ಅಂಗನವಾಡಿ ನೌಕರರ ಕಾಯಂ ಮಾಡಲು ಆಗ್ರಹ

| Published : Jul 11 2025, 01:47 AM IST

ಸಾರಾಂಶ

ವಿವಿಧ ಮಾಹಿತಿ ಅಪ್‌ಲೊಡ್‌ಗಾಗಿ ಅಂಗನವಾಡಿ ಕೇಂದ್ರಗಳಿಗೆ ವೈ- ಫೈ ಸಂಪರ್ಕ ಮತ್ತು ಗುಣಮಟ್ಟದ ಮೊಬೈಲ್ ಪೋನ್ ಒದಗಿಸಬೇಕು.

ಹಾನಗಲ್ಲ: ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ₹26 ಸಾವಿರ ಕನಿಷ್ಠ ವೇತನ ಮತ್ತು ₹10 ಸಾವಿರ ಮಾಸಿನ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಅಂಗನವಾಡಿ ನೌಕರರು ಇಲ್ಲಿನ ವಿರಕ್ತಮಠದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕೆಲಹೊತ್ತು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ ರಸ್ತೆ ತಡೆ ನಡೆಸಿದರು. ಇದರಿಂದ ಪಟ್ಟಣದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ವಿವಿಧ ಮಾಹಿತಿ ಅಪ್‌ಲೊಡ್‌ಗಾಗಿ ಅಂಗನವಾಡಿ ಕೇಂದ್ರಗಳಿಗೆ ವೈ- ಫೈ ಸಂಪರ್ಕ ಮತ್ತು ಗುಣಮಟ್ಟದ ಮೊಬೈಲ್ ಪೋನ್ ಒದಗಿಸಬೇಕು. ಎಫ್‌ಆರ್‌ಎಸ್ ಕಡ್ಡಾಯ ಬೇಡ. ಹೊಸದಾಗಿ ತಂದಿರುವ ನಾಲ್ಕು ಕಾರ್ಮಿಕ ಕಾನೂನಿನ ಸಂಹಿತೆಗಳನ್ನು ರದ್ದುಗೊಳಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಆರಂಭಿಸಬೇಕು. ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಅಂಗನವಾಡಿ ನೌಕರರ ಸಂಘ(ಸಿಐಟಿಯು) ತಾಲೂಕು ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಉಪಾಧ್ಯಕ್ಷೆ ಮುತ್ತವ್ವ ಹರಿಜನ, ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಪ್ರಮುಖರಾದ ಮಂಗಳಾ ಬಡಿಗೇರ, ಸಿನಿತಾ ದೊಡ್ಡಮನಿ, ಕಮಲಾಕ್ಷಿ ಹೋತನಹಳ್ಳಿ, ರತ್ನಾ ಅಂಗರಗಟ್ಟಿ, ಅನುರಾಧಾ ಶೇಠ, ಮಂಜುಳಾ ವಡ್ಡರ, ಮಮತಾ ಅಣ್ಣಯ್ಯನವರ, ಸವಿತಾ ಮೂಲಿಮನಿ, ಶಾರದಾ ಶಿವಣ್ಣನವರ ಮತ್ತಿತರರು ಇದ್ದರು.ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ

ಹಿರೇಕೆರೂರು: ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನಲ್ಲಿ ನಿತ್ಯ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು, ಮರಳು ದಂಧೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ರಟ್ಟೀಹಳ್ಳಿ ತಾಲೂಕಿನಿಂದ ಹಿರೇಕೆರೂರು ಹೊಲಬಿಕೊಂಡ ಮಾರ್ಗವಾಗಿ ಶಿರಾಳಕೊಪ್ಪಕ್ಕೆ ಮರಳು ಸಾಗಾಣಿಕೆಯಾಗುತ್ತಿದ್ದು, ಬಡವರು ಮನೆ ಕಟ್ಟಲು, ರೈತರು ದನದ ಕೊಟ್ಟಿಗೆ ಮತ್ತು ದೇವಸ್ಥಾನಕ್ಕೆ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ರೈತರಿಗೆ ಸಿಗದ ಮರಳು ಬೇರೆ ಜಿಲ್ಲೆಗೆ ಸಾಗಾಣಿಕೆಯಾಗುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮರಳು ದಂಧೆಯ ಬಗ್ಗೆ ಕ್ರಮ ಕೈಗೊಂಡು ರೈತರು ಬಡವರಿಗೆ ಮರಳು ದೊರಕಿಸಿ ಕೊಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಹನುಮಂತಪ್ಪ ಬ. ದೀವಿಗಿಹಳ್ಳಿ, ರಾಜಶೇಖರ್ ಕ. ದೂದಿಹಳ್ಳಿ, ಮಹೇಶ್‌ಎನ್‌. ಕೊಟ್ಟೂರು,ಮಲ್ಲಮ್ಮ ಹೂ. ಹುಲ್ಲಿನಕೊಪ್ಪ, ನಾಗರತ್ನಮ್ಮ ಜ. ಬಡೆನಾಯ್ಕರ್, ಲಲಿತಮ್ಮ ಹಿರೇಮಠ, ಗುತ್ತೆವ್ವ ಸುಣಗಾರ, ಕಾವ್ಯ ಹುಡೇದ, ಜ್ಯೋತಿರಾಯಲವದಹಳ್ಳಿ ರಮೇಶ್ ಓಬಳೇರ, ರವಿ ಎಸ್. ಮಾಳಗೇರ, ಚಂದ್ರಯ್ಯ ಹಿರೇಮಠ ಉಪಸ್ಥಿತರಿದ್ದರು.