ಸಾರಾಂಶ
ಮಲೆಬೆನ್ನೂರು11 ನೇ ವಾರ್ಡ್ ನಿವಾಸಿಗಳು ನೀರಿನ ಟ್ಯಾಂಕ್ ಮತ್ತು ಭದ್ರಾ ಚಾನಲ್ ಪಕ್ಕದಲ್ಲಿ ಇರುವ ನಿವೇಶನದಲ್ಲಿ 35ವರ್ಷಗಳಿಂದ ವಾಸವಾಗಿದ್ದಾರೆ. ಆದ್ದರಿಂದ ಅವರಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಲೆಬೆನ್ನೂರು
ಮಲೆಬೆನ್ನೂರು11 ನೇ ವಾರ್ಡ್ ನಿವಾಸಿಗಳು ನೀರಿನ ಟ್ಯಾಂಕ್ ಮತ್ತು ಭದ್ರಾ ಚಾನಲ್ ಪಕ್ಕದಲ್ಲಿ ಇರುವ ನಿವೇಶನದಲ್ಲಿ 35ವರ್ಷಗಳಿಂದ ವಾಸವಾಗಿದ್ದಾರೆ. ಆದ್ದರಿಂದ ಅವರಿಗೆ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು. ನಾವು ವಾಸ ಮಾಡುವ ಮುನ್ನವೇ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಭಾಗ್ಯ ಜ್ಯೋತಿ ಮೀಟರ್ ಮತ್ತು ಪಡಿತರ ಚೀಟಿ ಪಡೆದಿದ್ದೇವೆ. ಯಾರೋ ಖಾಸಗಿ ವ್ಯಕ್ತಿಗಳು ನಮ್ಮ ನಿವೇಶನ ಬಿಟ್ಟು ಹೋಗಿ ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಭಜಕ್ಕನವರ್, ವಿವಾದಿತ ಸ್ಥಳವನ್ನು ನಿಮ್ಮ ಮನವಿ ಮೇರೆಗೆ ಅಳೆತೆ, ಹದ್ದುಬಸ್ತ್ ಮಾಡಿಕೊಡಲು ಭೂ ಅಳತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಆ ನಂತರ ವಸತಿ ರಹಿತರು, ನಿವೇಶನ ರಹಿತರ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲಾಗುತ್ತದೆ. ಅಲ್ಲಿಯವರೆಗೂ ಯಾವ ಭರವಸೆ ಕೊಡಲಿಕ್ಕಾಗಲ್ಲ ಎಂದು ತಿಳಿಸಿದರು.ನಿವಾಸಿಗಳಾದ ಕರಿಬಸಮ್ಮ, ದುಗ್ಗಮ್ಮ, ಲಕ್ಷ್ಮಮ್ಮ, ನಾಗಮ್ಮ, ಶಿವಮ್ಮ, ಕರಿಯಪ್ಪ, ಚಂದ್ರಪ್ಪ, ದುರುಗೇಶ್, ಭೋವಿ ಹನುಮಂತಪ್ಪ, ಜಗದೀಶ್, ಮಾತೆಂಗೆಮ್ಮ, ರಾಮಣ್ಣ, ಲಕ್ಷ್ಮಣ ಮತ್ತಿತರರು ಮನವಿ ಸಲ್ಲಿಸುವ ವೇಳೆ ಇದ್ದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಕೆ.ಜಿ ಲೋಕೇಶ್, ಹನುಮಂತಪ್ಪ ಹಾಜರಿದ್ದರು.