ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಜೋಡೆತ್ತಿನ ರೈತರು ತಮ್ಮ ಜೋಡೆತ್ತಿನ ಬಂಡಿಗಳೊಂದಿಗೆ ಗುರುವಾರ ಆಗಮಿಸಿ ಜೋಡೆತ್ತಿನ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ನಂದಿಹಾಳ ಪಿಯು ಗ್ರಾಮದ ಜೋಡೆತ್ತಿನ ರೈತರು ತಮ್ಮ ಜೋಡೆತ್ತಿನ ಬಂಡಿಗಳೊಂದಿಗೆ ಗುರುವಾರ ಆಗಮಿಸಿ ಜೋಡೆತ್ತಿನ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ತಾಲೂಕಿನ ನಂದಿಹಾಳ ಗ್ರಾಮದಿಂದ ಸುಮಾರು 30ಕ್ಕೂ ಹೆಚ್ಚಿನ ಜೋಡೆತ್ತಿನ ರೈತರು ಪಟ್ಟಣದ ಎಪಿಎಂಸಿಯಿಂದ ಜೋಡೆತ್ತಿನ ಬಂಡಿಗಳ ಮೆರವಣಿಗೆ ಆರಂಭಿಸಿ ಬಸವೇಶ್ವರ ವೃತ್ತ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಂದಿಹಾಳ ಪಿಯು ಗ್ರಾಮದ ಬಸವರಾಜ ಮನಗೂಳಿ, ಕರವೇ ಮುಖಂಡ ಅಶೋಕ ಹಾರಿವಾಳ ಮಾತನಾಡಿ, ಜೋಡೆತ್ತಿನ ಕೃಷಿಕರಿಂದ ವಿಕಾಸವಾದ ಬಯಲು ಸೀಮಯ ಗ್ರಾಮಗಳು ಜೋಡೆತ್ತಿನ ಕೃಷಿಕರಿಂದ ಮಾತ್ರ ಉಳಿಯಲು ಸಾಧ್ಯ. ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ನಾಶವಾದರೆ ಮುಂದೆ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನೆಗಳಿಂದ ತಿಳಿದುಬಂದಿದೆ. ಮೂರು ವರ್ಷಗಳಿಂದ ಜೋಡೆತ್ತು ಉಳಿಸಲು ಜಾಗೃತಿ ಮೂಡಿಸಲಾಗುತ್ತಿದೆ. ನಂದಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಸರ್ಕಾರ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹ ಧನ ನೀಡಬೇಕು. ರಾಜ್ಯ ಬಜೆಟ್‌ನಲ್ಲಿ ಪ್ರತಿಶತ ಶೇ.10ರಷ್ಟು ಜೋಡೆತ್ತಿನ ರೈತರಿಗೆ ಮೀಸಲಾತಿ ನೀಡಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಬಸವರಾಜ ಗಚ್ಚಿನವರ ಹಕ್ಕೊತ್ತಾಯ ಪತ್ರ ಓದಿದರು. ಅನಿಲ ಪವಾರ, ಬಸಣ್ಣ ದೇಸಾಯಿ,ಬಸವರಾಜ ಮನಗೂಳಿ, ಸಂತೋಷ ಕುಮಶಿ, ವಿಶ್ವನಾಥ ಮನಗೂಳಿ, ನಿಂಗೊಂಡ ಬೆಂಕಿ, ಶರಣಪ್ಪ ಬೆಂಕಿ, ಕಾಂತಪ್ಪ ಕರಡಿ, ಧರೆಪ್ಪ ಔರಸಂಗ, ಪುಟ್ಟು ಹಿರೇಕುರಬರ, ಬಸವರಾಜ ಕಾಳಗಿ, ಭೋಜು ಗಣಿ,ಬಸವರಾಜ ಜೋಗಿ, ನಾಗಪ್ಪ ಸಣಬೆಂಕಿ ಸೇರಿದಂತೆ ಇತರರು ಭಾಗವಹಿಸಿದ್ದರು.