Demand to pay salary, PF, ESI contributions
-ನೀರಾವರಿ ಇಲಾಖೆ ಹೊರಗುತ್ತಿಗೆ ಸೌಡಿ ನೌಕರರ ಮುಷ್ಕರ
--ಕನ್ನಡಪ್ರಭ ವಾರ್ತೆ ಭದ್ರಾವತಿ
ವೇತನ ಮತ್ತು ಪಿ.ಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ರ ತಾಲೂಕಿನ ಬಿಆರ್‌ಎಲ್‌ಬಿಸಿ ವಿಭಾಗದ ಮಿಲ್ಟ್ರಿ ಕ್ಯಾಂಪ್‌ನಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಅವರ ಕಚೇರಿ ಮುಂಭಾಗ ಇಲಾಖೆಯ ಹೊರಗುತ್ತಿಗೆ ಸೌಡಿ ನೌಕರರು ಮುಷ್ಕರ ನಡೆಸಿದರು.ಬಿಆರ್‌ಎಲ್‌ಬಿಸಿ ವಿಭಾಗದ ಬಿಆರ್‌ಪಿ-ನಂ.೧, ಡಿಬಿ ಹಳ್ಳಿ-ನಂ.೨ ಹಾಗೂ ಭದ್ರಾವತಿ-ನಂ.೩ರಲ್ಲಿ ಒಟ್ಟು ೩೫೦ ಹೊರಗುತ್ತಿಗೆ ಸೌಡಿ ನೌಕರರು ೨-೩ ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ೫ ತಿಂಗಳಿಂದ ಈ ನೌಕರರಿಗೆ ವೇತನ ಮತ್ತು ಪಿಎಪ್ ಹಾಗೂ ಇಎಸ್‌ಐ ವಂತಿಕೆ ಪಾವತಿಸಿಲ್ಲ. ವೇತನ ಇಲ್ಲದೆ ಬಡ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ವೇತನ ಮತ್ತು ಪಿಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವಂತೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಆಗ್ರಹಿಸಿದ್ದಾರೆ.ಹೊರಗುತ್ತಿಗೆ ಸೌಡಿ ನೌಕರರ ಹಲವಾರು ಬೇಡಿಕೆಗಳಿದ್ದು, ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಬಹುತೇಕ ಬೇಡಿಕೆಗಳು ಬಾಕಿ ಉಳಿದಿವೆ ಎಂದು ಸಂಘಟನೆ ಪ್ರಮುಖರು ಪತ್ರಿಕೆಯೊಂದಿಗೆ ಅಳಲು ತೋರ್ಪಡಿಸಿಕೊಂಡಿದ್ದಾರೆ. ವೇತನ ಮತ್ತು ಪಿ.ಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.
ಫೋಟೊಡಿ೧೮-ಬಿಡಿವಿಟಿ ಮತ್ತು (ಎ)
ವೇತನ ಮತ್ತು ಪಿ.ಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ರ ಭದ್ರಾವತಿ ತಾಲೂಕಿನ ಬಿಆರ್‌ಎಲ್‌ಬಿಸಿ ವಿಭಾಗದ ಮಿಲ್ಟ್ರಿ ಕ್ಯಾಂಪ್‌ನಲ್ಲಿರುವ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ ಮುಂಭಾಗ ಇಲಾಖೆಯ ಹೊರಗುತ್ತಿಗೆ ಸೌಡಿ ನೌಕರರು ಮುಷ್ಕರ ನಡೆಸಿದರು.