ಶಾಸಕ ಎ. ಆರ್. ಕೃಷ್ಣಮೂರ್ತಿಗೆ ಸಚಿವ ಸ್ಥಾನ ನೀಡಲು ಆಗ್ರಹ

| Published : Jul 06 2025, 01:49 AM IST

ಸಾರಾಂಶ

ಶಾಸಕ ಎ. ಆರ್. ಕೃಷ್ಣಮೂರ್ತಿ ಜನಪ್ರಿಯ ನಾಯಕರು, ವಯಸ್ಸು, ಅನುಭವದಲ್ಲಿ ಹಿರಿಯರಾದ ಅವರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ವೀರಶೈವ ಮಹಾಸಭೆ ತಾಲೂಕು ಘಟಕದ ಉಪಾಧ್ಯಕ್ಷ ತಿಮ್ಮರಾಜಿಪುರ ರಾಜು ಒತ್ತಾಯಿಸಿದ್ದಾರೆ

ಕೊಳ್ಳೇಗಾಲ: ಶಾಸಕ ಎ. ಆರ್. ಕೃಷ್ಣಮೂರ್ತಿ ಜನಪ್ರಿಯ ನಾಯಕರು, ವಯಸ್ಸು, ಅನುಭವದಲ್ಲಿ ಹಿರಿಯರಾದ ಅವರಿಗೆ

ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ವೀರಶೈವ ಮಹಾಸಭೆ ತಾಲೂಕು ಘಟಕದ ಉಪಾಧ್ಯಕ್ಷ

ತಿಮ್ಮರಾಜಿಪುರ ರಾಜು ಒತ್ತಾಯಿಸಿದ್ದಾರೆ .

ಕೃಷ್ಣಮೂರ್ತಿ ಸಂತೇಮರಳ್ಳಿ ಕ್ಷೇತ್ರದಲ್ಲಿ ಸತತ ಎರಡು ಬಾರಿ ಹಾಗೂ ಕೊಳ್ಳೇಗಾಲದಲ್ಲಿ 1 ಬಾರಿ ಶಾಸಕರಾಗಿ ಆಯ್ಕೆಗೊಂಡು ಅನುಭವಿ ರಾಜಕಾರಣಿಯಾಗಿದ್ದಾರೆ. ಈ ಬಾರಿ ಅವರು ಅತ್ಯಧಿಕ ಮತಗಳಿಂದ ಗೆದ್ದು ದಾಖಲೆ ಬರೆದಿದ್ದಾರೆ, ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದಾಗಿ ಅವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಬೇಕು. ಶಾಸಕರು ವೀರಶೈವ ಸಮುಧಾಯ ಭವನಗಳ ನಿರ್ಮಾಣಕ್ಕೆ ಹಾಗೂ ಮುಂದುವರೆದ ಕಾಮಗಾರಿಗಳಿಗೆ ₹2.40 ಕೋಟಿ ಅನುದಾನ ನೀಡಿದ್ದಾರೆ. ಇದು ಸಂತಸದ ವಿಚಾರ, ಈ ಹಿನ್ನೆಲೆ ಅವರ ಕೈಬಲಪಡಿಸಲು ಹೈಕಮಾಂಡ್ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ