ಸಾರಾಂಶ
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನಿರ್ಮಿಸಿರುವ ಮಳಿಗೆಗಳಿಗೆ ಪ್ರತ್ಯೇಕ ಬಾಡಿಗೆ ನಿಗದಿಪಡಿಸಿ, ಅವರವರ ಹೆಸರಿಗೆ ದಾಖಲೆ ಮಾಡಲು ಮತ್ತು ನೀರಿನ ಘಟಕವನ್ನು ಅದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಬೇಕು
ಕನ್ನಡಪ್ರಭ ವಾರ್ತೆ ಹಾಸನ
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನಿರ್ಮಿಸಿರುವ ಮಳಿಗೆಗಳಿಗೆ ಪ್ರತ್ಯೇಕ ಬಾಡಿಗೆ ನಿಗದಿಪಡಿಸಿ, ಅವರವರ ಹೆಸರಿಗೆ ದಾಖಲೆ ಮಾಡಲು ಮತ್ತು ನೀರಿನ ಘಟಕವನ್ನು ಅದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ನಗರ ಕಟ್ಟಿನಕೆರೆ ಮಾರುಕಟ್ಟೆ ಬಾಳೆಹಣ್ಣು ಮಾರಾಟಗಾರರ ಸಂಘ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡಗೆ ಮನವಿ ಸಲ್ಲಿಸಿತು.ಸಂಘದ ಅಧ್ಯಕ್ಷ ಸಮೀರ್ ಅಹಮದ್ ಮಾತನಾಡಿ, ನಗರದ ಕಟ್ಟಿಕನಕೆರೆ ಮಾರುಕಟ್ಟೆಯಲ್ಲಿ ೨೦೧೮ ರಲ್ಲಿ ನಗರಸಭೆವತಿಯಿಂದ ಸಣ್ಣಪುಟ್ಟ ಎಲ್ಲಾ ವರ್ಗಗಳ ವ್ಯಾಪಾರಸ್ಥರಿಗೆ ಸುಸಜ್ಜಿತವಾದ ವ್ಯಾಪಾರ ಮಾಡಲು ಅಂದಿನ ನಗರಸಭೆಯ ಅಧ್ಯಕ್ಷರಾಗಿದ್ದ ಎಚ್.ಎಸ್. ಅನಿಲ್ ಕುಮಾರ್ 290 ಅಂಗಡಿ ಮಳಿಗೆ ೫೦೫ ವಿಸ್ತೀರ್ಣದಲ್ಲಿ ನಿರ್ಮಿಸಿದ್ದಾರೆ ಎಂದರು.ಪ್ರಸುತ್ತ ನಗರಸಭೆವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಈ ಮಳಿಗೆಗಳಿಗೆ ನಿಗದಿಯಾಗಿರುವ ವರ್ತಕರ ಹೆಸರು ಅಧಿಕೃತವಾಗಿ ಅವರವರ ಹೆಸರಿಗೆ ದಾಖಲೆ ಮಾಡಿ ಹಾಗೂ ಮಳಿಗೆಗಳಿಗೆ ಪ್ರತ್ಯೇಕ ಬಾಡಿಗೆ ನಿಗದಿಪಡಿಸಬೇಕು. ಮಾರುಕಟ್ಟೆಯಲ್ಲಿ ನಗರಸಭೆ ವತಿಯಿಂದ ಸಾರ್ವಜನಿಕ ಉಪಯೋಗಕ್ಕೆಂದು ನೀರಿನ ಘಟಕ ಹೊಸದಾಗಿ ನಿರ್ಮಿಸಿ ಸುಮಾರು ಮೂರು ವರ್ಷಗಳು ಕಳೆದಿದೆ. ಇಲ್ಲಿಯವರೆವಿಗೂ ಚಾಲನೆ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ನಗರ ಕಟ್ಟಿನಕೆರೆ ಮಾರುಕಟ್ಟೆ ಬಾಳೆಹಣ್ಣು ಮಾರಾಟಗಾರರ ಸಂಘದ ಉಪಾಧ್ಯಕ್ಷ ಅಬ್ದೂಲ್ ಕರೀಂ, ಖಜಾಂಚಿ ಅನಂತರಾಮು, ಕಾರ್ಯದರ್ಶಿ ಫೈರೋಜ್ ಅಹಮದ್, ಸಂಚಾಲಕ ವೆಂಕಟೇಶ್, ಸದಸ್ಯರಾದ ನದೀಂ ಉಲ್ಲಾ, ಸುಹೀಲ್ ಪಾಷಾ, ಇಸ್ಮಾಯಿಲ್ ಮೋನು, ಮಹ್ಪೂಜ್ ಅಹಮದ್, ಮೀರ ಮೊಹಿದ್ದೀನ್ ಇದ್ದರು.