ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕೃಷ್ಣಾ ನದಿ ತೀರದಲ್ಲಿ ಪ್ರವಾಹ ನಿಯಂತ್ರಣ ಮಾಡಲು ಕಾಯಂ ನೀರು ಸಮರ್ಪಕ ನಿರ್ವಹನೆಗೆ ಶಾಶ್ವತವಾದ ಕರ್ನಾಟಕ ಮಹಾರಾಷ್ಟ್ರ ಮೇಲು ಉಸ್ತುವಾರಿ ಸಮಿತಿ ರಚನೆ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹಿಸಿದರು.ತಾಲೂಕಿನ ಮಾಂಜರಿ ಹಾಗೂ ಇಂಗಳಿ ಪ್ರವಾಹ ಪೀಡಿತ ಪ್ರದೇಶಕ್ಕೆ ಬೇಟ್ಟಿ ನೀಡಿ ಬಳಿಕ ಇಂಗಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ದೂರಾಗಲು ದಿಗ್ಗೇವಾಡಿ ಸೇತುವೆ (ಬ್ಯಾರೇಜ) ಶೀಘ್ರವಾಗಿ ಪೂರ್ಣವಾಗಬೇಕೆಂದರು.
ಕೆಆರ್‌ಐಡಿಎಲ್ ಯೋಜನೆಯಲ್ಲಿ ಮಂಜೂರಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ ಗ್ರಾಮಗಳ ಮಧ್ಯ ಕೃ?್ಣಾ ನದಿಗೆ ಅಡ್ಡಲಾಗಿ ಸೇತುವೆ,ಕೂಡು ರಸ್ತೆಗೆ 2018 ರಲ್ಲಿ ಟೆಂಡರ್ ನೀಡಿದ್ದು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಡಿಸೆಂಬರ್-2024 ನೀಡಿದ್ದಾರ ಆದರೆ ಇಲ್ಲಿಯವರೆಗೆ ಪ್ರತಿಶತ 72 ರಷ್ಟು ಪೂರ್ಣಗೊಂಡಿದೆ.ಬೆಳಗಾವಿ ಜಿಲ್ಲೆ ಅಧಣಿ ತಾಲ್ಲೂಕಿನ ಜುಗುಳ-ಚಿದ್ರಾಪುರ ಗ್ರಾಮಗಳ ನಡುವೆ ಕೃ?್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಟೆಂಡರ್‌ನ್ನು ಸಹ 2018ರಲ್ಲಿ ನೀಡಿದ್ದು ಇದಕ್ಕೆ ಗುತ್ತಿಗೆದಾರರಿಗೆ ಅಕ್ಟೋಬರ್-2024 ನೀಡಲಾಗಿದೆ.ಇದರು ಇಲ್ಲಿಯವರೆಗೆ ಪ್ರತಿಶತ 84 ರಷ್ಟು ಪೂರ್ಣಗೊಂಡಿದೆ ಎಂದರು. ಕುಡಚಿ ಸೇತುವೆಯು ಸಹ 2018ರಲ್ಲಿ ಗುತ್ತಿಗೆ ಕರೆದಿದ್ದು ಇದಕ್ಕೆ ಡಿಸೆಂಬರ್ 2024 ಕಾಲಾವಕಾಶ ನೀಡಲಾಗಿದೆ. ಈ ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಹಾಗೂ ಸೇತುವೆಗಳಿಗೆ ಕಾಂಕ್ರೇಟ್ ಡೆತ್ತಗಳನ್ನು ನಿರ್ಮಿಸಬೇಕು,ಮಣ್ಣಿನ ಬರಾವ ಹಾಕಿದಲ್ಲಿ ಹಿಂದಿನ ಗ್ರಾಮಗಳು ಹಿನ್ನಿರಿನಿಂದ ತೊಂದರೆ ಅನುಭವಿಸಬೇಕಾಗುತ್ತದೆ ಅದಕ್ಕಾಗಿ ಕೂಡಲೇ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಪವನ ಮಹಾಜನ. ಸಂಜು ಪಾಟೀಲ.ಅಜೀತ ದೇಸಾಯಿ. ಮಹಾವೀರ ಕಾತ್ರಾಳೆ.ಅಮರ ಯಾಧವ. ಅಣ್ಣಾಸಾಹೇಬ ಇಂಗಳೆ. ಸುನೀಲ ಪಾಟೋಳೆ ಉಪಸ್ಥಿತರಿದ್ದರು.