ನೂತನ ಜಿಲ್ಲಾಸ್ಪತ್ರೆಗೆ ಆಸ್ಕರ್‌ ಫರ್ನಾಂಡಿಸ್‌ ಹೆಸರಿಡಲು ಆಗ್ರಹ

| Published : Aug 03 2024, 12:41 AM IST

ನೂತನ ಜಿಲ್ಲಾಸ್ಪತ್ರೆಗೆ ಆಸ್ಕರ್‌ ಫರ್ನಾಂಡಿಸ್‌ ಹೆಸರಿಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾದ, 5 ಬಾರಿ ಉಡುಪಿಯ ಸ೦ಸದರಾಗಿ, 4 ಭಾರಿ ರಾಜ್ಯ ಸಭಾ ಸದಸ್ಯರಾದ ಹೆಮ್ಮೆಯ ಆಸ್ಕರ್ ಫರ್ನಾ೦ಡೀಸ್ ಹೆಸರನ್ನು ನೂತನವಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸಜ್ಜಿತವಾದ ಆಸ್ಪತ್ರೆಗೆ ಇಡುವಂತೆ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ಆಸ್ಪತ್ರೆಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸಜ್ಜಿತವಾದ ಆಸ್ಪತ್ರೆಗೆ ದಿ. ಆಸ್ಕರ್ ಫರ್ನಾ೦ಡಿಸ್ ಅವರ ಹೆಸರನ್ನಿಡುವಂತೆ ಉಡುಪಿ ಕಾಂಗ್ರೆಸ್ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾದ, 5 ಬಾರಿ ಉಡುಪಿಯ ಸ೦ಸದರಾಗಿ, 4 ಭಾರಿ ರಾಜ್ಯ ಸಭಾ ಸದಸ್ಯರಾದ ಹೆಮ್ಮೆಯ ಆಸ್ಕರ್ ಫರ್ನಾ೦ಡೀಸ್ ತಮ್ಮ ಸರಳ, ಸಜ್ಜನ ನಡೆನುಡಿಯಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಸದಾ ಉಳಿದಿದ್ದಾರೆ. ಅವರ ಹೆಸರನ್ನು ಜಿಲ್ಲಾಸ್ಪತ್ರೆಗೆ ಇಡುವ ಮೂಲಲಕ ಅವರ ಸೇವೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

ಸಮಾಜ ಸೇವಕ, ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಅವರೊಂದಿಗೆ ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಸಭಾ ಸಭಾಧ್ಯಕ್ಷ ಯು. ಟಿ ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಐವನ್ ಡಿಸೋಜ ಅವರಿಗೆ ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಮತ್ತುಇತರ ನಾಯಕರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೃಷ್ಣಮೂರ್ತಿಆಚಾರ್ಯ ತಿಳಿಸಿದ್ದಾರೆ.