ಸಾರಾಂಶ
ತರೀಕೆರೆ, ಪ.ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ನಿವೇಶನ ಹಂಚಿಕೆಯಾಗಿರುವ ಪಟ್ಟಣದ ಸುಂದರೇಶ್ ಬಡಾವಣೆ ಯಲ್ಲಿರುವ ಕೆರೆ ಒತ್ತುವರಿಯಾದ ಪರಿಣಾಮ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ತಾಲೂಕು ಛಲವಾದಿ ಸಮಾಜ ಅಧ್ಯಕ್ಷ ಎಸ್.ಕೆ.ಸ್ವಾಮಿ ಒತ್ತಾಯಿಸಿದರು.
- ತರೀಕೆರೆಯಲ್ಲಿ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಎಸ್.ಕೆ.ಸ್ವಾಮಿ
ಕನ್ನಡಪ್ರಭ ವಾರ್ತೆ, ತರೀಕೆರೆಪ.ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ನಿವೇಶನ ಹಂಚಿಕೆಯಾಗಿರುವ ಪಟ್ಟಣದ ಸುಂದರೇಶ್ ಬಡಾವಣೆ ಯಲ್ಲಿರುವ ಕೆರೆ ಒತ್ತುವರಿಯಾದ ಪರಿಣಾಮ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ತಾಲೂಕು ಛಲವಾದಿ ಸಮಾಜ ಅಧ್ಯಕ್ಷ ಎಸ್.ಕೆ.ಸ್ವಾಮಿ ಒತ್ತಾಯಿಸಿದರು.
ತರೀಕೆರೆ ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್ ಅಧ್ಯಕ್ಷತೆಯಲ್ಲಿ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ , ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅನುಪಾಲನಾ ವರದಿ ಮಂಡಿಸುವ ಪ್ರಾರಂಭದಲ್ಲಿ ಮಾತನಾಡಿ ರುದ್ರಭೂಮಿಗೆ ಹೋಗುವ ರಸ್ತೆ ಯನ್ನು ತಾಲೂಕು ಅಡಳಿತ ಹಾಗೂ ಪುರಸಭೆಯವರು ಸರಿಪಡಿಸುವಂತೆ ಆಗ್ರಹಿಸಿದರು.ಕರ್ನಾಟಕ ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರ ಮುಖ್ಯ ರಸ್ತೆಯಿಂದ ಸ್ಮಶಾನದ ಮಾರ್ಗವಾಗಿ ಉಪ್ಪಾರ ಬಸವನಹಳ್ಳಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದರು. ಭಾವಿಕೆರೆ ಸಂತೆ ಮಾರ್ಕೆಟ್ಟಿನಲ್ಲಿ ವಾಸವಾಗಿದ್ದ 9 ಕುಟುಂಬಗಳನ್ನು ಅರಸಿಕೆರೆ ಕಾವಲು ಗ್ರಾಮಕ್ಕೆ ವರ್ಗಾಯಿಸಿ ಅವರಿಗೆ ಇದುವರೆಗೆ ನಿವೇಶನ ಹಕ್ಕುಪತ್ರ ವಿತರಿಸಿಲ್ಲ. ಕೂಡಲೇ ಹಕ್ಕು ಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.ಡಾ.ಬಿ. ಆರ್. ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ನಿವೇಶನ ಮಂಜೂರು ಮಾಡಬೇಕು. ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಇರುವ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ತಿಳಿಸಿದರು.ಎನ್.ಆರ್.ಪುರ ತಾಲೂಕು ರಾವೂರು ಸ.ನಂ.157, 158 ಮತ್ತು 159 ರಲ್ಲಿ ಹಾಗು ವಾಗಲಾಪುರ ಸ.ನಂ.26, 27 ಮತ್ತು 28ರಲ್ಲಿ ಹಾಗೂ ಸಿರಗಳಲೆ.ನಂ.126ರಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿರಿಸಿರುವ 141 ಎಕರೆ ಜಮೀನಿನಲ್ಲಿ 41 ಎಕರೆ ಸರ್ವೆ ಮಾಡಿ ನಕಾಶೆ ತಯಾರಿಸಿದ್ದು 18 ಜನರಿಗೆ ತಲಾ 3 ಎಕರೆಯಂತೆ ಮಂಜೂರು ಮಾಡಲು ಕಡತ ತಯಾರಿಸಲು ಸಭೆಯಲ್ಲಿ ಒತ್ತಾಯಿಸಿದರು.
ಮುಖಂಡ ಬಾಲರಾಜ್ ಮಾತನಾಡಿ ಋಷಿಪುರ ಸ.ನೆ.6ರಲ್ಲಿ ನಕಾಶೆ ದಾರಿ ಇದ್ದು ಸದರಿ ಜಾಗ ಬಿಡಿಸಿಕೊಡಿ ಎಂದು ಕೋರಿದರು. ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮಾತನಾಡಿ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಓಂಕಾರಪ್ಪ ಎಂ. ಮಾತನಾಡಿ ಸಭೆ ಯಲ್ಲಿ ದಲಿತರ ಸಮಸ್ಯೆಗಳು ಪರಿಹಾರವಾಗದೇ ಅನೇಕ ಸಮಸ್ಯೆ ಹಾಗೇಯೆ ಉಳಿದಿದೆ ಎಂದು ಕಡತವನ್ನು ಸಭೆ ಮುಂದಿಟ್ಟರು.ಉಪವಿಭಾಗೀಯ ಮಟ್ಟದ ದೌರ್ಜನ್ಯ ಉಸ್ತುವಾರಿ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ, ಮುಖಂಡರಾದ ಎನ್.ಆರ್. ಪುರದ ರಾಮು, ಮಂಜುನಾಥ್, ಹಾದಿಕೆರೆ ರಾಜು, ರಾಮಚಂದ್ರಪ್ಪ, ಟಿ.ಎಸ್.ಬಸವರಾಜ್, ಕೆ.ನಾಗರಾಜ್, ಜಿ.ಟಿ.ರಮೇಶ್, ಮಂಜಪ್ಪ ಮತ್ತಿತರರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.ತಹಸೀಲ್ದಾರ್ ವಿಶ್ವಜಿತ್ ಮೇಹತ, ಡಿವೈಎಸ್ ಪಿ ಎಚ್.ಪರುಶುರಾಮಪ್ಪ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಅಜ್ಜಂಪುರ ತಾಪಂ ಇಒ ವಿಜಯಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.-9ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್ ಅಧ್ಯಕ್ಷತೆಯಲ್ಲಿ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಭೆಯಲ್ಲಿ ತಹಸೀಲ್ದಾರ್ ವಿಶ್ವಜೀತ್ ಮೇಹತ, ಡಿವೈಎಸ್ಪಿ ಪರುಶುರಾಮಪ್ಪ ಎಚ್. ತಾಪಂ ಇಒ ಡಾ.ಆರ್.ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.