಾಷ್ಟ್ರೀಯದಲ್ಲಿ ಕಿಸಾನ ಸಂಘವು ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಎಲ್ಲ ಗ್ರಾಮಗಳಲ್ಲಿ ನಮ್ಮ ಸಂಘಟನೆ ಇದ್ದು ರೈತರ ಪರವಾಗಿ ಹೋರಾಟ ಮಾಡುತ್ತಿದೆ. ಕಬ್ಬಿನ ಬೆಲೆಯನ್ನು ನಿಗದಿಪಡಿಸಬೇಕು. ರೈತರಿಗೆ ನ್ಯಾಯಯುತ ಮತ್ತು ಗೌರವಯುತ ಆದಾಯ ದೊರೆಯುವಂತೆ ಕೇಂದ್ರ ಸಕರ್ಾರವು ಸೂಕ್ತ ನೀತಿಯನ್ನು ಜಾರಿಗೆ ತರಬೇಕು ಎಂದರು. ಇದಲ್ಲದೇ ಈಗಾಗಲೇ ರೈತರಿಗೆ ಕಬ್ಬಿನ ಬಗ್ಗೆ ಜಾಗೃತಿ ಮೂಡಿಸುವ ತರಬೇತಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸುಬ್ಬರಾಯ ಪಾಟೀಲ, ಸಂಘದ ಜಿಲ್ಲಾಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಇದ್ದರು.